Ramanagara News: ಮಹಿಳೆ ಮೇಲೆ ದಾಳಿ ಮಾಡಿದ ರಾಷ್ಟ್ರೀಯ ಪಕ್ಷಿ ನವಿಲು: ಅರಣ್ಯ ಇಲಾಖೆಗೆ ದೂರು
ಮನೆಯ ಹಿಂಭಾಗ ಕೆಲಸ ಮಾಡುತ್ತಿದ್ದ ವೇಳೆ ನವಿಲು ದಾಳಿ ಮಾಡಿ ಗಾಯಗೊಳಿಸಿದೆ ಎಂದು ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಅರಳಾಳುಸಂದ್ರ ಗ್ರಾಮದ ಲಿಂಗಮ್ಮ ಎನ್ನುವ ಮಹಿಳೆ ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ.
ರಾಮನಗರ: ರಾಷ್ಟ್ರಪ್ರಾಣಿ ಹುಲಿ ಮಾನವರ ಮೇಲೆ ಅಟ್ಯಾಕ್ ಮಾಡುವುದನ್ನು ಕೇಳಿದ್ದೇವೆ. ಆದರೆ ರಾಷ್ಟ್ರಪಕ್ಷಿ ಆಕ್ರಮಣ ಮಾಡಿಡುವುದನ್ನು ಕೇಳಿದ್ದೀರಾ? ಹೌದು ರಾಷ್ಟ್ರೀಯ ಪಕ್ಷಿ ನವಿಲು (peacock) ಮಹಿಳೆಯೊಬ್ಬರ ಮೇಲೆ ಅಟ್ಯಾಕ್ ಮಾಡಿದ್ದು, ವಿಚಾರ ಠಾಣೆವರೆಗೂ ಹೋಗಿದೆ. ಸದ್ಯ ಇಂಥಾದ್ದೊಂದು ಅಪರೂಪದಲ್ಲಿ ಅಪರೂಪವಾದ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣತಾಲೂಕಿನ ಅರಳಾಳುಸಂದ್ರ ಗ್ರಾಮದಲ್ಲಿ ಕಂಡುಬಂದಿದೆ.
ಲಿಂಗಮ್ಮ ಎಂಬುವವರ ಮೇಲೆ ಅಟ್ಯಾಕ್ ಮಾಡಿರುವ ಗಂಡು ನವಿಲು ಹಣೆ ಮತ್ತು ತಲೆಗೆ ಕುಕ್ಕಿ ಗಾಯಗೊಳಿಸಿದೆ. ಸಾಮಾನ್ಯವಾಗಿ ಮಾನವರನ್ನು ಕಂಡರೆ ದೂರು ಇರುವ ನವಿಲು, ಯಾಕೆ ಅಟ್ಯಾಕ್ ಮಾಡಿದೆ ಎನ್ನುವ ಕುರಿತಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ವೈದ್ಯರು ತಲೆ ಕೆಡಿಸಿಕೊಂಡಿದ್ದಾರೆ.
ಲಿಂಗಮ್ಮ ತಮ್ಮ ಮನೆಯ ಹಿಂಭಾಗದಲ್ಲಿ ಕೆಲಸ ಮಾಡುವ ವೇಳೆ ನೇರವಾಗಿ ಅವರ ಬಳಿ ಬಂದ ನವಿಲು ದಾಳಿ ಮಾಡಿ ಹಾರಿ ಹೋಗಿ ಮನೆಯ ಮಾಳಿಗೆ ಮೇಲೆ ಕುಳಿತುಕೊಂಡಿದೆ. ನವಿಲು ದಾಳಿ ಮಾಡಿರುವ ಕಾರಣ ಅದರ ವಿರುದ್ದ ಚನ್ನಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿದೆ.
ಇದನ್ನೂ ಓದಿ: ರಾಮನಗರ: ಚಾಮುಂಡೇಶ್ವರಿ ಕರಗ ಉತ್ಸವಕ್ಕೆ ಅಟ್ಟಿಕಾ ಗೋಲ್ಡ್ ಕಂಪನಿಯಿಂದ ದೇಣಿಗೆ ವಿವಾದ; ಶಾಸಕರಿಂದ ಕ್ರಮದ ಭರವಸೆ
ನಾಲ್ಕೈದು ದಿನಗಳಿಂದ ಮನೆ ಸದಸ್ಯರನ್ನು ಗಮನಿಸುತ್ತಿದ್ದ ನವಿಲು ಏಕಾಏಕಿ ದಾಳಿ ಮಾಡುತ್ತಿರುವುದರಿಂ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಅಲ್ಲದೆ ದಾಳಿ ಮಾಡಿದ ನವಿಲನ್ನು ಕೂಡಲೇ ಸ್ಥಳಾಂತರ ಮಾಡಬೇಕು. ಈ ನವಿಲಿನಿಂದ ನಮಗೆ ಬಹಳ ತೊಂದರೆ ಇದೆ ಅಂತ ದೂರು ನೀಡಿದ್ದಾರೆ.
ರಾಷ್ಟ್ರೀಯ ಪಕ್ಷಿ ನವಿಲು ಆದ್ದರಿಂದ ನವಿಲಿಗೆ ಏನಾದರೂ ತೊಂದರೆ ಮಾಡಿದರೆ ಅರಣ್ಯ ಇಲಾಖೆ ಮನುಷ್ಯರಿಗೆ ದಂಡ ಹಾಕುತ್ತೆ. ಅದೇ ನವಿಲು ಮನುಷ್ಯರ ಮೇಲೆ ಈಗ ಅಟ್ಯಾಕ್ ಮಾಡಿದೆ ಅದಕ್ಕೆ ಏನ್ ಮಾಡುತ್ತಾರೆ ಅಂತ ಅರಣ್ಯ ಇಲಾಖೆ ಅಧಿಕಾರಿಗಳ ಬಳಿ ಮಹಿಳೆ ಕುಟುಂಬಸ್ಥರು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ವಲಯ ಅರಣ್ಯಾಧಿಕಾರಿ ಕಿರಣ್ ಅವರು ನವಿಲಿನ ದಾಳಿಯ ಕಾರಣ ಆಗಿರುವ ನಷ್ಟವನ್ನು ಅಂದರೆ ಆಸ್ಪತ್ರೆಯ ಬಿಲ್ನ್ನು ತಾವೇ ಭರಿಸುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: Ramanagara News: ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇಯಲ್ಲಿ ಕೆಎಸ್ಆರ್ಟಿಸಿ ಬಸ್, ಗೂಡ್ಸ್ ವಾಹನ ಡಿಕ್ಕಿ; ಚಾಲಕ ಸಾವು
ಈ ಘಟನೆಗೆ ಸಂಬಂಧಿಸಿದಂತೆ ಅಟ್ಯಾಕ್ ಮಾಡಿರುವ ನವಿಲ ಮೇಲೆ ನಿಗಾ ಇಟ್ಟಿರುವ ಅರಣ್ಯಾಧಿಕಾರಿಗಳು ಯಾಕೆ ಮನುಷ್ಯರ ಮೇಲೆ ನವಿಲು ಅಟ್ಯಾಕ್ ಮಾಡಿದೆ ಎನ್ನುವ ಕುರಿತಾಗಿ ಅಧ್ಯಯನ ನಡೆಸುತ್ತಿದ್ದಾರೆ. ಇದು ಅಕಸ್ಮಾತ್ ಆಗಿ ನಡೆದಿರುವ ಘಟನೆನಾ ಅಥವಾ ನವಿಲುಗಳ ಚಾರಿತ್ರ್ಯಿಕ ಬದಲಾವಣೆ ಏನಾದರೂ ಆಗುತ್ತೀದೆಯಾ ಅಂತ ವೈಜ್ಞಾನಿಕ ಪರೀಕ್ಷೆಗೂ ಮುಂದಾಗಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.