Ramdevar Betta: ಶ್ರೀರಾಮದೇವರ ಬೆಟ್ಟ ಅಭಿವೃದ್ಧಿ ‌ಸಮಿತಿ ರದ್ದುಗೊಳಿಸಿ ಜಿಲ್ಲಾಧಿಕಾರಿ ಆದೇಶ

|

Updated on: Mar 04, 2023 | 12:37 PM

ಶ್ರೀರಾಮದೇವರ ಬೆಟ್ಟ ಅಭಿವೃದ್ಧಿ ‌ಸಮಿತಿಯನ್ನು ರದ್ದುಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

Ramdevar Betta: ಶ್ರೀರಾಮದೇವರ ಬೆಟ್ಟ ಅಭಿವೃದ್ಧಿ ‌ಸಮಿತಿ ರದ್ದುಗೊಳಿಸಿ ಜಿಲ್ಲಾಧಿಕಾರಿ ಆದೇಶ
ಶ್ರೀ ರಾಮದೇವರ ಬೆಟ್ಟ
Follow us on

ರಾಮನಗರ: ಶ್ರೀರಾಮದೇವರ ಬೆಟ್ಟ ಅಭಿವೃದ್ಧಿ (Sri Ramdevar Betta Abhiruddi) ‌ಸಮಿತಿಯನ್ನು ರದ್ದುಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ರಾಮನಗರ ಜಿಲ್ಲಾ ಬಿಜೆಪಿ ಮುಖಂಡರ ನಡುವೆ ಜಟಾಪಟಿ ಹಿನ್ನೆಲೆ ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥ್ ನಾರಾಯಣ (Ashwat Narayan) ಸೂಚನೆ ಮೇರೆಗೆ ಮುಂದಿನ ಆದೇಶದವರೆಗೂ ರಾಮದೇವರ ಬೆಟ್ಟ ಅಭಿವೃದ್ಧಿ ‌ಸಮಿತಿಯನ್ನು ರುದ್ದು ಮಾಡಿ ಆದೇಶ ಹೊರಡಿಸಿದ್ದಾರೆ. ರಾಜ್ಯ ಸರ್ಕಾರ ಬೆಟ್ಟದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಮುಂದಾಗಿದೆ. ಈ ಹಿನ್ನೆಲೆ ರಾಮದೇವರ ಬೆಟ್ಟದ ಅಭಿವೃದ್ಧಿ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥ್ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು. ಆದರೆ ರಾಮನಗರ ಜಿಲ್ಲಾ ಬಿಜೆಪಿ ಮುಖಂಡರ ಮಧ್ಯೆ ಜಟಾಪಟಿ ಹಿನ್ನೆಲೆ ಸಮಿತಿಯನ್ನು ರದ್ದು ಮಾಡಲಾಗಿದೆ.

ರಾಮದೇವರ ಬೆಟ್ಟ ಅಭಿವೃದ್ಧಿಗೆ ಬಜೆಟ್​ನಲ್ಲಿ ಘೋಷಣೆ

ರಾಮನಗರದಲ್ಲೇ ರಾಮಮಂದಿರ ಕಟ್ಟುತ್ತೇವೆ. ಇದು ಕೇವಲ ಘೋಷಣೆ ಅಲ್ಲ. ರಾಮನಗರ ಸೇರಿದಂತೆ ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಬಾವುಟ ನೆಡುವ ಸಂಕಲ್ಪವಾಗಿದೆ. ಇದರ ಭಾಗವಾಗಿಯೇ ರಾಮನಗರದಲ್ಲಿ ರಾಮಮಂದಿರ ನಿರ್ಮಾಣ ಮಾಡ್ತೀವಿ ಎಂದು ಸಿಎಂ ಬೊಮ್ಮಾಯಿ ಬಜೆಟ್​ನಲ್ಲಿ ಘೋಷಣೆ ಮಾಡಿದ್ದರು.

ಕನಿಷ್ಠ 50 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯ

ರಾಮದೇವರ ಬೆಟ್ಟದಲ್ಲಿ ಪಟ್ಟಾಭಿರಾಮನ‌ ದೇವಸ್ಥಾನವಿದೆ. ಇದು ಮುಜರಾಯಿ ಇಲಾಖೆಯ ಜಾಗ ದೇವಸ್ಥಾನದ ಸುತ್ತ ಇರುವ 160 ಮೀಟರ್ ಜಾಗ ದೇವಸ್ಥಾನಕ್ಕೆ ಸೇರಿದ್ದು. ಇಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಪ್ಲಾನ್ ಇದೆ. ಒಂದೂವರೆ ತಿಂಗಳ ಹಿಂದೆ ಸರ್ವೆ ಆಗಿತ್ತು. ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಒಂದು ಕಮಿಟಿ ಆಗಿದೆ. ಇಲ್ಲಿ ಏನೇನು ಆಗಬೇಕು ಎಂದು ಪ್ಲಾನ್ ಆಗಿತ್ತು. 19 ಎಕರೆ ಮುಜರಾಯಿ ಇಲಾಖೆಗೆ ಸೇರಿದ ಜಾಗದಲ್ಲಿ ‌ದೇವಸ್ಥಾನ ಬರಲಿದೆ. ಒಂದು ಎಕರೆಯಷ್ಟು ಸಮತಟ್ಟಾದ ಜಾಗವಿದೆ. ವನ್ಯಜೀವಿಧಾಮ ಆಗುವಾಗಲೇ‌ ಮುಜರಾಯಿ ಇಲಾಖೆ ಜಾಗವನ್ನು ಗುರುತಿಸಲಾಗಿದೆ. ಆ ಜಾಗವನ್ನ ಬಿಟ್ಟು ವನ್ಯಜೀವಿಧಾಮ ಅಂತಾ ಹೇಳಲಾಗುತ್ತದೆ. ಅಲ್ಲಿ ಏನು ಕೆಲಸ ಆಗಬೇಕು ಎಂಬುದು ಕಮಿಟಿ ನಿರ್ಧಾರ ಮಾಡಲಿದೆ. ಪರಿಸರ ಸೂಕ್ಷ್ಮ ವಲಯದ ಮಧ್ಯದಲ್ಲಿ‌ ಇದೆ. ದಾಖಲೆಗಳ ಪ್ರಕಾರ ಜಾಗ ಗುರುತಿಸಲು ಮಾತ್ರ ಸೂಚಿಸಲಾಗಿದೆ.

ಅಯೋಧ್ಯಾ ಬಿಟ್ಟರೆ ಪವಿತ್ರ ಸ್ಥಳ ರಾಮದೇವರ ಬೆಟ್ಟ

ರಾಮದೇವರ ಬೆಟ್ಟದಲ್ಲಿ ಈಗಾಗಲೇ ರಾಮನ ದೇವಸ್ಥಾನ ಇದೆ. ಅಯೋಧ್ಯಾ ಬಿಟ್ಟರೆ ಪವಿತ್ರ ಸ್ಥಳ ರಾಮದೇವರ ಬೆಟ್ಟ. ಒಂದಿಷ್ಟು ನೆನೆಗುದಿಗೆ ಬಿದ್ದಿತ್ತು, ಉತ್ತಮ ವ್ಯವಸ್ಥೆ ನಿರ್ಮಾಣಕ್ಕೆ ಆ ಭಾಗದ ಜನರ ಒತ್ತಾಯ ಇತ್ತು. ಅದರಂತೆ ರಾಜ್ಯ ಸರ್ಕಾರ ಬಜೆಟ್​ನಲ್ಲಿ ಘೋಷಣೆ ಮಾಡಿದೆ. ಡಿಪಿಆರ್ ತಯಾರು ಮಾಡುತ್ತಿದ್ದೇವೆ. ಯಾವ ರೀತಿಯಲ್ಲಿ ಮಾಡಬೇಕು ಅಂತಾ ಕಾರ್ಯಕ್ರಮ ರೂಪಿಸಿ ಮಾಡಲು ಸರ್ಕಾರ ಬದ್ಧವಾಗಿದೆ. ಕನಿಷ್ಠ 50 ಕೋಟಿ ವೆಚ್ಚ ಆಗಲಿದೆ ಎಂದು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್. ಅಶ್ವಥ್ ನಾರಾಯಣ ಹೇಳಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ