Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಂಡೆಮಠದ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ: ದೋಷಾರೋಪ ಪಟ್ಟಿ ಸಲ್ಲಿಸಿದ ಪೊಲೀಸರು

ಕಂಚುಗಲ್​ ಬಂಡೆಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ ಸಂಬಂಧ ಪೊಲೀಸರು ಚಾರ್ಜ್​ಶೀಟ್ ಸಲ್ಲಿಸಲಾಗಿದ್ದು, 72 ಸಾಕ್ಷಿಗಳನ್ನು ಪರಿಗಣಿಸಲಾಗಿದೆ. ಪ್ರಕರಣದಲ್ಲಿ ನಾಲ್ವರು ಆರೋಪಿಗಳು ಭಾಗಿಯಾಗಿದ್ದಾರೆ.

ಬಂಡೆಮಠದ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ: ದೋಷಾರೋಪ ಪಟ್ಟಿ ಸಲ್ಲಿಸಿದ ಪೊಲೀಸರು
ಬಸವಲಿಂಗ ಸ್ವಾಮೀಜಿ
Follow us
TV9 Web
| Updated By: Rakesh Nayak Manchi

Updated on: Dec 16, 2022 | 2:13 PM

ರಾಮನಗರ: ಕಂಚುಗಲ್​ ಬಂಡೆಮಠದ ಬಸವಲಿಂಗ ಸ್ವಾಮೀಜಿ (Bandematha Basava Linga Swamiji) ಆತ್ಮಹತ್ಯೆ ಪ್ರಕರಣ (Suicide case) ಸಂಬಂಧ ಮಾಗಡಿ ಠಾಣಾ ಪೊಲೀಸರು ಮಾಗಡಿ ಕೋರ್ಟ್​ಗೆ ದೋಷಾರೋಪಣ (Chargesheet) ಪಟ್ಟಿ ಸಲ್ಲಿಸಿದ್ದಾರೆ. ಸುಮಾರು 216 ಪುಟಗಳ ಚಾರ್ಜ್​ಶೀಟ್ ಸಲ್ಲಿಕೆ ಮಾಡಲಾಗಿದ್ದು, ಪ್ರಕರಣದಲ್ಲಿ ನಾಲ್ವರು ಆರೋಪಿಗಳು ಭಾಗಿಯಾಗಿದ್ದಾರೆ. ಪ್ರಕರಣ ಸಂಬಂಧ ಈವರೆಗೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಸಿಡಿ ಎಡಿಟ್​ ಮಾಡಿದ್ದ ಆರೋಪಿ ಬಿ.ಸಿ.ಸುರೇಶ್​ ತಲೆಮರೆಸಿಕೊಂಡಿದ್ದಾನೆ. ಆತ್ಮಹತ್ಯೆ ಕೇಸ್​ನಲ್ಲಿ 72 ಸಾಕ್ಷಿಗಳನ್ನು ಪರಿಗಣಿಸಲಾಗಿದೆ. ಸಿದ್ಧಗಂಗಾ ಶ್ರೀಗಳಿಗೆ ಕಣ್ಣೂರು‌ಶ್ರೀ ಹತ್ತಿರವಾಗಲು ವಿಡಿಯೋ ಮಾಡಿಸಿದ್ದರು. ಡೆತ್​ನೋಟ್ ಬರೆದಿರುವುದು ಪೊಲೀಸರಿಗೆ ತನಿಖೆಯಿಂದ ಗೊತ್ತಾಗಿದೆ ಎಂದು ರಾಮನಗರ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಬಾಬು ಹೇಳಿದ್ದಾರೆ.

ನ್ಯಾಯಾಲಯದಿಂದ ಚಾರ್ಜ್ ಶೀಟ್ ಸಿಸಿ ನಂಬರ್ ಬರಬೇಕಷ್ಟೆ. ಬಂಡೇಮಠದ ಸ್ವಾಮೀಜಿ ಸಿದ್ದಗಂಗಾ ಮಠದ ಹಿಂದಿನ ಸ್ವಾಮೀಜಿಗೆ ಆತ್ಮೀಯರಾಗಿದ್ದು, ಇದರಿಂದ ಕಣ್ಣೂರು ಶ್ರೀ ಅಸೂಯೆ ಬಂದಿತ್ತು. ಈ ದ್ವೇಷದ ಹಿನ್ನೆಲೆ ಸಿದ್ದಗಂಗಾ ಶ್ರೀಗೆ ಕಣ್ಣೂರು‌ ಶ್ರೀ ಹತ್ತಿರ ಆಗಲು ಯುವತಿಗೆ ಹೇಳಿ ವಿಡಿಯೋ ಮಾಡಿಸಿದ್ದಾರೆ. ಈ ಪ್ರಕರಣ ಸಂಬಂಧ ಐಪಿಸಿ ಸೆಕ್ಷನ್ 306 ರಡಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ: ಕಾರವಾರ: ಕಡಲತೀರದಲ್ಲಿ ಕಾಣಿಸಿಕೊಂಡ ಅಪರೂಪದ ಗೂಸ್ ಬಾರ್ನಕಲ್

ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆಗೆ ಇಳಿದಾಗ ಆತ್ಮಹತ್ಯೆಗೂ ಮುನ್ನ ಸ್ವಾಮಿಜಿ ಡೆತ್ ನೋಟ್ ಬರೆದಿಟ್ಟಿದ್ದರು ಎಂದು ತಿಳಿದುಬಂದಿದೆ. ಒಂದು ಮಠದವರಿಗೆ, ಇನ್ನೊಂದು ಪೊಲೀಸರಿಗೆ ಡೆತ್ ನೋಟ್ ಬರೆದಿರುವುದು ತನಿಖೆಯಿಂದ ಗೊತ್ತಾಗಿದೆ. ಫೆಬ್ರವರಿ 22 ರಿಂದ ಸ್ವಾಮಿಜಿ ವಿರುದ್ಧ ಷಡ್ಯಂತ ನಡೆಸಲು ಸಂಚು ರೂಪಿಸಲಾಗಿದೆ. ಏಪ್ರಿಲ್ ತಿಂಗಳಿನಲ್ಲಿ ವಿಡಿಯೋ ಕಾಲ್ ಮಾಡಿ ರೆಕಾರ್ಡ್ ಮಾಡಿದ್ದಾರೆ. ಆಕ್ಟೋಬರ್ 24 ರಂದು ಡೆತ್ ನೋಟ್ ಬರೆದಿಟ್ಟು ಬಂಡೇಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ