ಕಟೀಲು ಮಾನಸಿಕ ಅಸ್ವಸ್ಥನಂತೆ ಹೇಳಿಕೆ ನೀಡುತ್ತಿದ್ದಾರೆ, ಆಸ್ಪತ್ರೆಗೆ ಸೇರಿಸಬೇಕು; ಸುರ್ಜೇವಾಲ ವಾಗ್ದಾಳಿ

| Updated By: sandhya thejappa

Updated on: Oct 20, 2021 | 2:44 PM

ಕರ್ನಾಟಕ ರಾಜ್ಯದ ಬಡವರು, ದಲಿತರು ಆಹಾರಕ್ಕಾಗಿ ಪರದಾಡುವ ಪರಿಸ್ಥಿತಿ ಎದುರಾಗಿದೆ. ಸಿಲಿಂಡರ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿದೆ. ಪೆಟ್ರೋಲ್ ಬೆಲೆ 110 ರುಪಾಯಿಗೂ ಅಧಿಕ ಆಗಿದೆ.

ಕಟೀಲು ಮಾನಸಿಕ ಅಸ್ವಸ್ಥನಂತೆ ಹೇಳಿಕೆ ನೀಡುತ್ತಿದ್ದಾರೆ, ಆಸ್ಪತ್ರೆಗೆ ಸೇರಿಸಬೇಕು; ಸುರ್ಜೇವಾಲ ವಾಗ್ದಾಳಿ
ರಣದೀಪ್ ಸುರ್ಜೇವಾಲಾ (ಸಂಗ್ರಹ ಚಿತ್ರ)
Follow us on

ಹಾವೇರಿ: ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ (Nalin Kumar Kateel) ಮಾನಸಿಕ ಅಸ್ವಸ್ಥನಂತೆ ಹೇಳಿಕೆ ನೀಡುತ್ತಿದ್ದಾರೆ. ಅವರನ್ನು ಮಾನಸಿಕ ಆಸ್ಪತ್ರೆಗೆ ಸೇರಿಸಬೇಕು ಅಂತ ಹಾವೇರಿ ಜಿಲ್ಲೆಯ ಹಾನಗಲ್ ಪಟ್ಟಣದಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ (Randeep Surjewala) ಹೇಳಿಕೆ ನೀಡಿದ್ದಾರೆ. ರಾಹುಲ್ ಗಾಂಧಿ ಬಗ್ಗೆ ಹೇಳಿಕೆ ನೀಡಿದ್ದ ಕಟೀಲ್ ದಾರಿಯಲ್ಲಿ ಹೋಗುವ ಮಾನಸಿಕ ಅಸ್ವಸ್ಥರನ್ನ ನೋಡುವಂತೆ ನಮ್ಮನ್ನ ನೋಡಲಿ ಅಂತಾ ಕಟೀಲ್ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಅವರನ್ನ ಮಾನಸಿಕ ಆಸ್ಪತ್ರೆಗೆ ಸೇರಿಸಬೇಕು ಅಂತ ವಾಗ್ದಾಳಿ ನಡೆಸಿದ್ದಾರೆ.

ಕರ್ನಾಟಕ ರಾಜ್ಯದ ಬಡವರು, ದಲಿತರು ಆಹಾರಕ್ಕಾಗಿ ಪರದಾಡುವ ಪರಿಸ್ಥಿತಿ ಎದುರಾಗಿದೆ. ಸಿಲಿಂಡರ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿದೆ. ಪೆಟ್ರೋಲ್ ಬೆಲೆ 110 ರುಪಾಯಿಗೂ ಅಧಿಕ ಆಗಿದೆ. ಡೀಸೆಲ್ ಬೆಲೆಯೂ ನೂರರ ಗಡಿ ದಾಟಿದೆ. ಸಿಮೆಂಟ್ ಬೆಲೆ ಏರಿಕೆ ಆಗಿದೆ. ನದಿಯಲ್ಲಿನ ಮರಳು ಕೂಡ ಒಂದು ಲಾರಿಗೆ ಒಂದು ಲಕ್ಷ ಆಗಿದೆ. ಎಂ.ಸ್ಯಾಂಡ್ ಬೆಲೆ ಕೂಡ ಗಗನಕ್ಕೆ ಏರಿದೆ. ಅಡುಗೆ ಎಣ್ಣೆ, ತೊಗರಿ ಬೇಳೆ ಬೆಲೆ ಕೂಡ ಹೆಚ್ಚಾಗಿದೆ. ಪರಿಸ್ಥಿತಿ ಹೀಗಿರುವಾಗ ಬಿಜೆಪಿಗೆ ಯಾಕೆ ವೋಟು ಕೊಡಬೇಕು. ಸಿಎಂ ಬೊಮ್ಮಾಯಿ, ಪ್ರಧಾನಿ ನರೇಂದ್ರ ಮೋದಿಯವರು ರೇಶನ್ ಖರೀದಿಗೆ ಹೋಗಿದ್ದಾರಾ? ಅಂತ ಪ್ರಶ್ನಿಸಿದ್ದಾರೆ.

ಏಳು ವರ್ಷಗಳಲ್ಲಿ ಬಿಜೆಪಿ ಸರಕಾರ ಜನರ ಜೇಬಿಗೆ ಕತ್ತರಿ ಹಾಕಿದೆ. ಕೊರೊನಾ ಸಮಯದಲ್ಲಿ ಬಿಜೆಪಿ ಸರಕಾರದ ಯಾವುದೇ ಜನಪ್ರತಿನಿಧಿಗಳು ಜನರ ಮನೆ ಬಾಗಿಲಿಗೆ ಹೋಗಲಿಲ್ಲ. ನಮ್ಮ ಅಭ್ಯರ್ಥಿ ಶ್ರೀನಿವಾಸ ಮಾನೆ ಕೊರೊನಾ ಸಂಕಷ್ಟದ ಕಾಲದಲ್ಲಿ ಜನರ ಮನೆ ಬಾಗಿಲಿಗೆ ಹೋದರು. ಆಕ್ಸಿಜನ್ ವ್ಯವಸ್ಥೆ, ಕಷ್ಟದಲ್ಲಿರುವ ವಿವಿಧ ವರ್ಗದ ಜನರಿಗೆ ಹಣಕಾಸಿನ ನೆರವು ನೀಡಿದರು. ಮಾನೆಗೆ ಜನರು ಆಪದ್ಭಾಂದವ ಹೆಸರು ಕೊಟ್ಟಿದ್ದಾರೆ. ಬಿಜೆಪಿ ಅಭ್ಯರ್ಥಿ ಆಗಿರುವ ಶಿವರಾಜ ಸಜ್ಜನರ ಸಂಗೂರು ಸಹಕಾರಿ ಸಕ್ಕರೆ ಕಾರ್ಖಾನೆ ದಿವಾಳಿ ಮಾಡಿದ್ದರು. ಪ್ರಧಾನಿ ಮೋದಿಯವರು ಏಳು ವರ್ಷಗಳಿಂದ ಅಚ್ಛೆದಿನ ಬರುತ್ತೆ ಅಂದರು. ಉದ್ಯೋಗ ದೊರೆಯುತ್ತಿಲ್ಲ, ಉದ್ಯೊಗ ಖಾತ್ರಿ ಹಣ ಸಿಗ್ತಿಲ್ಲ. ಬಿಜೆಪಿ ಸರಕಾರ ಸುಳ್ಳು ಹೇಳುವ ಭ್ರಷ್ಟ ಸರಕಾರ ಅಂತ ರಣದೀಪ್ ಸುರ್ಜೇವಾಲ ಹೇಳಿದ್ದಾರೆ.

ಇದನ್ನೂ ಓದಿ

23ರ ಹರೆಯದಲ್ಲಿ ದೇಶವೇ ಹೆಮ್ಮೆ ಪಡುವ “ಉಪಗ್ರಹ” ಸಾಧನೆ! ಕಾಫಿನಾಡಿನ ಯುವಕನ ಸಾಧನೆ ಕೊಂಡಾಡಿದ ಪ್ರಧಾನಿ ಮೋದಿ

ಪ್ಯಾರಾಸೋಶಿಯಲ್ ರಿಲೇಶನ್​ಶಿಪ್​ ಅಂದರೇನು? ಇದು ನಿಮಗೆ ಆರೋಗ್ಯಕರವೇ?