ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ; ಎಸ್ಐಟಿ ತನಿಖೆ ಬಹುತೇಕ ಮುಕ್ತಾಯ: ಬಿ ರಿಪೋರ್ಟ್ ಯಾರ ಪರವಾಗಿ?
ramesh jarkiholi cd case: ಇದೀಗ, ಎಫ್ಎಸ್ಎಲ್ ನೀಡುವ ವರದಿಗಾಗಿ ಕಾಯುತ್ತಿರುವ ಎಸ್ಐಟಿ ತಂಡವು ಎಫ್ಎಸ್ಎಲ್ ವರದಿ ಬರುತ್ತಿದ್ದಂತೆ ತನಿಖೆಗೆ ತಾರ್ಕಿಕ ಅಂತ್ಯ ಕಂಡುಕೊಳ್ಳಲು ಮುಂದಾಗಿದ್ದಾರೆ. ಅದರ ಅನುಸಾರ ಬಿ ರಿಪೋರ್ಟ್ ಅಥವಾ ಚಾರ್ಜ್ಶೀಟ್ ಸಲ್ಲಿಕೆ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿದುಬಂದಿದೆ.
ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಸಂಬಂಧ ಎಸ್ಐಟಿ ತನಿಖೆ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದೆ. ತನಿಖೆಯ ಕೊನೆ ಹಂತದಲ್ಲಿರುವ ಎಸ್ಐಟಿ ತಂಡವು ಸಿಡಿ ಕೇಸ್ನಲ್ಲಿ ಎರಡು ಪ್ರಕರಣಗಳ ತನಿಖೆ ನಡೆಸುತ್ತಿದೆ. ಒಂದು, ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ದ ಸಂತ್ರಸ್ತ ಯುವತಿ ನೀಡಿದ್ದ ಅತ್ಯಾಚಾರ ಕೇಸ್ ಮತ್ತೊಂದು, ಯುವತಿ ವಿರುದ್ದ ಸ್ವತಃ ರಮೇಶ್ ಜಾರಕಿಹೊಳಿ ನೀಡಿದ್ದ ಬ್ಲ್ಯಾಕ್ಮೇಲ್ ಕೇಸ್.
ತನಿಖೆ ವೇಳೆ ಎಸ್ಐಟಿಗೆ ಸಿಕ್ಕಿದೆ ಸಾಕಷ್ಟು ಸಾಕ್ಷ್ಯಗಳು… ಬ್ಲ್ಯಾಕ್ಮೇಲ್ ಕೇಸ್ನಲ್ಲಿ ಶ್ರವಣ್ ಮತ್ತು ನರೇಶ್ ಗೌಡ ಮತ್ತು ಯುವತಿಯ ಮೊಬೈಲ್ಗಳನ್ನು ವಶಕ್ಕೆ ಪಡೆದಿದ್ದ ಎಸ್ಐಟಿ ತನಿಖಾಧಿಕಾರಿಗಳು ಡೇಟಾ ರಿಟ್ರೀವ್ ಮಾಡಿದ ವೇಳೆ ಹಲವು ಸಾಕ್ಷ್ಯಗಳು ಸಂಗ್ರಹಿಸಿದ್ದಾರೆ. ನರೇಶ್, ಶ್ರವಣ್ ಮತ್ತು ಯುವತಿ ಪರಸ್ಪರ ಹಲವಾರು ಬಾರಿ ಫೋನ್ ನಲ್ಲಿ ಮಾತನಾಡಿರೋದು ಪತ್ತೆಯಾಗಿದೆ.
ಕಾಲ್ ರೆಕಾರ್ಡ್ ಡಿಲೀಟ್ ಮಾಡಿದ್ದ ಮೂವರ ಮೊಬೈಲ್ ಗಳಲ್ಲಿಯೂ ಸಹ ಈಗ ಡೇಟಾ ಮತ್ತೆ ಪಡೆಯಲಾಗಿದೆ. ಸಿ.ಡಿ. ರೆಕಾರ್ಡ್ ಮಾಡಿ ರಿಲೀಸ್ ಮಾಡಲು ಸಂಚು ಮಾಡಿರುವುದೂ ಇದರಿಂದ ಬಯಲಾಗಿದೆ. ತನಿಖೆ ವೇಳೆ ಸಾಕಷ್ಟು ಸಿಸಿಟಿವಿ ದೃಶ್ಯಗಳು ಸಹ ಪತ್ತೆಯಾಗಿವೆ. ಅರೋಪಿಗಳು ಒಟ್ಟಿಗೆ ತಿರುಗಾಡಿರುವುದು. ಒಟ್ಟಿಗೆ ಸೇರಿ ಮಾತುಕತೆ ನಡೆಸಿರೋದು. ವಿಡಿಯೋ ಮಾಡಲು ಕ್ಯಾಮರಾ ಖರೀದಿ ಸೇರಿ ಹಲವು ಸಿಸಿಟಿವಿ ದೃಶ್ಯಗಳು ಪತ್ತೆಯಾಗಿದ್ದವು.
ಎಸ್ಐಟಿ ತನಿಖಾಧಿಕಾರಿಗಳು ಕೊನೆಯ ಹಂತವಾಗಿ ಎಫ್ಎಸ್ಎಲ್ ವರದಿಗಾಗಿ ಕಾಯುತ್ತಿದ್ದಾರೆ. ಯುವತಿಯ ವಾಯ್ಸ್ , ಶ್ರವಣ್ ಮತ್ತು ನರೇಶ್ ವಾಯ್ಸ್ ಸ್ಯಾಂಪಲ್ ಪಡೆಯಲಾಗಿದೆ. ಸಿ.ಡಿ.ಯಲ್ಲಿ ಬಿಡುಗಡೆಯಾಗಿದ್ದ ವಿಡಿಯೋ ದೃಶ್ಯಗಳು ಮತ್ತು ತನಿಖೆ ಸಮಯದಲ್ಲಿ ಕಂಡು ಬಂದಿದ್ದ ಸಿಸಿಟಿವಿ ದೃಶ್ಯಗಳು ಮತ್ತು ಆಡಿಯೋಗಳನ್ನು ಎಫ್ಎಸ್ಎಲ್ ಪರಿಶೀಲನೆಗೆ ರವಾನಿಸಲಾಗಿದೆ.
ಇದೀಗ, ಎಫ್ಎಸ್ಎಲ್ ನೀಡುವ ವರದಿಗಾಗಿ ಕಾಯುತ್ತಿರುವ ಎಸ್ಐಟಿ ತಂಡವು ಎಫ್ಎಸ್ಎಲ್ ವರದಿ ಬರುತ್ತಿದ್ದಂತೆ ತನಿಖೆಗೆ ತಾರ್ಕಿಕ ಅಂತ್ಯ ಕಂಡುಕೊಳ್ಳಲು ಮುಂದಾಗಿದ್ದಾರೆ. ಅದರ ಅನುಸಾರ ಬಿ ರಿಪೋರ್ಟ್ ಅಥವಾ ಚಾರ್ಜ್ಶೀಟ್ ಸಲ್ಲಿಕೆ ಪ್ರಕ್ರಿಯೆ ನಡೆಯಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
(ramesh jarkiholi cd case blackmail case sit investigation in the last leg waiting for fsl report)
ನನಗಿಂತಲೂ 10 ಪಟ್ಟು ಪ್ರಬಲ ಹುಲಿಗಳು ನನ್ನ ಕುಟುಂಬದಲ್ಲಿದ್ದಾರೆ: ಶಾಸಕ ರಮೇಶ್ ಜಾರಕಿಹೊಳಿ ವ್ಯಾಖ್ಯಾನ
Published On - 11:15 am, Fri, 2 July 21