ರಾಮನಗರ: ಕೌಟುಂಬಿಕ ಕಲಹ ಹಿನ್ನೆಲೆ ತಾಯಿ, ಮಗ ಆತ್ಮಹತ್ಯೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jan 14, 2023 | 10:58 AM

ನಗರದ ಕುಮಾರಸ್ವಾಮಿ ‌ಬಡಾವಣೆಯಲ್ಲಿರುವ ತಾಯಿ ವಿಜಯಲಕ್ಷ್ಮೀ(50) ಹಾಗೂ ಮಗ ಹರ್ಷ(25)ನ ನಡುವೆ ಜಗಳವಾಗಿದ್ದು ತಾಯಿ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರಾಮನಗರ: ಕೌಟುಂಬಿಕ ಕಲಹ ಹಿನ್ನೆಲೆ ತಾಯಿ, ಮಗ ಆತ್ಮಹತ್ಯೆ
ಮೃತ ತಾಯಿ, ಮಗ
Follow us on

ರಾಮನಗರ: ನಗರದ ಕುಮಾರಸ್ವಾಮಿ ‌ಬಡಾವಣೆಯಲ್ಲಿ ವಾಸವಿದ್ದ ತಾಯಿ ವಿಜಯಲಕ್ಷ್ಮೀ(50), ಮಗ ಹರ್ಷ(25) ನ ನಡುವೆ ರಾತ್ರಿ ಊಟದ ವಿಚಾರಕ್ಕೆ ಸಂಬಂಧಿಸಿ ತಾಯಿ, ಮಗನ ನಡುವೆ ಜಗಳವಾಗಿದೆ. ಇದರಿಂದ ಮನನೊಂದು ಮನೆ ಬಳಿಯ ನೀರಿನ ಸಂಪಿಗೆ ಬಿದ್ದು ವಿಜಯಲಕ್ಷ್ಮೀ ಆತ್ಮಹತ್ಯೆ ಮಾಡಿಕೊಂಡಿದ್ದು ಆಸ್ಪತ್ರೆಗೆ ಸೇರಿಸುವ ಮಾರ್ಗ ಮಧ್ಯೆದಲ್ಲಿ ತಾಯಿ ಸಾವನ್ನಪ್ಪಿದ್ದಾಳೆ. ತಾಯಿಯ ಸಾವಿನ ವಿಚಾರ ತಿಳಿದ ಮಗ ಹರ್ಷ ಕೂಡ ನೇಣಿಗೆ ಶರಣಾಗಿದ್ದಾನೆ. ಈ ಬಗ್ಗೆ ಐಜೂರು‌ ಪೊಲೀಸ್ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿದೆ.

ರೋಣ ಪಟ್ಟಣದ ಹುಬ್ಬಳ್ಳಿ ರಸ್ತೆಯಲ್ಲಿ ಡಿಸೆಲ್ ಟ್ಯಾಂಕರ್ ಕಂದಕಕ್ಕೆ ಉರುಳಿದೆ

ಗದಗ: ಜಿಲ್ಲೆಯ ರೋಣ ಪಟ್ಟಣದ ಹುಬ್ಬಳ್ಳಿ ರಸ್ತೆಯಲ್ಲಿ ಡಿಸೆಲ್ ಟ್ಯಾಂಕರ್ ಕಂದಕಕ್ಕೆ ಉರುಳಿದೆ. ಅದೃಷ್ಟವಶಾತ್​ ಚಾಲಕ ಬಚಾವ್​ ಆಗಿದ್ದಾನೆ. ಬೆಳಗಾವಿಯಿಂದ ಗಜೇಂದ್ರಗಡಕ್ಕೆ ಹೋಗುತ್ತಿದ್ದ ಡಿಸೆಲ್ ಟ್ಯಾಂಕರ್​, ಎದುರುಗಡೆ ಬರುತ್ತಿದ್ದ ಟಿಪ್ಪರ್​ಗೆ ಸೈಡ್ ಕೊಡಲು ಹೋಗಿ ಈ ಘಟನೆ ನಡೆದಿದೆ. ಟ್ಯಾಂಕರ್​ನ ನಾಲ್ಕು ಮುಚ್ಚಳದಿಂದ ಡಿಸೆಲ್ ಸೋರಿಕೆಯಾಗುತ್ತಿದ್ದು, ರೋಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ