SIT ಯಿಂದ ವಿಚಾರಣೆಗೊಳಪಟ್ಟ ಐವರ ಬಗ್ಗೆ ದೂರುದಾರ ದಿನೇಶ್ ಕಲ್ಲಹಳ್ಳಿ ಹೇಳೋದೇನು?

|

Updated on: Mar 13, 2021 | 10:53 AM

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಎಸ್‌ಐಟಿಯಿಂದ ವಿಚಾರಣೆಗೊಳಪಟ್ಟ ಆ ಐದೂ ಮಂದಿಯ ಪರಿಚಯ ತನಗಿಲ್ಲ ಎನ್ನುತ್ತಿದ್ದಾರೆ ದೂರುದಾರ ದಿನೇಶ್ ಕಲ್ಲಹಳ್ಳಿ. ಈ ಪ್ರಕರಣ ಬೆಳಕಿಗೆ ಬಂದಾಗ ಜೋಶ್‌ನಲ್ಲಿದ್ದ ದಿನೇಶ್ ಕಲ್ಲಹಳ್ಳಿ ಇದೀಗ ಮನೆಯಿಂದ ಹೊರಬರುತ್ತಿಲ್ಲ.

SIT ಯಿಂದ ವಿಚಾರಣೆಗೊಳಪಟ್ಟ ಐವರ ಬಗ್ಗೆ ದೂರುದಾರ ದಿನೇಶ್ ಕಲ್ಲಹಳ್ಳಿ ಹೇಳೋದೇನು?
SIT ಯಿಂದ ವಿಚಾರಣೆಗೊಳಪಟ್ಟ ಐದು ಮಂದಿಯ ಬಗ್ಗೆ ಏನನ್ನುತ್ತಾರೆ ದೂರುದಾರ ದಿನೇಶ್ ಕಲ್ಲಹಳ್ಳಿ?
Follow us on

ರಾಮನಗರ: ರಮೇಶ್ ಜಾರಕಿಹೊಳಿ ಸಿಡಿ ಸುದ್ದಿ ಸ್ಫೋಟ ಪ್ರಕರಣದಲ್ಲಿ ಹಲ್ಲಿಲ್ಲದ ಹಾವಿನಂತಿದ್ದರೂ, ನಿರ್ದಿಷ್ಟವಾಗಿ ಗುರಿಯತ್ತ ಸಾಗಿರುವ ವಿಚಾರಣಾ ಸಂಸ್ಥೆ ಎಸ್‌ಐಟಿ ಐದು ಮಂದಿಯನ್ನು ನಿನ್ನೆ ವಿಚಾರಣೆಗೆಂದು ಕರೆಯಿಸಿಕೊಂಡು, ಅಷ್ಟೇ ವೇಗದಲ್ಲಿ ಬಿಟ್ಟುಕಳುಹಿಸಿದೆ. ಪ್ರಕರಣದಲ್ಲಿ ಯಾರೂ ದೂರು ನೀಡದಿರುವುದರಿಂದ ಎಸ್‌ಐಟಿ ಹೆಚ್ಚಿನ ಪ್ರಗತಿ ಸಾಧಿಸಿಲ್ಲವಾದರೂ ವಿಚಾರಣೆಗೊಳಪಟ್ಟ ಐದೂ ಮಂದಿ, ಜೊತೆಗೆ ಇನ್ನಿಬ್ಬರ ಮೇಲೆ ನಿಗಾವಹಿಸಿದೆ ಎನ್ನಲಾಗಿದೆ. ಇದೇ ವೇಳೆ, ಪ್ರಕರಣವನ್ನು ಬಯಲು ಮಾಡಿದ ದೂರುದಾರ ದಿನೇಶ್ ಕಲ್ಲಹಳ್ಳಿ SIT ಯಿಂದ ವಿಚಾರಣೆಗೊಳಪಟ್ಟ ಐದೂ ಮಂದಿಯ ಬಗ್ಗೆ ಏನನ್ನುತ್ತಾರೆ ಎಂಬ ಕುತೂಹಲ ಮೂಡಿದೆ.

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಎಸ್‌ಐಟಿಯಿಂದ ವಿಚಾರಣೆಗೊಳಪಟ್ಟ ಆ ಐದೂ ಮಂದಿಯ ಪರಿಚಯ ತನಗಿಲ್ಲ ಎನ್ನುತ್ತಿದ್ದಾರೆ ದೂರುದಾರ ದಿನೇಶ್ ಕಲ್ಲಹಳ್ಳಿ. ಈ ಪ್ರಕರಣ ಬೆಳಕಿಗೆ ಬಂದಾಗ ಜೋಶ್‌ನಲ್ಲಿದ್ದ ದಿನೇಶ್ ಕಲ್ಲಹಳ್ಳಿ ಇದೀಗ ಮನೆಯಿಂದ ಹೊರಬರುತ್ತಿಲ್ಲ. ಜೊತೆಗೆ ಪ್ರಕರಣದ ಬಗ್ಗೆ ಆಸಕ್ತಿ ತೋರಿಸುತ್ತಿಲ್ಲ. ಹಾಗಾಗಿ ಪ್ರಕರಣದ ವಿಚಾರಣೆ ಮುಂದುವರಿಯುತ್ತಿರುವ ಹಾಗೆ ದೂರುದಾರ ದಿನೇಶ್ ಕಲ್ಲಹಳ್ಳಿಗೆ ಭಯ ಶುರುವಾಯ್ತಾ? ಎಂಬ ಪ್ರಶ್ನೆ ಮೂಡಿದೆ.

Published On - 10:46 am, Sat, 13 March 21