ಜಿರಳೆಗಿಡುವ ವಿಷವನ್ನು ಕಂದನಿಗಿಟ್ಟ ತಾಯಿ! ಚಿಕಿತ್ಸೆ ಫಲಕಾರಿ ಆಗದೇ 3 ವರ್ಷದ ಮಗು ಸಾವು

ರಾಮನಗರ (Ramanagara) ಜಿಲ್ಲೆಯ ಹಾರೋಹಳ್ಳಿ ತಾಲೂಕಿನ ಗೋದೂರ ಗ್ರಾಮದಲ್ಲಿ ಮಗು ಜೊತೆ ಲಕ್ಷ್ಮಣರೇಖೆ ಔಷಧಿ ಕುಡಿದು ತಾಯಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದ್ದು, ಸತತ ವಾಂತಿ ಹಾಗೂ ಭೇದಿಯಿಂದ ಮಗು ಕೊನೆಯುಸಿರೆಳೆದಿದೆ. ಇದೀಗ ದಯಾನಂದ ಆಸ್ಪತ್ರೆಯಲ್ಲಿ ಮಗುವಿನ ಮರೋಣೋತ್ತರ ಪರೀಕ್ಷೆ ಮಾಡಲಾಗುತ್ತಿದೆ.

ಜಿರಳೆಗಿಡುವ ವಿಷವನ್ನು ಕಂದನಿಗಿಟ್ಟ ತಾಯಿ! ಚಿಕಿತ್ಸೆ ಫಲಕಾರಿ ಆಗದೇ 3 ವರ್ಷದ ಮಗು ಸಾವು
ಮೃತ ಮಗು
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on:Jan 24, 2024 | 8:58 PM

ರಾಮನಗರ, ಜ.24: ಮಗು ಜೊತೆ ಲಕ್ಷ್ಮಣರೇಖೆ ಔಷಧಿ ಕುಡಿದು ತಾಯಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ರಾಮನಗರ (Ramanagara) ಜಿಲ್ಲೆಯ ಹಾರೋಹಳ್ಳಿ ತಾಲೂಕಿನ ಗೋದೂರ ಗ್ರಾಮದಲ್ಲಿ ನಡೆದಿದೆ. ಈ ವೇಳೆ 3 ವರ್ಷದ ಮಗು ಸಾವನ್ನಪ್ಪಿದರೆ, ಅಸ್ವಸ್ಥ ತಾಯಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದೀಕ್ಷಿತ್ ಗೌಡ‌(3) ಮೃತಪಟ್ಟ ಮಗು ಹಾಗೂ ಪೂರ್ಣಿಮಾ(24) ಮಗುವಿಗೆ ವಿಷವುಣಿಸಿದ ತಾಯಿ.

ಸತತ ವಾಂತಿ, ಭೇದಿಯಿಂದ ಕೊನೆಯುಸಿರೆಳೆದ ಮಗು

ಇನ್ನು ಲಕ್ಷ್ಮಣ ರೇಖೆ ಎಂಬ ಹೆಸರಿನ ಜಿರಳೆಗಿಡುವ ವಿಷ ಇದಾಗಿದ್ದು, ತಾಯಿ ಪೂರ್ಣಿಮಾ ತಾನೂ ಕುಡಿದು, ಮಗುವಿಗೂ ವಿಷವುಣಿಸಿದ್ದಾರೆ. ಸತತ ವಾಂತಿ ಹಾಗೂ ಭೇದಿಯಿಂದ ಮಗು ಕೊನೆಯುಸಿರೆಳೆದಿದೆ. ಇದೀಗ ದಯಾನಂದ ಆಸ್ಪತ್ರೆಯಲ್ಲಿ ಮಗುವಿನ ಮರೋಣೋತ್ತರ ಪರೀಕ್ಷೆ ಮಾಡಲಾಗುತ್ತಿದ್ದು, ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲು ಮಾಡಲಾಗಿದೆ.

ಇದನ್ನೂ ಓದಿ:ಮೀಟರ್​ ಬಡ್ಡಿ ದಂಧೆ ಹಾವಳಿ, ವ್ಯಕ್ತಿ ಆತ್ಮಹತ್ಯೆಗೆ ಯತ್ನ: ಎಚ್ಚೆತ್ತ ತುಮಕೂರು ಪೊಲೀಸರಿಂದ ಸಹಾಯವಾಣಿ

ಲೋಕಾ ಬಲೆಗೆ ಬಿದ್ದ ಸರ್ವೆ ಅಧಿಕಾರಿ

ಉತ್ತರ ಕನ್ನಡ: ಜಿಲ್ಲೆಯ ಯಲ್ಲಾಪುರ ಪಟ್ಟಣದಲ್ಲಿನ ಆಡಳಿತಸೌಧದಲ್ಲಿ 2,500 ರೂ. ಲಂಚ ಸ್ವೀಕರಿಸುತ್ತಿದ್ದ ಸರ್ವೆ ಅಧಿಕಾರಿ ಲೋಕಾ ಬಲೆಗೆ ಬಿದ್ದಿದ್ದಾರೆ. ಸಾಮಾಜಿಕ ಕಾರ್ಯಕರ್ತ ಧೀರಜ್​ ತಿನೇಕರ್ ಹುಣಶೆಟ್ಟಿಕೊಪ್ಪರ ಜಮೀನು ಭಾಗ ಮಾಡುವ ವಿಚಾರಕ್ಕೆ ಸರ್ವೆ ಇಲಾಖೆ ಅಧಿಕಾರಿ ಚಂದ್ರ ಮೋಹನ್ ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಇಂದು 2,500 ರೂ. ಲಂಚ ಸ್ವೀಕರಿಸುವಾಗ ದಿಢೀರ್​ ಲೋಕಾಯುಕ್ತ ದಾಳಿ ನಡೆಸಿದ್ದು, ಕಾರವಾರ ಲೊಕಾಯುಕ್ತ ಕಚೇರಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:44 pm, Wed, 24 January 24