ಕಾರವಾರ: ರಸ್ತೆಯಿಲ್ಲದೇ 8 ಕಿ.ಮೀ ಮೃತದೇಹವನ್ನ ಹೊತ್ತು ಸಾಗಿದ ಗ್ರಾಮಸ್ಥರು

ಜಿಲ್ಲೆಯ ಅಂಕೋಲ ತಾಲೂಕಿನ ಬೆರಡಿ ಗ್ರಾಮದಲ್ಲಿ ಆಕಸ್ಮಿಕ ಬೆಂಕಿ ಅವಘಡದಲ್ಲಿ ಸಾವನ್ನಪ್ಪಿದ ವ್ಯಕ್ತಿಯನ್ನ ತೆಗೆದುಕೊಂಡು ಹೋಗಲು ರಸ್ತೆಯೇ ಇಲ್ಲದೇ ಶವವನ್ನು ಬಿದಿರಿಗೆ ಕಟ್ಟಿಕೊಂಡು ಸಾಗಿದ ಧಾರುಣ ಘಟನೆ ನಡೆದಿದೆ.

ಕಾರವಾರ: ರಸ್ತೆಯಿಲ್ಲದೇ 8 ಕಿ.ಮೀ ಮೃತದೇಹವನ್ನ ಹೊತ್ತು ಸಾಗಿದ ಗ್ರಾಮಸ್ಥರು
ಮೃತದೇಹ ಹೊತ್ತು ಸಾಗಿದ ಗ್ರಾಮಸ್ಥರು
Follow us
TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on:Jan 11, 2023 | 11:52 AM

ಉತ್ತರ ಕನ್ನಡ: ಜಿಲ್ಲೆಯ ಅಂಕೋಲ ತಾಲೂಕಿನ ಬೆರಡಿ ಗ್ರಾಮದ ದಾಮೋದರ ನೇಮು ನಾಯ್ಕ (68) ಎಂಬ ವ್ಯಕ್ತಿಯು ಆಕಸ್ಮಿಕವಾಗಿ ಸಾವನ್ನಪ್ಪಿದ್ದು, ಗ್ರಾಮಕ್ಕೆ ರಸ್ತೆ ಸಂಪರ್ಕ ವಿಲ್ಲದ ಹಿನ್ನೆಲೆ, ಊರಿನ ಗ್ರಾಮಸ್ಥರು ಮೃತ ದೇಹವನ್ನ ಬಿದರಿನ ಬೊಂಬಿಗೆ ಕಟ್ಟಿಕೊಂಡು ಸುಮಾರು 8 km ವರೆಗೆ ಮೃತ ದೇಹವನ್ನ ಹೊತ್ತುಕೊಂಡು ಹೋಗಿದ್ದಾರೆ.

ಇನ್ನು ಮೃತ ವ್ಯಕ್ತಿಯು ಬೆರಡಿ ಗ್ರಾಮದ ಹೊರವಲಯದಲ್ಲಿ ಮರಗಳಿಗೆ ಬೆಂಕಿ ತಗುಲಿದ್ದಾಗ ಸಿಲುಕಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದ್ದು, ಅಂಕೋಲ ತಾಲೂಕ ಆಸ್ಪತ್ರೆಗೆ ಶವ ಪರೀಕ್ಷೆಗೆಂದು ಕೊಂಡೊಯ್ದು ನಂತರ ಪುನಃ ಮೃತ ದೇಹವನ್ನ ಹೊತ್ತುಕೊಂಡು ಗ್ರಾಮಕ್ಕೆ ತಂದು ಶವ ಸಂಸ್ಕಾರ ಮಾಡಿದ್ದಾರೆ. ಜಿಲ್ಲೆಯು ಪಶ್ಚಿಮ ಘಟ್ಟಗಳಿಂದ ಕೂಡಿದ್ದು, ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಇಲ್ಲಿ ಓಡಾಡಲು ಸರಿಯಾದ ರಸ್ತೆಯ ವ್ಯವಸ್ಥೆಯಿಲ್ಲದೇ ಇಂದು ಶವವನ್ನ ಹೊತ್ತು ಸಾಗಿದ ಧಾರುಣ ಘಟನೆ ನಡೆದಿದೆ. ಇನ್ನಾದರೂ ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ಇತ್ತ ನೋಡಬೇಕಾಗಿದೆ.

ಇದನ್ನೂ ಓದಿ:Delhi Accident: ಕಾರಿಗೆ ಸಿಲುಕಿಕೊಂಡಿದ್ದ ಯುವತಿ ಮೃತದೇಹ ಬೇರ್ಪಡಿಸಲು ಅಂದು ಯುವಕರು ಮಾಡಿದ್ದೇನು?

ಕೊವಿಡ್ ರಿಪೋರ್ಟ್​​ನಲ್ಲಿ ಹೆಸರು ತಪ್ಪಾಗಿ ಬರೆದಿದ್ದಕ್ಕೆ ಜಿಲ್ಲಾಸ್ಪತ್ರೆಯ ಲ್ಯಾಬ್​​ ಸಿಬ್ಬಂದಿ ಮೇಲೆ ಹಲ್ಲೆ

ಬಾಗಲಕೋಟೆ: ಕೊವಿಡ್ ರಿಪೋರ್ಟ್ ಕಾರ್ಡ್​ನಲ್ಲಿ ಹೆಸರು ತಪ್ಪಾಗಿದ್ದಕ್ಕೆ ಜಿಲ್ಲಾಸ್ಪತ್ರೆಯ ಡೇಟಾ ಎಂಟ್ರಿ ಆಪರೇಟರ್ ಪ್ರವೀಣ್​​, ಡಿ ಗ್ರೂಪ್ ನೌಕರ ಈರಣ್ಣ, ಆ್ಯಂಬುಲೆನ್ಸ್​​ ಚಾಲಕ ಪ್ರಶಾಂತ್​ ಬುರ್ಲಿ ಮೇಲೆ ವಿಜಯ, ಮಹಾಂತೇಶ್ ಕಲಕುಟಗೇರಿ, ಚೇತನ್ ದೊಡ್ಡಮನಿ, ಸಚಿನ್ ಚೌಹಾಣ್ ಹಾಗೂ ಶಿವು ಪತ್ತಾರ ಎಂಬುವವರು ಸೇರಿ ಹಲ್ಲೆ ನಡೆಸಿದ್ದಾರೆ. ಜ.8 ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಅಷ್ಟೇ ಅಲ್ಲದೇ ಮೇಲಾಧಿಕಾರಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಪುಂಡರು. ಕೇವಲ ಸ್ಪೆಲಿಂಗ್ ಮಿಸ್ಟೇಕ್ ಆಗಿದ್ದಕ್ಕೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಪುಂಡರ ಹಾವಳಿಯ ವೀಡಿಯೊ ಸಧ್ಯ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿದ್ದು ಆಸ್ಪತ್ರೆ ಸಿಬ್ಬಂದಿಗಳಿಂದ ನವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:52 am, Wed, 11 January 23