ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇನಲ್ಲಿ ಟೋಲ್ ಜಗಳ: ಸದನದಲ್ಲಿ ಪ್ರಸ್ತಾಪಿಸಿ ಪ್ರತ್ಯೇಕ ಲೈನ್ ಡಿಮ್ಯಾಂಡ್ಗೆ ಮುಂದಾದ ಶಾಸಕ ನರೇಂದ್ರಸ್ವಾಮಿ
ಜೂನ್ ತಿಂಗಳಲ್ಲಿ ತಮ್ಮ ಜೊತೆ ನಡೆದ ಟೋಲ್ ಜಗಳವನ್ನು ಸದನಕ್ಕೆ ತರಲು ಮುಂದಾಗಿದ್ದಾರೆ. ಟೋಲ್ ಕಿರಿಕ್ ಬೆನ್ನಲ್ಲೇ ಹೊಸ ಡಿಮ್ಯಾಂಡ್ ಮುಂದಿಡಲು ಶಾಸಕ ನರೇಂದ್ರಸ್ವಾಮಿ ಚಿಂತಿಸಿದ್ದಾರೆ.
ಬೆಂಗಳೂರು: ಬೆಂಗಳೂರು-ಮೈಸೂರು ನೂತನ ದಶಪಥ ಹೆದ್ದಾರಿ(Bengaluru Mysuru Expressway) ಒಂದಲ್ಲಾ ಒಂದು ಕಾರಣದಿಂದ ಸುದ್ದಿಯಾಗುತ್ತಲೇ ಇದೆ. ಒಂದಿಲ್ಲೊಂದು ವಿವಾದ, ಅಪಘಾತ, ಗಲಾಟೆ, ಸಿಬ್ಬಂದಿಗಳ ದರ್ಪ ನಡೆಯುತ್ತಲೇ ಇದೆ. ಆದ್ರೆ ಈಗ ಸಾರ್ವಜನಿಕರಿಗೆ ಟೋಲ್ ಬರೆ ನಡುವೆ, ಶಾಸಕರಿಗೆ ಪ್ರತ್ಯೇಕ ಲೈನ್ ನೀಡುವ ಬಗ್ಗೆ ಶಾಸಕ ಪಿ.ಎಂ ನರೇಂದ್ರಸ್ವಾಮಿ(PM Narendra swamy) ಪ್ರಸ್ತಾಪಿಸಲು ಮುಂದಾಗಿದ್ದಾರೆ. ಜೂನ್ ತಿಂಗಳಲ್ಲಿ ತಮ್ಮ ಜೊತೆ ನಡೆದ ಟೋಲ್ ಜಗಳವನ್ನು ಸದನಕ್ಕೆ ತರಲು ಮುಂದಾಗಿದ್ದಾರೆ. ಟೋಲ್ ಕಿರಿಕ್ ಬೆನ್ನಲ್ಲೇ ಹೊಸ ಡಿಮ್ಯಾಂಡ್ ಮುಂದಿಡಲು ಶಾಸಕ ನರೇಂದ್ರಸ್ವಾಮಿ ಚಿಂತಿಸಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಮಳವಳ್ಳಿ ಶಾಸಕ ಪಿ.ಎಂ ನರೇಂದ್ರಸ್ವಾಮಿ ಜೊತೆ ಕುಂಬಳಗೂಡು ಬಳಿಯ ಕಣಮಿಣಿಕಿ ಟೋಲ್ ಪ್ಲಾಜಾ ಸಿಬ್ಬಂದಿ ಕಿರಿಕ್ ಮಾಡಿಕೊಂಡಿದ್ದರು. ಶಾಸಕರಿಗೆ ಅವಾಜ್ ಹಾಕಿದ್ದರು. ಆದ್ದರಿಂದ ಟೋಲ್ ಜಗಳ ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡಲು ಶಾಸಕ ನರೇಂದ್ರಸ್ವಾಮಿ ಮುಂದಾಗಿದ್ದಾರೆ. ಇಂದು ಸದನದಲ್ಲಿ ಕಿರಿಕ್ ಬಗ್ಗೆ ಗಮನ ಸೆಳೆಯಲಿದ್ದಾರೆ. ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿರುವ ಟೋಲ್ ಸಿಬ್ಬಂದಿ ಶಾಸಕರ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ. ಹಾಗಾಗಿ ರಾಜ್ಯದ ಎಲ್ಲಾ ಟೋಲ್ಗಳಲ್ಲಿ ಶಾಸಕರ ಪಾಸ್ಗಳನ್ನು ಸ್ಕ್ಯಾನಿಂಗ್ ಮಾಡುವ ವ್ಯವಸ್ಥೆ ಮಾಡಬೇಕು. ಸಂಪೂರ್ಣವಾಗಿ ಡಿಜಿಟಲೈಸೇಷನ್ ಮಾಡಬೇಕು. ಜೊತೆಗೆ ಶಾಸಕರಿಗೆ ಪ್ರತ್ಯೇಕ ಲೇನ್ ಮಾಡಬೇಕು. ಈ ಬಗ್ಗೆ ಲೋಕೋಪಯೋಗಿ ಸಚಿವರ ಗಮನ ಸೆಳೆಯಲು ನರೇಂದ್ರಸ್ವಾಮಿ ಮುಂದಾಗಿದ್ದಾರೆ.
ಇದನ್ನೂ ಓದಿ: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇ ಟೋಲ್ ಬಳಿ ಶಾಸಕರ ಜೊತೆ ಟೋಲ್ ಸಿಬ್ಬಂದಿ ಕಿರಿಕ್
ಘಟನೆ ವಿವರ
ಮಂಡ್ಯ ಜಿಲ್ಲೆ ಮಳವಳ್ಳಿ ಕಾಂಗ್ರೆಸ್ ಶಾಸಕ ನರೇಂದ್ರ ಸ್ವಾಮಿ ಅವರು ಜೂನ್ 4 ರಂದು ಸಂಜೆ 5 ಗಂಟೆ ಸುಮಾರಿಗೆ ಮಳವಳ್ಳಿಯಿಂದ ಬೆಂಗಳೂರಿಗೆ ಹೊರಟಿದ್ದರು. ಈ ವೇಳೆ ರಾಮನಗರ ತಾಲೂಕಿನ ಶೇಷಗಿರಿಹಳ್ಳಿ ಟೋಲ್ ಪ್ಲಾಜಾ ಬಳಿ ಸಿಬ್ಬಂದಿಗಳು ಶಾಸಕನ ಕಾರನ್ನ ಅಡ್ಡಗಟ್ಟಿ ಟೋಲ್ ಕಟ್ಟುವಂತೆ ಹೇಳಿದ್ದಾರೆ. ಈ ವೇಳೆ ಕಾರಿನ ಚಾಲಕ ಇದು ಶಾಸಕರ ಕಾರು, ಕಾರಿಗೆ ಪಾಸ್ ಇದೆ ಎಂದರು ಕೇಳದ ಸಿಬ್ಬಂದಿ, ಶಾಸಕರ ಐಡಿ ಕಾರ್ಡ್ ಕೊಡುವಂತೆ ಕೇಳಿದ್ದಾರೆ. ಸಮಾಧಾನದಿಂದಲೇ ಚಾಲಕ ಹೇಳಿದ್ರು ಕೇಳಿಲ್ಲ. ಈ ವೇಳೆ ಶಾಸಕ ನರೇಂದ್ರ ಸ್ವಾಮಿ ಕೆಳಗೆ ಇಳಿದು ಬಂದಿದ್ದಾರೆ. ನಾನು ಶಾಸಕ ಪೊಲೀಸರಿಗೆ ತಿಳಿಸುತ್ತೇನೆ ಎಂದಿದ್ದಾರೆ. ಶಾಸಕರ ಮಾತಿಗೂ ಕೇಳದ ಸಿಬ್ಬಂದಿ ಯಾವ ಪೊಲೀಸರು ಬೇಕಾದರೂ ಬರಲಿ, ನಾನು ನೋಡಿರದ ಪೊಲೀಸಾ. ನಿಮ್ಮನ್ನ ಹೈವೆಯಲ್ಲಿ ಬಿಟ್ಟಿ, ಫ್ರಿಯಾಗಿ ಬಿಡ್ತಿದ್ದೀವಿ ಎಂದು ಏರು ಧ್ವನಿಯಲ್ಲಿಯೇ ಅವಾಜ್ ಹಾಕಿದ್ದಾರೆ. ಇದರಿಂದ ಬೇಸರಗೊಂಡಿರುವ ಶಾಸನ ನರೇಂದ್ರಸ್ವಾಮಿ ಸದನದಲ್ಲಿ ಈ ಬಗ್ಗೆ ಪ್ರಸ್ತಾಪಿಸಿ ಶಾಸಕರಿಗೆ ಪ್ತತ್ಯೇಕ ಲೈಕ್ ವ್ಯವಸ್ಥೆಗೆ ಒತ್ತಾಯಿಸಲಿದ್ದಾರೆ.
ರಾಮನಗರಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 11:30 am, Tue, 4 July 23