Bhatkal: ನವಾಯತ್ ಮುಸ್ಲಿಂ ಕುಟುಂಬ ಪ್ರದರ್ಶನಕ್ಕಿಟ್ಟಿದೆ ಪ್ರಾಚೀನ ವಸ್ತುಗಳ ಸಂಗ್ರಹ, ನೀವೂ ನೋಡಿ

ಆಧುನಿಕ ಯುಗದಲ್ಲಿ ಮಾನವ ತನ್ನ ಸುಖದಾಯಕ ಜೀವನಕ್ಕೆ ಮಣೆ ಹಾಕುತ್ತಿರುವ ಕಾರಣ ಅದೆಷ್ಟೋ ಪ್ರಾಚೀನ ವಸ್ತುಗಳು ಮೂಲೆಗುಂಪಾಗಿವೆ. ಆದರೆ ಹೀಗೆ ಮೂಲೆಗುಂಪಾದ ವಸ್ತುಗಳನ್ನು ಮುಸ್ಲಿಂ ಕುಟುಂಬವೊಂದು ಸಂಗ್ರಹಿಸಿ ಪ್ರದರ್ಶನಕ್ಕಿಟ್ಟಿದೆ.

Bhatkal: ನವಾಯತ್ ಮುಸ್ಲಿಂ ಕುಟುಂಬ ಪ್ರದರ್ಶನಕ್ಕಿಟ್ಟಿದೆ ಪ್ರಾಚೀನ ವಸ್ತುಗಳ ಸಂಗ್ರಹ, ನೀವೂ ನೋಡಿ
ಭಟ್ಕಳ: ನವಾಯತ್ ಮುಸ್ಲಿಂ ಕುಟುಂಬ ಪ್ರದರ್ಶನಕ್ಕಿಟ್ಟಿದೆ ಪ್ರಾಚೀನ ವಸ್ತುಗಳ ಸಂಗ್ರಹ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Jan 10, 2023 | 1:02 PM

ಪ್ಲಾಸ್ಟಿಕ್, ಫೈಬರ್ ಭರಾಟೆ ನಡುವೆ ಪ್ರಾಚೀನ ವಸ್ತುಗಳು ಮರೆಯಾಗಿವೆ. ಮನೆಗಳಲ್ಲಿ ಪೂರ್ವಜರು ಬಳಸುತ್ತಿದ್ದ ವಸ್ತುಗಳು ಮೂಲೆಗುಂಪಾಗಿ ಅತ್ಯಾಧುನಿಕ ಸಲಕರಣೆಗಳು ಅಡುಗೆಕೋಣೆ ಸೇರಿಕೊಂಡಿವೆ. ಆದರೆ ಈ ಹಿಂದೆ ಬಳಸುತ್ತಿದ್ದ ಅಪರೂಪದ ಗೃಹೋಪಯೋಗಿ (cultural treasures) ವಸ್ತುಗಳು ಸೇರಿದಂತೆ ಇತರೆ ಪರಿಕರಗಳನ್ನು ಸಂಗ್ರಹಿಸಿದ ನವಾಯಿತಿ ಮುಸ್ಲಿಂ ಕುಟುಂಬವೊಂದು (Navayath Muslim family) ಅವುಗಳ ಪ್ರದರ್ಶನ ಏರ್ಪಡಿಸಿದ್ದು ಎಲ್ಲರ ಗಮನ ಸೆಳೆಯಿತು. ಈ ಕುರಿತು ಒಂದು ವರದಿ ಇಲ್ಲಿದೆ (Bhatkal).

ಆಧುನಿಕತೆ ಬೆಳೆದಂತೆ ನಮ್ಮ‌ ಜೀವನ ಶೈಲಿ ಕೂಡ ಬದಲಾಗುತ್ತಿದೆ. ಮಾನವ ತನ್ನ ಜೀವನಕ್ರಮಕ್ಕೆ ಅನೂಕೂಲವಾಗುವಂತಹ ವ್ಯವಸ್ಥೆಗೆ ಮಾರುಹೋಗುತ್ತಿದ್ದಾನೆ. ಅದರಂತೆ ನಮ್ಮ ಪೂರ್ವಜರು ಮನೆ, ಜಮೀನು ಕೆಲಸಗಳಿಗೆ ಹಾಗೂ ಗೃಹೋಪಯೋಗಿ ವಸ್ತುಗಳಾಗಿ ಬಳಸುತ್ತಿದ್ದ ಪುರಾತನ ಹಾಗೂ ಪ್ರಾಚೀನ ವಸ್ತುಗಳು ಇದೀಗ ಸಂಪೂರ್ಣ ಮರೆಯಾಗಿದೆ. ಈ ವಸ್ತುಗಳ ಬದಲಾಗಿ ಇದೀಗ ತರಹೇವಾರು ಪ್ಲಾಸ್ಟಿಕ್, ಫೈಬರ್, ಗಾಜಿನ ವಸ್ತುಗಳು ಮನೆಗಳಲ್ಲಿ ರಾರಾಜಿಸುತ್ತಿವೆ. ಅತಿ ಕಡಿಮೆ ಬೆಲೆಗೆ ಈ ವಸ್ತುಗಳು ಸಿಗುವುದು ಮಾತ್ರವಲ್ಲದೇ ಹೆಚ್ಚು ಆಕರ್ಷಿತವಾಗುವ ಕಾರಣ ಜನ ಕೂಡ ಮಾರುಹೋಗುತ್ತಿದ್ದಾರೆ.

ಹೀಗಾಗಿ ಈ ಹಿಂದೆ ಬಳಸುತ್ತಿದ್ದ ಪುರಾತನ ವಸ್ತುಗಳು ಇದೀಗ ನೋಡುವುದಕ್ಕೂ ಸಿಗುವುದು ಕಷ್ಟ ಎಂಬಂತಾಗಿದೆ. ಆದರೆ ಭಟ್ಕಳ ಪಟ್ಟಣದ ಚಿನ್ನದಪಳ್ಳಿ ಬಳಿ ವಾಸವಿರುವ ನವಾಯತ್ ಕುಟುಂಬದವರು ಪ್ರಾಚೀನ ವಸ್ತು ಸಂಗ್ರಹಿಸಿ ಇದೀಗ ತಮ್ಮ ಮನೆಯನ್ನೇ ಈ ವಸ್ತುಗಳ ಸಂಗ್ರಹಾಲಯವನ್ನಾಗಿ ಮಾಡಿಕೊಂಡಿದ್ದಾರೆ. ಮನೆಯಲ್ಲಿ ಹಳೆಯ ಕಾಲದ ಹಿತ್ತಾಳೆ, ಕಂಚಿನ ಪಾತ್ರೆ, ಪಿಂಗಾಣಿ ಭರಣಿ, ಕಂಚಿನ ದೀಪ, ಮಹಿಳೆಯರ ಅಲಂಕಾರಿಕಾ ವಸ್ತುಗಳ ಸಂಗ್ರಹದ ಮರದ ಪೆಟ್ಟಿಗೆ, ರೇಡಿಯೋ, ಸುಗಂಧದ್ರವ್ಯ ಸಿಂಪಡನೆಯ ವಸ್ತುಗಳು ಹೀಗೆ ಪ್ರತಿಯೊಂದನ್ನು ಇಲ್ಲಿ ಸಂಗ್ರಹ ಮಾಡಲಾಗಿದೆ. ಇದೀಗ ಭಟ್ಕಳದ ಜಮಾತುಲ್ಲಾ ಮುಸ್ಲಿಮೀನ್ ಸಂಸ್ಥೆಯು ಒಂದು ಸಾವಿರ ವರ್ಷ ಪೂರೈಸಿದ ಹಿನ್ನೆಲೆ ಸಹಸ್ರ ಶತಮಾನೋತ್ಸವ ಆಚರಣೆ ಮಾಡಲಾಗುತ್ತಿದ್ದು ಈ ಸಂದರ್ಭದಲ್ಲಿ ಪುರಾತನ ವಸ್ತುಗಳ ಪ್ರದರ್ಶನದ ಮೂಲಕ ಹಳೆಯ ವಸ್ತುಗಳ ಬಗ್ಗೆ ಜನರಿಗೆ ಮಾಹಿತಿ ಕೊಡಲಾಗುತ್ತಿದೆ.

ಇನ್ನು ಜಮಾತುಲ್ಲಾ ಮುಸ್ಲಿಮೀನ್ ಸಂಸ್ಥೆಯ ಸಹಸ್ರ ಶತಮಾನೋತ್ಸವಕ್ಕೆ ಆಗಮಿಸಿದ ಬಹುತೇಕರು ಈ ಪ್ರಾಚೀನ ವಸ್ತುಗಳ ಸಂಗ್ರಹಾಲಯ ವೀಕ್ಷಣೆ ನಡೆಸಿದರು. ವಿದ್ಯಾರ್ಥಿಗಳು, ಶಾಲಾ ಕಾಲೇಜು ಶಿಕ್ಷಕರು ಭಾಗವಹಿಸಿ ಅಪರೂಪದ ವಸ್ತುಗಳನ್ನು ಕಂಡು ಆಯೋಜನಕರಿಂದ ಮಾಹಿತಿ ಪಡೆದರು. ಅಲ್ಲದೇ ಎಂದೂ ನೋಡಿರದ ಅಪರೂಪದ ವಸ್ತುಗಳು ನೋಡುಗರಲ್ಲಿ ಕೂತೂಹಲ ಹುಟ್ಟಿಸುವಂತೆ ಮಾಡಿತ್ತು.

ಭಟ್ಕಳಕ್ಕೆ ಬರುವ ಮೊದಲು ಇಲ್ಲಿನ ನವಾಯಿತಿ ಮುಸ್ಲಿಂ ಸಮುದಾಯದವರು ಶ್ರೀಲಂಕಾ, ಯೆಮೆನ್, ಮಲೇಷಿಯಾ ಭಾಗದಲ್ಲಿ ವಾಸವಿದ್ದರು. ಸಾವಿರ ವರ್ಷಗಳ ಹಿಂದೆ ವ್ಯಾಪಾರಕ್ಕಾಗಿ ಮೊದಲು ನವಾಯಿತಿಗಳು ಕಾಲಿಟ್ಟಿದ್ದು ಈ ಹಿಂದೆ ಹೊನೂರು ಎಂದು ಕರೆಸಿಕೊಳ್ಳುತ್ತಿದ್ದ ಈಗಿನ ಹೊನ್ನಾವರದ ಮಂಕಿಯಲ್ಲಿ. ಅಲ್ಲಿಂದ ಬಳಿಕ ಭಟ್ಕಳಕ್ಕೆ ಬಂದರು. ಇಲ್ಲಿ ಎರಡು ಮೂರು ತಿಂಗಳು ಉಳಿದುಕೊಂಡು ಇಲ್ಲಿಂದ ಕೇರಳದತ್ತ ಪ್ರಯಾಣಿಸಿದರು.

ಇಂತಹ ಇತಿಹಾಸ ಹೊಂದಿರುವ ಮುಸ್ಲಿಂ ಸಮುದಾಯದವರು ಇದೀಗ ಪ್ರಾಚೀನ ವಸ್ತುಗಳನ್ನು ಸಂಗ್ರಹಿಸಿ ಯುವಜನತೆಗೆ ಹಿಂದಿನ ಕಾಲದ ಜನರು ಯಾವ ರೀತಿಯ ವಸ್ತುಗಳು ಉಪಯೋಗಿಸುತ್ತಿದ್ದರು ಎನ್ನುವುದನ್ನು ಪರಿಚಯಿಸಲು ಈ ವಸ್ತು ಪ್ರದರ್ಶನ ಆಯೋಜನೆ ಮಾಡಿದ್ದಾರೆ. ಇದು ಖುಷಿಯ ವಿಚಾರ ಎನ್ನುತ್ತಾರೆ ಇಲ್ಲಿನ ಸ್ಥಳೀಯರಾದ ಅಬ್ದುಲ್ ಮೋತಿಶಾಂ, ಜಮಾಅತುಲ್ ಮುಸ್ಲಿಮೀನ್ ಸಂಸ್ಥೆಯ ಮುಖ್ಯಸ್ಥರು.

ಒಟ್ಟಾರೇ ಇಂದಿನ ಆಧುನಿಕ ಯುಗದಲ್ಲಿ ಮಾನವ ತನ್ನ ಸುಖದಾಯಕ ಜೀವನಕ್ಕೆ ಹೆಚ್ಚಿನ ಮಹತ್ವ ನೀಡುತ್ತಿರುವ ಕಾರಣ ಅದೆಷ್ಟೋ ಪ್ರಾಚೀನ ವಸ್ತುಗಳು ಮೂಲೆಗುಂಪಾಗಿವೆ. ಆದರೆ ಹೀಗೆ ಮೂಲೆಗುಂಪಾದ ವಸ್ತುಗಳನ್ನು ಮುಸ್ಲಿಂ ಕುಟುಂಬವೊಂದು ಸಂಗ್ರಹಿಸಿ ಪ್ರದರ್ಶನ ಏರ್ಪಡಿಸಿದ್ದು ಎಲ್ಲರಲ್ಲಿ ಪುರಾತನ ನೆನಪುಗಳನ್ನ ಮೂಡಿಸಿರುವುದಂತೂ ಸತ್ಯ…

ವರದಿ: ವಿನಾಯಕ ಬಡಿಗೇರ, ಟಿವಿ 9, ಕಾರವಾರ 

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್