ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ವಾಪಸ್​ ಪಡೆಯುವಂತೆ ಒತ್ತಡ: ಪೊಲೀಸ್ ಆಯುಕ್ತರಿಗೆ ಸಂತ್ರಸ್ತೆಯಿಂದ ಪತ್ರ

ಇತ್ತ ರಮೇಶ್ ಜಾರಕಿಹೊಳಿ ಕೋವಿಡ್ ನೆಪ ಹೇಳಿದ್ದಾರೆ. ಇದುವರೆಗೆ ವಿಚಾರಣೆಗೆ ಹಾಜರಾಗಿಲ್ಲ. ಕಬ್ಬನ್ ಪಾರ್ಕ್ ನಲ್ಲಿ ನಾನು ನೀಡಿದ್ದ ದೂರಿನ ಅನ್ವಯ ವಿಚಾರಣೆಯನ್ನೂ ನಡೆಸಿಲ್ಲಎಂದು ಎಂದು ಸಂತ್ರಸ್ತೆ ಅರೋಪ ಮಾಡಿ, ಕಮಿಷನರ್ ಕಮಲ್ ಪಂತ್ ಹಾಗು ಪ್ರಕರಣದ ತನಿಖಾ ಅಧಿಕಾರಿ ಎಸಿಪಿ ಕವಿತಾಗೆ ದೂರು ಸಲ್ಲಿಸಿದ್ದಾರೆ. 

  • TV9 Web Team
  • Published On - 9:35 AM, 5 May 2021
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ವಾಪಸ್​ ಪಡೆಯುವಂತೆ ಒತ್ತಡ: ಪೊಲೀಸ್ ಆಯುಕ್ತರಿಗೆ ಸಂತ್ರಸ್ತೆಯಿಂದ ಪತ್ರ
ಸಿಡಿಯಲ್ಲಿರುವ ಸಂತ್ರಸ್ತ ಯುವತಿ

ಬೆಂಗಳೂರು: ಇತ್ತೀಚೆಗೆ ಕೊರೊನಾ ಸಂಕಷ್ಟ ಕಾಲದಲ್ಲಿ ಒಂದಷ್ಟು ತಣ್ಣಗಾಗಿದ್ದ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಮತ್ತೆ ಸುದ್ದಿ ಮಾಡುತ್ತಿದೆ. ಪ್ರಕರಣವನ್ನು ಹಿಂಪಡೆಯುಂವತೆ  ತನ್ನ ವಕೀಲರಾದ ಸೂರ್ಯ ಮುಕುಂದರಾಜ್ ಮತ್ತು ಜಗದೀಶ್‌ಗೆ ಆಮಿಷ ಒಡ್ಡುತ್ತಿರುವುದಾಗಿ ಸಂತ್ರಸ್ತೆ ಆರೋಪ ಮಾಡಿದ್ದಾರೆ. 

ಈ ಸಂಬಂಧ ಪ್ರಕರಣದ ತನಿಖಾಧಿಕಾರಿ ಎಸಿಪಿ ಕವಿತಾ ಮತ್ತು ಬೆಂಗಳೂರು ಪೊಲೀಸ್ ಆಯುಕ್ತರಿಗೆ ಸಂತ್ರಸ್ತೆ ಪತ್ರ ರವಾನಿಸಿದ್ದಾರೆ.  ಪ್ರಕರಣ ಹಿಂಪಡೆಯುವಂತೆ ವಕೀಲರಿಗೆ ಆಮಿಷ ಒಡ್ಡುತ್ತಿರುವುದಾಗಿ ಸಂತ್ರಸ್ತೆ ಆರೋಪ ಮಾಡಿದ್ದಾರೆ.

ಮೊನ್ನೆ ಸೋಮವಾರ ( ಮೇ 3)  ಸಂಜೆ 4:37ಕ್ಕೆ ಪ್ರದೀಪ್ ಎಂಬಾತ ವಾಟ್ಸಪ್ ಕಾಲ್ ಮಾಡಿದ್ದಾನೆ. I have v good offer to you ಎಂದು ಆಮಿಷ ಒಡ್ಡಿದ್ದಾರೆ. ಕೇಸ್ ಹಿಂಪಡೆಯಿರಿ .. ಪಡೆದರೆ ಕೋಟ್ಯಾಂತರ ರೂ ಗೆ ಸೆಟಲ್ ಮೆಂಟ್ ಮಾಡುವುದಾಗಿ ಆಮಿಷವೊಡ್ಡಿದ್ದಾರೆ ಎಂದು ಸಂತ್ರಸ್ತೆ ದೂರಿದ್ದಾರೆ.

ಇತ್ತ ರಮೇಶ್ ಜಾರಕಿಹೊಳಿ ಕೋವಿಡ್ ನೆಪ ಹೇಳಿದ್ದಾರೆ. ಇದುವರೆಗೆ ವಿಚಾರಣೆಗೆ ಹಾಜರಾಗಿಲ್ಲ. ಕಬ್ಬನ್ ಪಾರ್ಕ್ ನಲ್ಲಿ ನಾನು ನೀಡಿದ್ದ ದೂರಿನ ಅನ್ವಯ ವಿಚಾರಣೆಯನ್ನೂ ನಡೆಸಿಲ್ಲಎಂದು ಎಂದು ಸಂತ್ರಸ್ತೆ ಅರೋಪ ಮಾಡಿ, ಕಮಿಷನರ್ ಕಮಲ್ ಪಂತ್ ಹಾಗು ಪ್ರಕರಣದ ತನಿಖಾ ಅಧಿಕಾರಿ ಎಸಿಪಿ ಕವಿತಾಗೆ ದೂರು ಸಲ್ಲಿಸಿದ್ದಾರೆ.

ramesh-jarkiholi-cd-case-victim-alleges-whatsapp-video-call-threat-to-take-back-the-case 1

ಪೊಲೀಸ್ ಆಯುಕ್ತರಿಗೆ ಸಂತ್ರಸ್ತೆಯಿಂದ ಪತ್ರ

(ramesh jarkiholi cd case victim alleges whatsapp video call threat to take back the case)

Also Read

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಎಸ್​ಐಟಿ ತನಿಖೆ ಮುಂದುವರಿಕೆಗೆ ಹೈಕೋರ್ಟ್​ ಗ್ರೀನ್​ ಸಿಗ್ನಲ್​