AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

KCET Admit Card 2021: ಕೆಸಿಇಟಿ ಪರೀಕ್ಷೆ ಪ್ರವೇಶ ಪತ್ರ ಪ್ರಕಟ; ಇಲ್ಲಿ ಡೌನ್​ಲೋಡ್​ ಮಾಡಿ

ಕೆಸಿಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು kea.kar.nic.in ಎಂಬ ಅಧಿಕೃತ ವೆಬ್​ಸೈಟ್​ನಿಂದ ಪ್ರವೇಶಾತಿ ಪತ್ರವನ್ನು ಡೌನ್​ಲೋಡ್​ ಮಾಡಿಕೊಳ್ಳಬಹುದು.

KCET Admit Card 2021: ಕೆಸಿಇಟಿ ಪರೀಕ್ಷೆ ಪ್ರವೇಶ ಪತ್ರ ಪ್ರಕಟ; ಇಲ್ಲಿ ಡೌನ್​ಲೋಡ್​ ಮಾಡಿ
ಪ್ರಾತಿನಿಧಿಕ ಚಿತ್ರ
TV9 Web
| Updated By: Skanda|

Updated on: Aug 13, 2021 | 10:18 AM

Share

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಆಯೋಜಿಸಲಾಗುವ ಕೆಸಿಇಟಿ ಪರೀಕ್ಷೆಗೆ ದಿನಾಂಕ ಸನ್ನಿಹಿತವಾಗಿದೆ. ಈ ಹಿನ್ನೆಲೆಯಲ್ಲಿ 2021ನೇ ಸಾಲಿನ ಪರೀಕ್ಷೆಯ ಪ್ರವೇಶಾತಿ ಪತ್ರವನ್ನು ಕೆಇಎ (Karnataka Examinations Authority) ಬಿಡುಗಡೆ ಮಾಡಿದ್ದು, ಅಧಿಕೃತ ವೆಬ್​ಸೈಟ್​ನಲ್ಲಿ ಲಭ್ಯವಿದೆ. ಸದರಿ ಪರೀಕ್ಷೆಯನ್ನು ಬರೆಯಲಿರುವ ವಿದ್ಯಾರ್ಥಿಗಳು ವೆಬ್​ಸೈಟ್​ನಿಂದ ಪ್ರವೇಶಾತಿ ಪತ್ರವನ್ನು ಡೌನ್​ಲೋಡ್​ ಮಾಡಿಕೊಳ್ಳಬೇಕಿದ್ದು, ಅದಕ್ಕೆ ಸಂಬಂಧಪಟ್ಟ ಮಾಹಿತಿ ಇಲ್ಲಿದೆ.

ಕೆಸಿಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು kea.kar.nic.in ಎಂಬ ಅಧಿಕೃತ ವೆಬ್​ಸೈಟ್​ನಿಂದ ಪ್ರವೇಶಾತಿ ಪತ್ರವನ್ನು ಡೌನ್​ಲೋಡ್​ ಮಾಡಿಕೊಳ್ಳಬಹುದು. ಆದರೆ, ಡೌನ್​ಲೋಡ್​ಗೂ ಮುನ್ನ ಕೆಲ ನಿಯಮಗಳನ್ನು ಪಾಲಿಸುವುದು ಅವಶ್ಯಕವಾಗಿದ್ದು, ತಮ್ಮ ಲಾಗಿನ್​ ವಿವರಗಳನ್ನು ಸಲ್ಲಿಸಬೇಕಾಗಿದೆ.

ಪ್ರವೇಶ ಪತ್ರ ಡೌನ್​ಲೋಡ್​ ಮಾಡಲು ಹೀಗೆ ಮಾಡಿ: 1. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್​ಸೈಟ್​ kea.kar.nic.in ಗೆ ಮೊದಲು ಭೇಟಿ ನೀಡಿ 2. ವೆಬ್​ಸೈಟ್​ ತೆರೆಯುತ್ತಿದ್ದಂತೆಯೇ ಮುಖಪುಟದಲ್ಲಿ ನಿಮಗೆ ಸಾಕಷ್ಟು ಆಯ್ಕೆಗಳು ಸಿಗಲಿದ್ದು, ಅದರಲ್ಲಿ KCET Admit Card 2021 ಎಂಬ ಲಿಂಕ್​ ಮೇಲೆ ಕ್ಲಿಕ್ ಮಾಡಿ 3. ಲಿಂಕ್​ ತೆರೆದ ನಂತರ ನಿಮಗೆ ಲಾಗಿನ್​ ಆಗಲು ಆಯ್ಕೆ ಕಾಣಿಸಲಿದ್ದು, ಅದರಲ್ಲಿ ನಿಮ್ಮ ಲಾಗಿನ್​ ವಿವರಗಳನ್ನು ಸರಿಯಾಗಿ ನಮೂದಿಸಿ 4. ಲಾಗಿನ್​ ಆದ ಬಳಿಕ ಪರೀಕ್ಷೆಯ ಪ್ರವೇಶಾತಿ ಪತ್ರವು ಸ್ಕ್ರೀನ್​ನಲ್ಲಿ ಕಾಣಿಸಿಕೊಳ್ಳಲಿದೆ 5. ಪ್ರವೇಶಾತಿ ಪತ್ರದಲ್ಲಿರುವ ವಿವರಗಳನ್ನು ಒಮ್ಮೆ ಸರಿಯಾಗಿ ಗಮನಿಸಿ 6. ಬಳಿಕ ಅದೇ ಪತ್ರವನ್ನು ಡೌನ್​ಲೋಡ್​ ಮಾಡಿಕೊಳ್ಳಿ 7. ಮುಂದಿನ ಅವಶ್ಯಕತೆಗೆ ಅನುಗುಣವಾಗಿ ಡೌನ್​ಲೋಡ್​ ಮಾಡಿದ ಪ್ರವೇಶಾತಿ ಪತ್ರದ ಮುದ್ರಿತ ಪ್ರತಿಯನ್ನು ಪಡೆದುಕೊಳ್ಳಿ

ಈ ಬಾರಿ ಕೆಸಿಇಟಿ (Karnataka CET) ಪರೀಕ್ಷೆಯನ್ನು ಆಗಸ್ಟ್​ 28, 29 ಹಾಗೂ 30ರಂದು ನಿಗದಿಪಡಿಸಲಾಗಿದೆ. ಪರೀಕ್ಷೆ ನಡೆಸಲು ರಾಜ್ಯಾದ್ಯಂತ 500 ಪರೀಕ್ಷಾ ಕೇಂದ್ರ ತೆರೆಯಲು ಸಿದ್ಧತೆಯನ್ನೂ ಮಾಡಿಕೊಳ್ಳಲಾಗಿದೆ. ಪರೀಕ್ಷೆಯನ್ನು ಕರ್ನಾಟಕ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ನಿಯಮಾವಳಿಗಳಿಗೆ ಅನುಸಾರವಾಗಿ ಆಯೋಜಿಸಲಾಗುತ್ತಿದ್ದು, ವಿದ್ಯಾರ್ಥಿಗಳು ಕೊರೊನಾ ನಿಯಮಾವಳಿಗಳನ್ನು ಪಾಲಿಸಿ ಪರೀಕ್ಷೆ ಬರೆಯಬೇಕಿದೆ.

(KCET admit card 2021 released how to download direct link available here)

ಇದನ್ನೂ ಓದಿ: KCET Admit Card 2021: ಕೆಸಿಇಟಿ ಪರೀಕ್ಷೆ ಪ್ರವೇಶ ಪತ್ರ ನಾಳೆ ಬಿಡುಗಡೆ; ಆನ್​ಲೈನ್ ಮೂಲಕ ಹೀಗೆ ಡೌನ್​ಲೋಡ್ ಮಾಡಿಕೊಳ್ಳಿ.. 

CET 2021: ಆಗಸ್ಟ್​ 28,29 ಮತ್ತು 30ರಂದು ಸಿಇಟಿ; ಇಲ್ಲಿದೆ ಕೆಲವು ಮುಖ್ಯ ವಿವರ

ಆಂಗ್ಲರಿಗೆ ಉಚಿತವಾಗಿ ತನ್ನ ವಿಕೆಟ್ ನೀಡಿದ ಶುಭ್​ಮನ್ ಗಿಲ್
ಆಂಗ್ಲರಿಗೆ ಉಚಿತವಾಗಿ ತನ್ನ ವಿಕೆಟ್ ನೀಡಿದ ಶುಭ್​ಮನ್ ಗಿಲ್
ಪೊಲೀಸರ ಎದುರಲ್ಲೇ ನಟ ಪ್ರಥಮ್ ಮುಖಕ್ಕೆ ಮಸಿ; ವಿಡಿಯೋ ಇಲ್ಲಿದೆ ನೋಡಿ
ಪೊಲೀಸರ ಎದುರಲ್ಲೇ ನಟ ಪ್ರಥಮ್ ಮುಖಕ್ಕೆ ಮಸಿ; ವಿಡಿಯೋ ಇಲ್ಲಿದೆ ನೋಡಿ
ಐಶ್ವರ್ಯ ರೈ ಹೇಗೆ ಸಹಿಸ್ಕೊಳ್ತಾಳೋ? ಟ್ರೋಲ್ ಆದ ಜಯಾ ಬಚ್ಚನ್
ಐಶ್ವರ್ಯ ರೈ ಹೇಗೆ ಸಹಿಸ್ಕೊಳ್ತಾಳೋ? ಟ್ರೋಲ್ ಆದ ಜಯಾ ಬಚ್ಚನ್
ನಾನು ದರ್ಶನ್ ಪರ, ಪ್ರಥಮ್​ದು ತುಸು ಹೆಚ್ಚಾಯ್ತು: ಧ್ರುವ ಸರ್ಜಾ
ನಾನು ದರ್ಶನ್ ಪರ, ಪ್ರಥಮ್​ದು ತುಸು ಹೆಚ್ಚಾಯ್ತು: ಧ್ರುವ ಸರ್ಜಾ
ಸರ್ಕಾರಿ ಶಾಲೆಯ ನೀರಿನ ಟ್ಯಾಂಕ್​​ ವಿಷ : ತಪ್ಪಿದ ಅನಾಹುತ!
ಸರ್ಕಾರಿ ಶಾಲೆಯ ನೀರಿನ ಟ್ಯಾಂಕ್​​ ವಿಷ : ತಪ್ಪಿದ ಅನಾಹುತ!
ನನಗೂ ಕಹಿ ಅನುಭವ ಆಗಿತ್ತು: ಅಭಿಮಾನಿಗಳ ಅತಿರೇಕದ ಬಗ್ಗೆ ಯೋಗಿ ಮಾತು
ನನಗೂ ಕಹಿ ಅನುಭವ ಆಗಿತ್ತು: ಅಭಿಮಾನಿಗಳ ಅತಿರೇಕದ ಬಗ್ಗೆ ಯೋಗಿ ಮಾತು
ಮತಗಳ್ಳತನ ಬಗ್ಗೆ ರಾಹುಲ್ ಗಾಂಧಿ ಬಳಿ ಎಲ್ಲಾ ದಾಖಲೆಗಳಿವೆ: ಸಿದ್ದರಾಮಯ್ಯ
ಮತಗಳ್ಳತನ ಬಗ್ಗೆ ರಾಹುಲ್ ಗಾಂಧಿ ಬಳಿ ಎಲ್ಲಾ ದಾಖಲೆಗಳಿವೆ: ಸಿದ್ದರಾಮಯ್ಯ
ದೊಡ್ಡಬಳ್ಳಾಪುರ: ಕಾರು ಚಾಲಕನ ಮೇಲೆ ಟೋಲ್​ ಸಿಬ್ಬಂದಿ ಮಾರಣಾಂತಿಕ ಹಲ್ಲೆ
ದೊಡ್ಡಬಳ್ಳಾಪುರ: ಕಾರು ಚಾಲಕನ ಮೇಲೆ ಟೋಲ್​ ಸಿಬ್ಬಂದಿ ಮಾರಣಾಂತಿಕ ಹಲ್ಲೆ
W,W,W,W,W,W: ಇಂಗ್ಲೆಂಡ್​ನಲ್ಲಿ ಯುಜ್ವೇಂದ್ರ ಚಹಲ್ ಸ್ಪಿನ್ ಮೋಡಿ
W,W,W,W,W,W: ಇಂಗ್ಲೆಂಡ್​ನಲ್ಲಿ ಯುಜ್ವೇಂದ್ರ ಚಹಲ್ ಸ್ಪಿನ್ ಮೋಡಿ
ಆಗಸ್ಟ್ ಕೊನೆಯಲ್ಲಿ ಮತ್ತೆ ಟೋಯಿಂಗ್ ಶುರು: ಗೃಹ ಸಚಿವ ಪರಮೇಶ್ವರ್ ಘೋಷಣೆ
ಆಗಸ್ಟ್ ಕೊನೆಯಲ್ಲಿ ಮತ್ತೆ ಟೋಯಿಂಗ್ ಶುರು: ಗೃಹ ಸಚಿವ ಪರಮೇಶ್ವರ್ ಘೋಷಣೆ