ರಾಮನಗರ: ಕಂಚುಗಲ್ ಬಂಡೇಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿಗಳ ವಿಚಾರಣೆ ಮುಂದುವರಿದಿದೆ. ವಿಚಾರಣೆ ವೇಳೆ ಆರೋಪಿಗಳು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದು, ತಪ್ಪೊಪ್ಪಿಗೆ ಹೇಳಿಕೆಯನ್ನ ಪೊಲೀಸರು ವಿಡಿಯೋ ಮಾಡಿದ್ದಾರೆ. ಪೊಲೀಸ್ ಕಸ್ಟಡಿ ವೇಳೆ ತಪ್ಪು ಒಪ್ಪಿಕೊಂಡ ಮೂವರೂ ಆರೋಪಿಗಳು ವಿಡಿಯೋ ಮಾಡಿದ್ದು ತಪ್ಪಾಯ್ತ ಎಂದು ತಪ್ಪೊಪ್ಪಿದ್ದಾರೆ. ಸ್ವಾಮೀಜಿಯ ಮರ್ಯಾದೆ ತೆಗೆಯಲು ವಿಡಿಯೋ ಮಾಡಲಾಗಿತ್ತು. ಆದರೆ ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಅಂತ ಅಂದುಕೊಂಡಿರಲಿಲ್ಲ ಎಂದು ಆರೋಪಿಗಳು ಹೇಳಿದ್ದಾರೆ (Ramanagara Kanchugal Bandemutt Swamiji suicide).
ನೀಲಾಂಬಿಕೆ-ಬಂಡೇಮಠದ ಸ್ವಾಮೀಜಿ ವಿಡಿಯೋವನ್ನು ತುಮಕೂರಿನಲ್ಲಿ ಎಡಿಟ್ ಮಾಡಲಾಗಿತ್ತು. ಎ2 ನೀಲಾಂಬಿಕೆ ಅಲಿಯಾಸ್ ಚಂದು ಎರಡು ವರ್ಷಗಳಿಂದ ಬಂಡೇಮಠದ ಸ್ವಾಮೀಜಿ ಜೊತೆ ಸಂಪರ್ಕದಲ್ಲಿ ಇರುವ ಬಗ್ಗೆ ಮಾಹಿತಿಯಿದೆ. ಏಪ್ರಿಲ್ ನಿಂದ ವಿಡಿಯೋ ಮಾಡಿರುವುದಾಗಿ ಆರೋಪಿಗಳು ಹೇಳಿಕೆ ನೀಡಿದ್ದಾರೆ. ಜೂನ್ ನಲ್ಲೇ ವಿಡಿಯೋ ಮಾಡಿರೋ ಬಗ್ಗೆ ಬಂಡೇಮಠದ ಶ್ರೀಗೆ ತಿಳಿದಿತ್ತು. ಕೇವಲ ಬಂಡೇಮಠದ ಶ್ರೀ ಒಬ್ಬರೇ ಅಲ್ಲ, ನೀಲಾಂಬಿಕೆಗೆ ಇನ್ನೂ ಹಲವು ಸ್ವಾಮೀಜಿಗಳ ಜೊತೆ ಸಂಪರ್ಕ ಇರುವುದಾಗಿ ತಿಳಿದುಬಂದಿದೆ.
ಬಸವಲಿಂಗ ಸ್ವಾಮಿ ಆತ್ಮಹತ್ಯೆ ಪ್ರಕರಣದಲ್ಲಿ ಬಂಧಿತ ಮೂವರೂ ಆರೋಪಿಗಳ ಪೊಲೀಸ್ ಕಸ್ಟಡಿ ಇಂದು ಅಂತ್ಯವಾಗಲಿದೆ. ಮಾಗಡಿಯ ಒಂದನೇ ಜೆಎಂಎಫ್ಸಿ ನ್ಯಾಯಾಲಯಕ್ಕೆ ಇಂದು ಆರೋಪಿಗಳನ್ನು ಪೊಲೀಸರು ಇಂದು ಹಾಜರುಪಡಿಸಲಿದ್ದಾರೆ.
ಎ1 ಆರೋಪಿ ಕಣ್ಣೂರು ಮಠದ ಡಾ. ಮೃತ್ಯುಂಜಯ ಸ್ವಾಮೀಜಿ, ಎ2 ನೀಲಾಂಬಿಕೆ ಅಲಿಯಾಸ್ ಚಂದು ಮತ್ತು ಎ3 ನಿವೃತ್ತ ಶಿಕ್ಷಕ ಮಹದೇವಯ್ಯ, ಅಕ್ಟೋಬರ್ 31ರಂದು ಮೂವರು ಆರೋಪಿಗಳನ್ನ ಪೊಲೀಸರು ಕಸ್ಟಡಿಗೆ ಪಡೆದಿದ್ದರು. ಕಸ್ಟಡಿಗೆ ಪಡೆದಿದ್ದ ವೇಳೆ ಪೊಲೀಸರು ಹಲವು ಮಾಹಿತಿ ಸಂಗ್ರಹಿಸಿದ್ದರೆ, ಮತ್ತೊಂದೆಡೆ ಜಾಮೀನಿಗಾಗಿ ಆರೋಪಿಗಳು ಅರ್ಜಿ ಸಲ್ಲಿಸಿದ್ದಾರೆ.
ನೀಲಾಂಬಿಕೆ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್:
ಕಂಚುಗಲ್ ಬಂಡೆಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣದಲ್ಲಿ ಮೂವರೂ ಆರೋಪಿಗಳನ್ನು ನವೆಂಬರ್ 15ರವರೆಗೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿಗಳನ್ನು ಮಾಗಡಿ ಪೊಲೀಸರು ಇಂದು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದರು.
ಎ1 ಕಣ್ಣೂರು ಮಠದ ಡಾ. ಮೃತ್ಯುಂಜಯಶ್ರೀ, ಎ2 ನೀಲಾಂಬಿಕೆ ಮತ್ತು ಎ3 ಮಹದೇವಯ್ಯನನ್ನು ನ್ಯಾಯಾಂಗ ಬಂಧನಕ್ಕೆ ನೀಡಿ ಮಾಗಡಿಯ ಒಂದನೇ ಜೆಎಂಎಫ್ಸಿ ನ್ಯಾಯಾಲಯ ಆದೇಶ ನೀಡಿದೆ. ಡಾ. ಮೃತ್ಯುಂಜಯಶ್ರೀ ಮತ್ತು ಮಹದೇವಯ್ಯನನ್ನು ರಾಮನಗರ ಜೈಲಿಗೆ ಶಿಫ್ಟ್ ಮಾಡಲಾಗಿದೆ. 2ನೇ ಆರೋಪಿ ನೀಲಾಂಬಿಕೆ(ಚಂದು)ಳನ್ನು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗಿದೆ.
Published On - 11:15 am, Sat, 5 November 22