ಎಸ್​ಐಟಿ ಮುಖ್ಯಸ್ಥರಿಲ್ಲದೇ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ತನಿಖೆ ಹೇಗೆ ನಡೆದಿದೆ? ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನೆ

| Updated By: guruganesh bhat

Updated on: Aug 12, 2021 | 5:20 PM

3 ತಿಂಗಳ ತನಿಖೆ ಎಸ್ಐಟಿ ಮುಖ್ಯಸ್ಥ . ಸೌಮೇಂದು ಮುಖರ್ಜಿ ಅನುಪಸ್ಥಿತಿಯಲ್ಲಿ ನಡೆದಿದೆ. ಸೌಮೇಂದು ಮುಖರ್ಜಿ ತಮ್ಮ ನಿಲುವು ಸ್ಪಷ್ಟಪಡಿಸಬೇಕು. ತನಿಖೆ ಸರಿಯಾಗಿ ನಡೆದಿದೆಯೇ ಇಲ್ಲವೇ ಪರಿಶೀಲಿಸಬೇಕಿತ್ತು. ಪ್ರತ್ಯೇಕ ಪ್ರಮಾಣಪತ್ರ ಸಲ್ಲಿಸಬೇಕಿತ್ತು ಎಂದು ಕೋರ್ಟ್ ಹೇಳಿದೆ.

ಎಸ್​ಐಟಿ ಮುಖ್ಯಸ್ಥರಿಲ್ಲದೇ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ತನಿಖೆ ಹೇಗೆ ನಡೆದಿದೆ? ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನೆ
ರಮೇಶ್ ಜಾರಕಿಹೊಳಿ
Follow us on

ಬೆಂಗಳೂರು: ಮಾಜಿ ಸಚಿವ, ಶಾಸಕ ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ (Ramesh Jarkiholi) ಪ್ರಕರಣದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ (Karnataka High Court), ಎಸ್ಐಟಿ ಮುಖ್ಯಸ್ಥರಿಲ್ಲದೇ ತನಿಖೆ ಹೇಗೆ ನಡೆದಿದೆ? ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿತು.

ಎಸ್ಐಟಿಗೆ ಹಿರಿಯ ಅಧಿಕಾರಿಗಳ ನೇಮಿಸುವ ಉದ್ದೇಶವೇನು? ಅಧಿಕಾರಿಯ ಅನುಭವ ಮತ್ತು ಹಿರಿತನ ತನಿಖೆಗೆ ನೆರವಾಗಬೇಕು. ಅಧಿಕಾರಿ ರಜೆಯಲ್ಲಿದ್ದರೆ ತನಿಖೆ ಹೇಗೆ ಸಾಧ್ಯ? ಎಸ್ಐಟಿಗೆ ಮುಖ್ಯಸ್ಥರನ್ನು ನೇಮಿಸುವ ಉದ್ದೇಶವೇನು? ಎಂದು ಕೋರ್ಟ್ ಸರ್ಕಾರವನ್ನು ಗಂಭೀರವಾಗಿ ಪ್ರಶ್ನಿಸಿತು. 3 ತಿಂಗಳ ತನಿಖೆ ಎಸ್ಐಟಿ ಮುಖ್ಯಸ್ಥ . ಸೌಮೇಂದು ಮುಖರ್ಜಿ ಅನುಪಸ್ಥಿತಿಯಲ್ಲಿ ನಡೆದಿದೆ. ಸೌಮೇಂದು ಮುಖರ್ಜಿ ತಮ್ಮ ನಿಲುವು ಸ್ಪಷ್ಟಪಡಿಸಬೇಕು. ತನಿಖೆ ಸರಿಯಾಗಿ ನಡೆದಿದೆಯೇ ಇಲ್ಲವೇ ಪರಿಶೀಲಿಸಬೇಕಿತ್ತು. ಪ್ರತ್ಯೇಕ ಪ್ರಮಾಣಪತ್ರ ಸಲ್ಲಿಸಬೇಕಿತ್ತು. ಸೌಮೇಂದು ಮುಖರ್ಜಿ ತಮ್ಮ ಜವಾಬ್ದಾರಿ ವರ್ಗಾಯಿಸಿಲ್ಲ. ಕೇವಲ ವರದಿ ಸಲ್ಲಿಸುವ ಕೆಲಸ ಮಾತ್ರ ವರ್ಗಾಯಿಸಿದ್ದಾರೆ. ಹೀಗಾಗಿ ಎಸ್ಐಟಿ ಮುಖ್ಯಸ್ಥರು ತನಿಖೆ ಉಸ್ತುವಾರಿ ವಹಿಸಿದಂತಾಗಿಲ್ಲ ಎಂದ ಕೋರ್ಟ್, ಸೌಮೇಂದು ಮುಖರ್ಜಿಗೆ ಪ್ರತ್ಯೇಕ ಪ್ರಮಾಣಪತ್ರದಲ್ಲಿ ತನಿಖೆಯ ಬಗ್ಗೆ ನಿಲುವು ತಿಳಿಸಲು ಸೂಚನೆ ನೀಡಿತು.

 

ಶಾಸಕ ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣದಲ್ಲಿ ಮಧ್ಯಂತರ ಆದೇಶವನ್ನು ಮುಂದುವರಿಸಿದ ಹೈಕೋರ್ಟ್, ಅಂತಿಮ ವರದಿ ಸಲ್ಲಿಸದಂತೆ ನೀಡಿದ್ದ ಆದೇಶವನ್ನು  ಸೆ.3 ರವರೆಗೆ ಮುಂದೂಡಿದೆ.

ರಮೇಶ್ ಜಾರಕಿಹೊಳಿಗೆ ಮತ್ತೊಂದು ಸಂಕಷ್ಟ: ಚೆಕ್​ ಬೌನ್ಸ್​ ಕೇಸ್​ಗೆ ಮರುಜೀವ
ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಸಹಕಾರ ಬ್ಯಾಂಕ್​ಗೆ ₹ 5.2 ಕೋಟಿ ಮೊತ್ತದ ಚೆಕ್ ಬೌನ್ಸ್ ಆಗಿದ್ದ ಹಿನ್ನೆಲೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಹೈಕೋರ್ಟ್ ಇತ್ತೀಚಿಗಷ್ಟೇ​ ಮರುಜೀವ ನೀಡಿದೆ. ಈ ಮೊದಲು ಈ ಪ್ರಕರಣವನ್ನು ಚಿಕ್ಕೋಡಿ ನ್ಯಾಯಾಲಯ ವಜಾಗೊಳಿಸಿತ್ತು. ಚಿಕ್ಕೋಡಿ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್​ ರದ್ದುಪಡಿಸಿದ್ದು, ಖಾಸಗಿ ದೂರು ದಾಖಲಿಸಿದ ದಿನಾಂಕದಿಂದ ಮರು ವಿಚಾರಣೆ ನಡೆಸಲು ಮತ್ತು ಸೂಕ್ತ ಆದೇಶ ನೀಡಲು ಸೂಚಿಸಿದೆ.

ಬೀರೇಶ್ವರ ಕ್ರೆಡಿಟ್ ಕೋಆಪರೇಟಿವ್​ ಸೊಸೈಟಿ ಸಲ್ಲಿಸಿದ್ದ ಖಾಸಗಿ ದೂರಿನ ಬಗ್ಗೆ ನ್ಯಾಯಮೂರ್ತಿ ಸುನೀಲ್‌ದತ್‌ ಯಾದವ್‌ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತ್ತು. ಸಾಲಕ್ಕೆ ಪ್ರತಿಯಾಗಿ ನೀಡಿದ್ದ ₹ 5.2 ಕೋಟಿ ಮೌಲ್ಯದ ಚೆಕ್ ಬೌನ್ಸ್ ಆಗಿದೆ ಎಂದು ರಮೇಶ್ ಜಾರಕಿಹೊಳಿ ವಿರುದ್ಧ ಬೀರೇಶ್ವರ ಸೊಸೈಟಿ ದೂರು ನೀಡಿತ್ತು. ಚಿಕ್ಕೋಡಿ ನ್ಯಾಯಾಲಯಕ್ಕೆ ವಿಚಾರಣೆ ವೇಳೆ ವಕೀಲರು ಗೈರು ಹಾಜರಾದ ಹಿನ್ನೆಲೆಯಲ್ಲಿ ಪ್ರಕರಣ ವಜಾಗೊಂಡಿತ್ತು. ಚಿಕ್ಕೋಡಿ ನ್ಯಾಯಾಲಯದ ಆದೇಶ ಪ್ರಶ್ನಿಸಿ ಬೀರೇಶ್ವರ ಸೊಸೈಟಿ ಹೈಕೋರ್ಟ್​ಗೆ ದೂರು ಸಲ್ಲಿಸಿತ್ತು.

ಈ ಪ್ರಕರಣದಲ್ಲಿ ಚಿಕ್ಕೋಡಿ ನ್ಯಾಯಾಲಯವು ನಡೆಸಿರುವ ವಿಚಾರಣೆ ಪ್ರಕ್ರಿಯೆ ಕಾನೂನಿಗೆ ಅನುಗುಣವಾಗಿಲ್ಲ. ವಿಚಾರಣೆಗೆ ಪರಿಗಣಿಸುವ ಮುನ್ನ ರಮೇಶ್‌ಗೆ ನೋಟಿಸ್ ನೀಡಿ, ಮರು ವಿಚಾರಣೆ ನಡೆಸಿ ಸೂಕ್ತ ಆದೇಶ ಹೊರಡಿಸಲು ಹೈಕೋರ್ಟ್ ಸೂಚನೆ ನೀಡಿದೆ.

ಇದನ್ನೂ ಓದಿ: 

ಕೆಲವು ಹಿತೈಷಿಗಳು, ಮಠಾಧೀಶರು ‘ತಡೀಪಾ’ ಅಂದಿದ್ದಕ್ಕೆ ರಾಜೀನಾಮೆ ನೀಡಿಲ್ಲ: ಶಾಸಕ ರಮೇಶ್ ಜಾರಕಿಹೊಳಿ

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ; ಎಸ್ಐಟಿ ತನಿಖೆ ಬಹುತೇಕ ಮುಕ್ತಾಯ: ಬಿ ರಿಪೋರ್ಟ್ ಯಾರ ಪರವಾಗಿ?

(Ramesh Jarkiholi CD case Karnataka High court questions How was the investigation without the SIT chief)

Published On - 4:18 pm, Thu, 12 August 21