ರಾಮನಗರ, ಮಾರ್ಚ್.17: ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ (CP Yogeshwar) ಸ್ಪರ್ಧೆ ಮಾಡದೇ ಈಗಲೂ ನನಗೆ ಬೆಂಬಲ ನೀಡಿದ್ದಾರೆಂಬ ಡಿಕೆ.ಸುರೇಶ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಚನ್ನಪಟ್ಟಣದಲ್ಲಿ ಸಿ.ಪಿ.ಯೋಗೇಶ್ವರ್ ತಿರುಗೇಟು ನೀಡಿದ್ದಾರೆ. 5 ವರ್ಷದ ಹಿಂದೆ ನಾನು ಸ್ಪರ್ಧೆ ಮಾಡಿದ್ದರೆ ಡಿ.ಕೆ.ಸುರೇಶ್ (DK Suresh) ಗೆಲ್ತಿರಲಿಲ್ಲ. ಹಾಗಾಗಿ ಈ ಬಾರಿ ಬುಡಸಮೇತ ತೆಗೆಯಬೇಕು ಅಂತ ಮಂಜುನಾಥ್ (Dr. Manjunath) ರನ್ನ ತಂದಿದ್ದೇವೆ ಎಂದು ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಮಾಜಿ ಸಚಿವ ಯೋಗೇಶ್ವರ್ ಹೇಳಿದರು.
ನಾನು ಪಾರ್ಲಿಮೆಂಟ್ಗೆ ಹೋಗಬಾರದೆಂದು ನಿರ್ಧಾರ ಮಾಡಿದ್ದೇನೆ. ರಾಜ್ಯ ರಾಜಕೀಯದಲ್ಲಿ ಇರಬೇಕೆಂದು ನನ್ನ ನಿಲುವು. ಡಿ.ಕೆ.ಸುರೇಶ್ ಹತಾಶೆಯಿಂದ ಮಾತನಾಡ್ತಿದ್ದಾರೆ. ಡಾ.ಸಿ.ಎನ್.ಮಂಜುನಾಥ್ ಅವರ ಬಗ್ಗೆ ಮಾತನಾಡಲು ಅವರಿಗೆ ಯೋಗ್ಯತೆ ಇಲ್ಲ. ಡಾ.ಮಂಜುನಾಥ್ ವಿರುದ್ಧ ಗೆಲುವು ಸುಲಭವಿದ್ದರೆ ಕುಕ್ಕರ್, ಹಣ ಯಾಕೆ ಕೊಡ್ತಿದ್ದರು? ಕಳೆದ ಬಾರಿ ಮುನಿರತ್ನ ಕಾಂಗ್ರೆಸ್ ಪರವಾಗಿದ್ದರು, ಆದರೂ ಬಿಜೆಪಿಗೆ ಅಲ್ಲಿ 30 ಸಾವಿರ ಲೀಡ್ ಇತ್ತು. ಇವತ್ತು ಮುನಿರತ್ನ ಬಿಜೆಪಿಯಲ್ಲಿದ್ದಾರೆ. ಹಾಗಾಗಿ ನಮ್ಮ ಗೆಲುವು ನಿಶ್ಚಿತ. ನಮ್ಮ ದೌರ್ಭಾಗ್ಯ ನಾವು, ಜೆಡಿಎಸ್ ಕಿತ್ತಾಡಿ ಅವರಿಗೆ ಲಾಭ ಆಗಿತ್ತು. ಈಗ ನಾವು, ಜೆಡಿಎಸ್ ನವರು ಒಂದಾಗಿದ್ದೇವೆ. ದೇವೇಗೌಡರು ಬಿಜೆಪಿ ಜೊತೆಗೆ ಒಂದಾಗಿದ್ದಾರೆ ಎಂದರು.
ಇದನ್ನೂ ಓದಿ: 2024ರ ಲೋಕಸಭಾ ಚುನಾವಣೆ ಧರ್ಮ ಯುದ್ಧ ಇದ್ದಂತೆ; ಡಾ.ಮಂಜುನಾಥ್
28 ಕ್ಷೇತ್ರಗಳದ್ದು ಒಂದು ಲೆಕ್ಕವಾದ್ರೆ, ಬೆಂಗಳೂರು ಗ್ರಾಮಾಂತರ ಅಖಾಡದ್ದೇ ಮತ್ತೊಂದು ಲೆಕ್ಕ. ಇದು ಡಿ.ಕೆ.ಸುರೇಶ್ ವರ್ಸಸ್ ಡಾ.ಸಿ.ಎನ್.ಮಂಜುನಾಥ್ ನಡುವಿನ ಕದನವಲ್ಲ. ಡಿಕೆ ಬ್ರದರ್ಸ್ ವರ್ಸಸ್ ಹೆಚ್‌ಡಿಕೆ ನಡುವಿನ ಯುದ್ಧ. ಈಗಾಗ್ಲೇ ದೋಸ್ತಿಗಳು ಹೃದಯವಂತ ಡಾಕ್ಟರ್ ಕಣಕ್ಕಿಳಿಸಿ ಪ್ರಾಮಾಣಿಕ ವರ್ಸಸ್ ಭ್ರಷ್ಟಾಚಾರ ಅಂತಾ ತಂತ್ರ ಹೂಡಿದೆ. ಇದಕ್ಕೆ ಕೌಂಟರ್ ನೀಡಲು ಡಿಕೆ ಬ್ರದರ್ಸ್, ಸೈಲೆಂಟಾಗಿ ಪ್ಲ್ಯಾನ್ ಮಾಡ್ತಿದ್ದಾರೆ. ಅದಕ್ಕಾಗಿ ನಿನ್ನೆ ಸದಾಶಿವನಗರದ ಡಿಸಿಎಂ ಡಿಕೆ ಶಿವಕುಮಾರ್ ನಿವಾಸದಲ್ಲಿ ಬ್ರೇಕ್ ಫಾಸ್ಟ್ ಮೀಟಿಂಗ್ ನೆಪದಲ್ಲಿ ಚುನಾವಣಾ ತಂತ್ರಗಾರಿಕೆ ಮಾಡಿದ್ದಾರೆ.
ಬಿಜೆಪಿ ಅಭ್ಯರ್ಥಿಯಾಗಿ ಮಂಜುನಾಥ್ ಕಣಕ್ಕಿಳಿದಿರೋದ್ರಿಂದ, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್ ನಾಯಕರು ಬೇಸರಗೊಂಡಿದ್ದಾರೆ ಅಂತಾ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಹೀಗಾಗಿ ಅವರನ್ನ ಪಕ್ಷಕ್ಕೆ ಸೇರಿಸಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಡಿಕೆ ಬ್ರದರ್ಸ್ ಹೇಳಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ