AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಂಜಿನಿಯರಿಂಗ್ ಕಾಲೇಜುಗಳ ಶುಲ್ಕ ಹೆಚ್ಚಳ; ಕಾಲೇಜುಗಳ ಜತೆ ಸಭೆಯ ನಂತರ ಅಂತಿಮ ನಿರ್ಧಾರ: ಸಚಿವ ಡಾ ಅಶ್ವತ್ಥ ನಾರಾಯಣ

Engineering colleges Fees: ಸಭೆ ನಡೆಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುವವರೆಗೂ ಶುಲ್ಕ ಹೆಚ್ಚಳದ ಬಗ್ಗೆ ಯಾವುದೇ ನಿರ್ಧಾರ ಮಾಡುವುದಿಲ್ಲಎಂದು ಅವರು ಸ್ಪಷ್ಟಪಡಿಸಿದರು.

ಎಂಜಿನಿಯರಿಂಗ್ ಕಾಲೇಜುಗಳ ಶುಲ್ಕ ಹೆಚ್ಚಳ; ಕಾಲೇಜುಗಳ ಜತೆ ಸಭೆಯ ನಂತರ ಅಂತಿಮ ನಿರ್ಧಾರ: ಸಚಿವ ಡಾ ಅಶ್ವತ್ಥ ನಾರಾಯಣ
ವಿದ್ಯಾರ್ಥಿಗಳು
TV9 Web
| Updated By: guruganesh bhat|

Updated on: Aug 12, 2021 | 3:23 PM

Share

ಬೆಂಗಳೂರು: ಎಂಜಿನಿಯರ್ ಕಾಲೇಜುಗಳ ಶುಲ್ಕ ಹೆಚ್ಚಳದ ಬಗ್ಗೆ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವಥ್ ನಾರಾಯಣ ತಿಳಿಸಿದರು. ಎಂಜಿನಿಯರಿಂಗ್ ಕಾಲೇಜು ಶುಲ್ಕ ಹೆಚ್ಚಳಕ್ಕೆ ಸಂಬಂಧಿಸಿ ವಿಟಿಯು ವಿಸಿ ನೇತೃತ್ವದಲ್ಲಿ ಈಗಾಗಲೇ ಕಮಿಟಿ ರಚನೆ ಮಾಡಲಾಗಿದೆ. ಮ್ಯಾನೆಜ್‌ಮೆಂಟ್‌ ಕಾಲೇಜುಗಳ ಜೊತೆಯೂ ಸಭೆ ಮಾಡಿ ಅಂತಿಮ ತೀರ್ಮಾನ ಮಾಡ್ತೀವಿ. ಸಭೆ ನಡೆಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುವವರೆಗೂ ಶುಲ್ಕ ಹೆಚ್ಚಳದ ಬಗ್ಗೆ ಯಾವುದೇ ನಿರ್ಧಾರ ಮಾಡುವುದಿಲ್ಲಎಂದು ಅವರು ಸ್ಪಷ್ಟಪಡಿಸಿದರು.

ತಾವು ಉನ್ನತ ಶಿಕ್ಷಣ ಸಚಿವರಾಗಿ ಅಧಿಕಾರ ವಹಿಸಿಕೊಂಡ ದಿನವೇ (ಆಗಸ್ಟ್ 7) ರಾಷ್ಟ್ರೀಯ ಶಿಕ್ಷಣ ನೀತಿ (NEP) ಜಾರಿ ಆದೇಶಕ್ಕೆ ಸಹಿ ಡಾ.ಅಶ್ವತ್ಥ್‌ ನಾರಾಯಣ (Dr Ashwath Narayan) ಸಹಿ ಹಾಕಿದ್ದಾರೆ. ಈಮೂಲಕ 2021-22ನೇ ಸಾಲಿನಿಂದ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗುವುದು ಅಧಿಕೃತವಾದಂತಾಗಿದೆ. ಜತೆಗೆ ಹೊಸ ಶಿಕ್ಷಣ ನೀತಿ ಜಾರಿಗೊಳಿಸಲು ಹೊರಡಿಸಿದ ಉನ್ನತ ಶಿಕ್ಷಣ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಪ್ರಸಕ್ತ ವರ್ಷಕ್ಕೆ ಕಾಲೇಜುಗಳಲ್ಲಿ BA ಅಥವಾ BSC ಪದವಿ ಅಧ್ಯಯನಕ್ಕೆ ಆಯಾ ಕಾಲೇಜುಗಳಲ್ಲಿ ಲಭ್ಯವಿರುವ 2 ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ 3ನೇ ವರ್ಷದ ಆರಂಭದಲ್ಲಿ ಒಂದು ವಿಷಯವನ್ನು ಮೇಜರ್‌ ಆಗಿ, ಇನ್ನೊಂದು ವಿಷಯವನ್ನು ಮೈನರ್‌ ವಿಷಯವನ್ನಾಗಿಯೂ ಅಥವಾ ಎರಡೂ ವಿಷಯಗಳನ್ನು ಮೇಜರ್‌ ಆಗಿ ಆಯ್ಕೆ ಮಾಡಿಕೊಂಡು ಅಧ್ಯಯನ ಮಾಡಬಹುದು. ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳುವ 2 ವಿಷಯಗಳ ಜತೆಗೆ ಕನ್ನಡ ಮತ್ತು ಇನ್ನೊಂದು ಭಾಷಾ ವಿಷಯವನ್ನು ಪ್ರೋಗ್ರಾಂ ವಿನ್ಯಾಸಕ್ಕೆ ಅನುಗುಣವಾಗಿ ಮುಕ್ತ ಆಯ್ಕೆಗಳು ಮತ್ತು ಬಹುಶಿಸ್ತೀಯ ಆಯ್ಕೆಗಳನ್ನು ಮಾಡಿಕೊಳ್ಳಬೇಕು.

ಪಿಯುಸಿ ಅಥವಾ 10+2 ಹಂತದಲ್ಲಿ ಕನ್ನಡ ಕಲಿಯದವರಿಗೆ ಅಥವಾ ಕನ್ನಡ ಮಾತೃ ಭಾಷೆಯಲ್ಲದವರಿಗೆ ಕನ್ನಡದ ಬೇರೆ ಪಠ್ಯಕ್ರಮ ರೂಪಿಸಿ ಬೋಧಿಸಲು ಅವಕಾಶ ಒದಗಿಸಲಾಗಿದೆ. ಮಾತೃಭಾಷೆ ಕಲಿಕೆಗೆ ಹೆಚ್ಚು ಮಹತ್ವ ನೀಡಲಾಗಿದೆ. ವಿಷಯಾಧಾರಿತ ಪದವಿ ಅಧ್ಯಯನಗಳಿಗೆ (B.Com, BCA, BBA, BVA, BPAಯಂತಹ ಕೋರ್ಸ್​ಗಳು) ಸಂಬಂಧಪಟ್ಟ ಹಾಗೆ ವಿಷಯಗಳನ್ನು ಬಹುಶಿಸ್ತೀಯ ಆಯ್ಕೆ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ಅವರು ಕನ್ನಡ ಹಾಗೂ ಮತ್ತೊಂದು ಭಾಷೆ ಮತ್ತು ಪಠ್ಯಕ್ರಮಕ್ಕೆ ಅನುಗುಣವಾಗಿ ಮುಕ್ತ ಆಯ್ಕೆಗಳನ್ನು ಮತ್ತು  ಬಹುಶಿಸ್ತೀಯ ಆಯ್ಕೆಗಳನ್ನು ಮಾಡಿಕೊಳ್ಳಬೇಕು.

ಇದನ್ನೂ ಓದಿ: 

ಕೊನೆ ಅರ್ಧ ಗಂಟೆ ಪರೀಕ್ಷೆ ಆಕ್ಸಿಜನ್ ಸಪೋರ್ಟ್ ಮೇಲಿದ್ದು ಬರೆದ ಈ ತಾಂಡಾ ಹುಡುಗಿ ಎಲ್ಲ 625 ಅಂಕ ಬಾಚಿಕೊಂಡಳು!

PUC Admission 2021: ವಿದ್ಯಾರ್ಥಿಗಳೇ ಗಮನಿಸಿ, ಪಿಯು ಪ್ರವೇಶಕ್ಕೆ ಸುತ್ತೋಲೆ ಪ್ರಕಟ; ಅಡ್ಮಿಶನ್ ಮಾಡಿಸಲು ಎಲ್ಲಿಯವರೆಗಿದೆ ಅವಕಾಶ? ಇಲ್ಲಿದೆ ವಿವರ

(Higher Education Minister Dr Ashwath Narayan says Increase in fees for engineering colleges Final decision taken after meeting with colleges)