ರಾಮನಗರ, ಜುಲೈ 20: ಹರಿದ ಧ್ವಜ (national flag) ವನ್ನು ಹಾರಾಟ ಮಾಡುವುದು ಧ್ವಜಸಂಹಿತೆಯ ಪ್ರಕಾರ ನಿಷೇಧ. ಆದರೆ ಜಿಲ್ಲಾಧಿಕಾರಿ ಕಚೇರಿಯಿಂದಲೇ ಧ್ವಜಸಂಹಿತೆ ಉಲ್ಲಂಘನೆ ಮಾಡಿರುವಂತಹ ಘಟನೆ ಒಂದು ಜಿಲ್ಲೆಯಲ್ಲಿ ಕಂಡುಬಂದಿದೆ. ರಾಮನಗರ ಜಿಲ್ಲಾಧಿಕಾರಿ ಕಚೇರಿ ಮೇಲೆ ಹರಿದಿರುವ ರಾಷ್ಟ್ರಧ್ವಜ ಹಾರುತ್ತಿದೆ. ಜಿಲ್ಲಾ ಆಡಳಿತದ ಶಕ್ತಿ ಕೇಂದ್ರವಾಗಿರುವ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹತ್ತಾರು ಇಲಾಖೆಗಳಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ರತಿದಿನ ಧ್ವಜಾರೋಹಣ ಮತ್ತು ಅವರೋಹಣ ಮಾಡುವಾಗಲೂ ಧ್ವಜ ಹರಿದಿರುವುದನ್ನು ಜಿಲ್ಲಾಡಳಿತ ಗಮನಿಸದೆ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದು, ಕ್ರಮಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಹರಿದಿರುವ ಧ್ವಜ ಹಾರಿಸಬಾರದು ಎಂದು ನಿಯಮಾವಳಿ ಇದೆ. ಒಂದು ವೇಳೆ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದರೆ ಶಿಕ್ಷೆಗೂ ಗುರಿ ಆಗುವ ಸಾಧ್ಯತೆ ಇದೆ.
ಇದನ್ನೂ ಓದಿ: Mysuru News: ಮೈಸೂರಿನಲ್ಲಿ ಮುಂದುವರಿದ ಪುಂಡರ ಅಟ್ಟಹಾಸ; ವಿವಿಧ ರಸ್ತೆಗಳಲ್ಲಿ ಪುಂಡು ಪೋಕರಿಗಳಿಂದ ಬೈಕ್ ವ್ಹೀಲಿಂಗ್
ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಪೊಲೀಸ್ ದಂಡಯಾತ್ರೆ ಮುಂದುವರೆದಿದ್ದು, 15 ದಿನದಲ್ಲಿ 162400 ದಂಡ ವಸೂಲಿ ಮಾಡಲಾಗಿದೆ. 2340ಸಂಚಾರಿ ಉಲ್ಲಂಘನೆ ಕೇಸ್ ದಾಖಲಾಗಿದೆ. 887 ಓವರ್ ಸ್ಪೀಡ್, 580ಲೇನ್ ಡಿಸಿಪ್ಲೇನ್, 189 ಸೀಟ್ ಬೆಲ್ಟ್ ಧರಿಸದೇ ಇರುವುದು, 224 ಹೆಲ್ಮೆಟ್ ರಹಿತ ಕೇಸ್ ದಾಖಲು ಮಾಡಲಾಗಿದೆ.
ಇದನ್ನೂ ಓದಿ: Bengaluru-Mysore Expressway Accident: ಮೊದಲ ಹಂತದ ಸಮೀಕ್ಷೆ ಪೂರ್ಣಗೊಳಿಸಿದ ಎನ್ಹೆಚ್ಎಐನ ವಿಶೇಷ ಸಮಿತಿ
ವೇಗಕ್ಕೆ ಬ್ರೇಕ್ ಬಿದ್ದ ನಂತರ ಅಪಘಾತಗಳ ಸಂಖ್ಯೆ ತುಸು ಇಳಿಮುಖವಾಗಿದ್ದು, ಕಳೆದ 20 ದಿನಗಳಿಂದ ರಾಮನಗರ ಪೊಲೀಸರ ಕಾರ್ಯಾಚರಣೆ ನಡೆಯುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:11 pm, Thu, 20 July 23