ಪ್ರಧಾನಿ ಮೋದಿ ಬಳಿ ಸಿಡಿ ಯುವತಿ ರಕ್ಷಣೆ ಪಡೆಯಲಿ- ಮಾಜಿ ಮುಖ್ಯಮಂತ್ರಿ ಎಚ್​ಡಿ ಕುಮಾರಸ್ವಾಮಿ ಸಲಹೆ

ಸಿಡಿಯಲ್ಲಿದ್ದ ಯುವತಿ ಏನು ಹೇಳಿದ್ದಾರೆಂದು ನನಗೆ ಗೊತ್ತಿಲ್ಲ. ಆ ಯುವತಿ ತಂದೆ, ತಾಯಿಯ ರಕ್ಷಣೆ ಕೋರಿಕೆ ವಿಚಾರ. ಅವರಿಗೆ ರಕ್ಷಣೆ ನೀಡುವುದು ರಾಜ್ಯ ಸರ್ಕಾರದ ಕರ್ತವ್ಯ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ. ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಪ್ರಧಾನಿ ಮೋದಿ ಬಳಿ ಸಿಡಿ ಯುವತಿ ರಕ್ಷಣೆ ಪಡೆಯಲಿ- ಮಾಜಿ ಮುಖ್ಯಮಂತ್ರಿ ಎಚ್​ಡಿ ಕುಮಾರಸ್ವಾಮಿ ಸಲಹೆ
ರಮೇಶ್​ ಜಾರಕಿಹೊಳಿ ಮತ್ತು ಹೆಚ್​.ಡಿ.ಕುಮಾರಸ್ವಾಮಿ
Follow us
guruganesh bhat
| Updated By: ಸಾಧು ಶ್ರೀನಾಥ್​

Updated on: Mar 25, 2021 | 3:13 PM

ಬೀದರ್: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಹೆಣ್ಣುಮಗಳು ಯಾರದೋ ಕುತಂತ್ರಕ್ಕೆ ಒಳಗಾಗಿದ್ದಾಳೆ. ಆಕೆ ರಹಸ್ಯ ಸ್ಥಳದಿಂದ ವಿಡಿಯೋ ಬಿಡುಗಡೆ ಮಾಡೋದು ಬಿಡಲಿ. ನ್ಯಾಯಕ್ಕಾಗಿ ಹೈಕೋರ್ಟ್​ನ ಮುಖ್ಯ ನ್ಯಾಯಾಧೀಶರನ್ನು ಭೇಟಿ ಮಾಡಿ ರಕ್ಷಣೆ ಪಡೆಯಲಿ. ಇಲ್ಲದಿದ್ರೆ ವಿಪಕ್ಷ ನಾಯಕರನ್ನ ಭೇಟಿಯಾಗಿ ರಕ್ಷಣೆ ಪಡೆಯಲಿ. ರಾಜ್ಯ ಸರ್ಕಾರದ ಮೇಲೆ ನಿಮಗೆ ನಂಬಿಕೆ ಇಲ್ಲದಿದ್ದರೆ ಪ್ರಧಾನಿ ನರೇಂದ್ರ ಮೋದಿಗೆ ಸಂದೇಶ ಕಳಿಸಿ ರಕ್ಷಣೆ ಪಡೆಯಲಿ ಎಂದು ಸಿಡಿಯಲ್ಲಿದ್ದ ಯುವತಿ ಎರಡನೇ ವಿಡಿಯೋ ಬಿಡುಗಡೆ ವಿಚಾರವಾಗಿ ಜಿಲ್ಲೆಯ ಬಸವಕಲ್ಯಾಣದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.

ಇತ್ತ ರಮೇಶ್ ಜಾರಕಿಹೊಳಿ ಪ್ರಕರಣದ ಯುವತಿ ಎರಡನೇ ಸಿಡಿ ಬಿಡುಗಡೆ ಮಾಡಿರುವ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಬೇರೆ ವಿಚಾರದಲ್ಲಿ ನಾನು ನ್ಯಾಯಾಲಯಕ್ಕೆ ಹೋಗಿದ್ದೆ. ಸಿಡಿಯಲ್ಲಿದ್ದ ಯುವತಿ ಏನು ಹೇಳಿದ್ದಾರೆಂದು ನನಗೆ ಗೊತ್ತಿಲ್ಲ. ಆ ಯುವತಿ ತಂದೆ, ತಾಯಿಯ ರಕ್ಷಣೆ ಕೋರಿಕೆ ವಿಚಾರ. ಅವರಿಗೆ ರಕ್ಷಣೆ ನೀಡುವುದು ರಾಜ್ಯ ಸರ್ಕಾರದ ಕರ್ತವ್ಯ ಎಂದು ಡಿಕೆಶಿ ಪ್ರತಿಕ್ರಿಯೆ ನೀಡಿದ್ದಾರೆ.

ರಮೇಶ್ ಜಾರಕಿಹೊಳಿ ಹೇಳಿದ್ದೇನು?

ಇಂತಹ 10 ಸಿಡಿಗಳು ಬಂದರೂ ನಾನು ಎದುರಿಸುತ್ತೇನೆ. ತಪ್ಪು ಮಾಡಿದವರನ್ನು ಜೈಲಿಗೆ ಹಾಕುವವರೆಗೂ ಬಿಡಲ್ಲ. ನಾನು ತಪ್ಪು ಮಾಡಿಲ್ಲ, ನಾನು ಆರೋಪಮುಕ್ತನಾಗ್ತೇನೆ. ಯುವತಿ ಕೈಗೊಂಬೆಯಾಗಿದ್ದಾರೆ. ಅವಳನ್ನು ಬಳಸಿಕೊಂಡು ನನ್ನ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂದು ಮಾಜಿ ಸಚಿವ,ಶಾಸಕ ರಮೇಶ್ ಜಾರಕಿಹೊಳಿ ಬೆಂಗಳೂರಿನಲ್ಲಿ ಹೇಳಿದರು.

ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಇದರ ಹಿಂದೆ ದೊಡ್ಡ ಪ್ರಮಾಣದ ಷಡ್ಯಂತ್ರ ನಡೆಯುತ್ತಿದೆ. ಈಗ ನನ್ನ ಜೇಬಿನಲ್ಲಿಯೇ ನನ್ನ ವಿರುದ್ಧ ಷಡ್ಯಂತ್ರ ನಡೆಯುತ್ತಿರುವುದರ ಕುರಿತು ಸಾಕ್ಷಿ ಇದೆ. ಷಡ್ಯಂತ್ರ ನಡೆಯುತ್ತಿರುವುರ ಕುರಿತು ಸಾಕ್ಷಿ ಬಿಡುಗಡೆ ಮಾಡಿದರೆ ನೀವು ಸಹ ದಂಗಾಗುತ್ತೀರಿ’ ಎಂದರು.

ಇದನ್ನೂ ಓದಿ: ಅಶ್ಲೀಲ ಸಿಡಿ ಪ್ರಕರಣ: ರಮೇಶ್ ಜಾರಕಿಹೊಳಿ ಮೊಬೈಲ್ ವಶಕ್ಕೆ ಪಡೆದ ಎಸ್​ಐಟಿ

ಸಿಡಿ ಇದೆ ಅದಕ್ಕೇ ವಿಲಿವಿಲಿ ಅಂತ ಒದ್ದಾಡ್ತಿದ್ದಾರೆ: ನಂಗೆ ಸಿಡಿಯೇ ಮುಖ್ಯ ಎಂದ ಸಿದ್ದರಾಮಯ್ಯ

ಯುವತಿ ಪತ್ತೆಗೆ 22 ಅಧಿಕಾರಿಗಳ ತಂಡ ರಚನೆ: ಗೃಹ ಸಚಿವ ಬಸವರಾಜ್ ಬೊಮ್ಮಾಯಿ