ಬೆಂಗಳೂರು: ಈ ಮೊದಲು ದೂರು ನೀಡಿದ್ದ ಆಧಾರದ ಮೇಲೆ ಸಿಡಿ ಲೇಡಿ ಈ ಬಾರಿ ಹೇಳಿಕೆ ನೀಡಿದ್ದಾರಂತೆ. ಯುವತಿ ಹಿಂದಿನ ದೂರನ್ನೇ ಯಥಾವತ್ತಾಗಿ ಹೇಳಿಕೆ ನೀಡಿರುವ ಮಾಹಿತಿ ಸಿಕ್ಕಿದೆ. ಅಂದ ಹಾಗೆ, ಸದ್ಯ, ಟೆಕ್ನಿಕಲ್ ವಿಂಗ್ನಲ್ಲಿ CD ಲೇಡಿ ಹೇಳಿಕೆ ಮುಗಿಸಿ ವಾಪಸ್ ಆಗಿದ್ದಾರೆ. ಆಡುಗೋಡಿಯಲ್ಲಿರುವ ಟೆಕ್ನಿಕಲ್ ವಿಂಗ್ನಲ್ಲಿ ಸಂತ್ರಸ್ತೆಯ ಆಡಿಯೋ, ವಿಡಿಯೋ ಪಡೆಯಲಾಗಿದೆ ಎಂದು ತಿಳಿದುಬಂದಿದೆ. ಧ್ವನಿ ಪರೀಕ್ಷೆ ನಡೆಸಲು ಎಸ್ಐಟಿ ಅಧಿಕಾರಿಗಳು ಸಿಡಿ ಲೇಡಿಯ ಆಡಿಯೋ ಪಡೆದಿರುವ ಮಾಹಿತಿ ಸಿಕ್ಕಿದೆ.
ಈ ಮಧ್ಯೆ, ಇಂದು ಸಿಡಿ ಲೇಡಿಯನ್ನ ಮೆಡಿಕಲ್ ಟೆಸ್ಟ್ಗೆ ಒಳಪಡಿಸಲ್ಲ. ಹಾಗಾಗಿ, ಪೊಲೀಸರು ನಾಳೆ ಆಕೆಯನ್ನು ವೈದ್ಯಕೀಯ ತಪಾಸಣೆಗೆ ಕರೆದೊಯ್ಯುವ ಸಾಧ್ಯತೆಯಿದೆ. ಇಂದು ಪ್ರಯಾಣ, ಜಡ್ಜ್ ಮುಂದೆ ಹೇಳಿಕೆ, SIT ವಿಚಾರಣೆ ಹಾಗೂ ಬೆಳಗ್ಗೆಯಿಂದ ನಡೆಸಿರುವ ಓಡಾಟದಿಂದ ಆಯಾಸವಾಗಿರುವ ಹಿನ್ನೆಲೆಯಲ್ಲಿ ಯುವತಿ ನಾಳೆ ಬೆಳಗ್ಗೆ ಮೆಡಿಕಲ್ ಟೆಸ್ಟ್ಗೆ ಒಳಗಾಗಲಿರುವ ಮಾಹಿತಿ ಸಿಕ್ಕಿದೆ.
ಅತ್ತ, ಇಂದು ರಾತ್ರಿ ವಾಸ್ತವ್ಯ ಇರಲು ಯುವತಿ ನಿರ್ಧಾರಕ್ಕೆ ಬಿಟ್ಟದ್ದು. ಆರ್.ಟಿ.ನಗರದ ಪಿಜಿಯಲ್ಲಿ ಇರುವ ಹಾಗಿದ್ದರೆ ಇರಬಹುದು. ಇಲ್ಲವಾದರೆ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರಬಹುದು. ವೈಯಕ್ತಿಕವಾಗಿ ಎಲ್ಲೇ ಇರುವುದಾದರೂ ರಕ್ಷಣೆ ನೀಡುತ್ತೇವೆ. ನಿಮಗೆ ಯಾವುದೇ ತೊಂದರೆ ಆಗದಂತೆ ರಕ್ಷಣೆ ನೀಡುತ್ತೇವೆ ಎಂದು ಸಿಡಿ ಲೇಡಿಗೆ ಎಸ್ಐಟಿ ಅಧಿಕಾರಿಗಳು ಭರವಸೆ ಕೊಟ್ಟಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ‘ನನ್ನನ್ನು ಯಾರೂ ಕಿಡ್ನ್ಯಾಪ್ ಮಾಡಿರಲಿಲ್ಲ; ನನ್ನ ತಂದೆ, ತಾಯಿ, ಸೋದರ ರಮೇಶ್ ಜಾರಕಿಹೊಳಿ ಹಿಡಿತದಲ್ಲಿದ್ದಾರೆ’