AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ಯಾರಾಸೋಶಿಯಲ್ ರಿಲೇಶನ್​ಶಿಪ್​ ಅಂದರೇನು? ಇದು ನಿಮಗೆ ಆರೋಗ್ಯಕರವೇ?

Parasocial Relationships: ಪ್ಯಾರಾಸೋಶಿಯಲ್ ರಿಲೇಶನ್​ಶಿಪ್​ ಅಂದರೇನು? ಇದು ಯಾವ ಸ್ಥಿತಿ? ಎಂಬೆಲ್ಲಾ ವಿಷಯಕ್ಕೆ ಸಂಬಂಧಿಸಿದಂತೆ ಮಾಹಿತಿ ಇಲ್ಲಿದೆ.

ಪ್ಯಾರಾಸೋಶಿಯಲ್ ರಿಲೇಶನ್​ಶಿಪ್​ ಅಂದರೇನು? ಇದು ನಿಮಗೆ ಆರೋಗ್ಯಕರವೇ?
ಸಂಗ್ರಹ ಚಿತ್ರ
TV9 Web
| Edited By: |

Updated on: Oct 20, 2021 | 1:32 PM

Share

ಸಾಮಾಜಿಕ ವಿಜ್ಞಾನಿಗಳಾದ ಡೊನಾಲ್ಡ್ ಹಾರ್ಟನ್ ಮತ್ತು ಆರ್.ರಿಚರ್ಡ್ 1956ರಲ್ಲಿ ರಚಿಸಿದ ಪದವಿದು. ಆಕ್ಸ್​ಫರ್ಡ್​ನ ಒಂದು ಪತ್ರಿಕೆಯು ಪ್ಯಾರಾಸೋಶಿಯಲ್ ಸಂಬಂಧಗಳ ಕುರಿತಾಗಿ ವ್ಯಾಖ್ಯಾನ ನೀಡುತ್ತದೆ. ಸಮೂಹ ಮಾಧ್ಯಮದಲ್ಲಿ ಕೆಲವು ಪಾತ್ರಕ್ಕೆ ಅಂದರೆ ದೂರದರ್ಶನದಲ್ಲಿ ಕಾಣಿಸಿಕೊಳ್ಳುವ ಪಾತ್ರಕ್ಕೆ ಪ್ರೇಕ್ಷಕರು ತಮ್ಮ ಸ್ನೇಹಿತರಂತೆಯೇ ಭಾವಿಸುವುದು. ಇದೊಂದುಥರಹದ ಮುಖಾಮುಖಿಯಾಗಿ ಭೇಟಿಯಾದ ಮಾನಸಿಕ ಸಂಬಂಧವಿದ್ದಂತೆ ಎಂದು ವಿವಸುರಿತ್ತದೆ. 

ಇನ್ನೂ ಸರಳವಾಗಿ ಹೇಳುವುದಾದರೆ, ಸಾಮಾನ್ಯವಾಗಿ ಸೆಲೆಬ್ರೆಟಿಗಳೊಂದಿಗೆ ಹೊಂದಿರುವ ರಿಲೇಶನ್​ಶಿಪ್ ಅಂದರೆ ಮಾನಸಿಕ ಸ್ಥಿತಿಯಲ್ಲಿನ ಸಂಬಂಧ. ಉದಾಹರಣೆಗೆ ದೂರದರ್ಶನದಲ್ಲಿ ಒಂದು ನಿರ್ದಿಷ್ಟ ಪಾತ್ರವಹಿಸುತ್ತಿರುವ ವ್ಯಕ್ತಿ ಆಪ್ತರಂತೆ ಅನಿಸುತ್ತಾರೆ. ಆದರೆ ಆ ನಿರ್ದಿಷ್ಟ ಪಾತ್ರಧಾರಿಗೆ ಈ ವ್ಯಕ್ತಿ ಯಾರೆಂಬುದು ತಿಳಿದಿರುವುದಿಲ್ಲ. ಇದೊಂದುಥರಹದ ಮುಖಾಮುಖಿ ಪರಸ್ಪರ ಕ್ರಿಯೆ ಆದರೆ ಮಾನಸಿಕ ಸ್ಥಿತಿ ಈ ಕುರಿತಂತೆ ವೃತ್ತಿಯಲ್ಲಿ ಮನೋವಿಜ್ಞಾನಿಯಾಗಿರುವ, ಕ್ಯಾಲಿಫೋರ್ನಿಯಾದ ಚಾಪ್​ಮನ್​ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕ ರಿವಾ ತುಕಾಚಿನ್​ಸ್ಕಿ ಫಾಸ್ಟರ್ ಅವರು  ಈ ಕುರಿತಂತೆ ಪುಸ್ತಕ ಬರೆದಿದ್ದಾರೆ.

ಧಾರವಾಹಿ ಅಥವಾ ಚಲಚಿತ್ರದಲ್ಲಿ ಬರುವ ಪಾತ್ರಗಳು, ರೇಡಿಯೋದಲ್ಲಿ ನಿರ್ದಿಷ್ಟ ಪಾತ್ರಧಾರಿ ಅಥವಾ ಪುಸ್ತಕ ಓದುವಾಗ ಇಷ್ಟವಾಗುವವ ಪಾತ್ರ ಸಹ ಅನ್ನೋನ್ಯತೆಯಲ್ಲಿ ಭಾಗಿಯಾಗಿರಬಹುದು ಅಂದರೆ ಮಾನಸಿಕ ರಿಲೇಶನ್​ಶಿಪ್​ಗೆ ಹತ್ತಿರವಾಗಬಹುದು. ಇದು ಒಂದು ದೂರದ ಪರಿಕಲ್ಪನೆಯಂತೆ ಅನಿಸಬಹುದಾದರೂ, ಮನಸ್ಸಿಗೆ ನಾಟಿದ ಕೆಲವು ಸಂದರ್ಭ ಸಮಯಗಳು ವ್ಯಕ್ತಿಗೆ ಭಾವನಾತ್ಮಕವಾಗಿ ಅಂಟಿಕೊಳ್ಳುತ್ತದೆ.

ಮಾನವನ ಅನುಭದಲ್ಲಿ ಪ್ಯಾರಾಸೋಶಿಯಲ್ ಸಂಬಂಧವು ಬಹುತೇಕ ಅನಿವಾರ್ಯವಾಗಿದೆ. ವಿಶೇಷವಾಗಿ ಇದರಲ್ಲಿ ಸೆಲೆಬ್ರಿಟಿಗಳ ಜೊತೆಗಿನ ಸಂಬಂಧವು ತಪ್ಪಿಸಿಕೊಳ್ಳಲಾಗುವಂಥದ್ದು. ನಿರ್ದಿಷ್ಟ ವ್ಯಕ್ತಿಯು ನಟನೆ, ಪಾತ್ರವನ್ನು ನೋಡ್ತಾ ನೋಡ್ತಾ ಇದ್ದ ಹಾಗೆಯೇ ಪಾತ್ರವನ್ನು ದೀರ್ಘವಾಗಿ ಅವಲೋಕಿಸುತ್ತಾನೆ. ಮನಸ್ಸಿನಾಳದಲ್ಲಿ ನಮ್ಮವರು ಎಂಬ ಭಾವ ಇದು ಭಾವನಾತ್ಮ ಕ ರಿಲೇಶನ್​ಶಿಪ್​. ಅಂಥಹ ವ್ಯಕ್ತಿಗಳು ಸಂಪೂರ್ಣವಾಗಿ ಆರೋಗ್ಯರಾಗಿರುತ್ತಾರೆ. ಆಡಿಯೋ, ವಿಡಿಯೋ ಮೂಲಕ ಒಬ್ಬರೊಂದಿಗೆ ಸಂಪರ್ಕಿಸಲು ಬಯಸುತ್ತಾರೆ. ಒಂದುಥರಹದಲ್ಲಿ ಇದು ಏಕಪಕ್ಷೀಯ ಅಂದರೆ ತಪ್ಪಾಗಲಾರದು, ಏಕೆಂದರೆ ನಿರ್ದಿಷ್ಟ ವ್ಯಕ್ತಿ ಯಾರೆಂಬುದು ಸೆಲೆಬ್ರಿಟಿಗೆ ಗೊತ್ತಿಲ್ಲದಿದ್ದರೂ, ಇವರ ನಮ್ಮವರು ಎಂಬ ಭಾವನೆಯಲ್ಲಿ ವ್ಯಕ್ತಿ ಅಥವಾ ಪ್ರೇಕ್ಷಕನಿರುತ್ತಾನೆ.

ಹುಸ್ಟನ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದ ಮನೋವಿಜ್ಞಾನಿ, ಸಹ ಪ್ರಾಧ್ಯಾಪಕರಾದ ಜೆ ಎಲ್ ರೆಡಿಕ್ ಅವರು ತಿಳಿಸಿದಂತೆ, ಪ್ಯಾರಾಸೋಶಿಯಲ್ ಸಂಬಂಧವು ಸುರಕ್ಷಿತವಾದುದು. ನಿಮ್ಮ ನೆಚ್ಚಿನ ಸೆಲೆಬ್ರಿಟಿಗಳು ನಿಮಗೆ ಹತ್ತಿರದಲ್ಲಿದ್ದಾರೆ ಎಂಬಂತೆ ಮನಸ್ಥಿತಿಗನುಗುಣವಾಗಿ ಬದಲಾಗುತ್ತೀರಿ. ಸಾಮಾಜಿಕ ಮಾಧ್ಯಮವು ಬೆಳೆದಂತೆ ಇದು ಸ್ವಲ್ಪ ಬದಲಾಗಿದೆ ಅದರಲ್ಲಿಯೂ ಮುಖ್ಯವಾಗಿ ಅಪರೂಪವಾಗಿದೆ ಎಂದು ವಿವರಿಸಿದ್ದಾರೆ.

ಇಂತಹ ಸಂಬಂಧಗಳು ಹೆಚ್ಚು ಸಾಂಪ್ರದಾಯಿಕ ಸಾಮಾಜಿಕ ಸನ್ನಿವೇಶಗಳಿಗೆ ಅವಲಂಬಿತವಾಗಿರುತ್ತದೆ. ಪ್ಯಾರಾಸೋಶಿಯಲ್ ಸಂಬಂಧಗಳು ಸ್ವಯಂ ಪ್ರೇರಿತವಾದವು ಇದು ಒಡನಾಟವನ್ನು ಸೃಷ್ಟಿಸುತ್ತದೆ. ಸಾಮಾಜಿಕ ಆಕರ್ಷಣೆಗೆ ಪ್ರಭಾವಿತರಾಗಿ ಹುಟ್ಟುಕೊಳ್ಳುವಂಥದ್ದು. ಜತೆಗೆ ವೀಕ್ಷಕರು ಮಾಧ್ಯಮ ವ್ಯಕ್ತಿತ್ವದವರೊಂದಿಗೆ ಸಂಪರ್ಕ ಹೊಂದಲು ಬಯಸುತ್ತಾರೆ. ಅವರಿಗೆ ಹೆಚ್ಚಿನ ಪ್ರೀತಿ, ಕೃತಜ್ಞತೆ, ಹಂಬಲ, ಪ್ರೋತ್ಸಾಹ ಮತ್ತು ನಿಷ್ಠೆಯ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ.

ಈಗೀಗ ಸೆಲೆಬ್ರಿಟಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ತಂತ್ರಜ್ಞಾನ ಬೆಳೆಯುತ್ತಿದ್ದಂತೆಯೇ ಕಾರ್ಯಕ್ರಮಗಳು, ಪಾತ್ರ, ನಟನೆ ಎಲ್ಲವೂ ಹೆಚ್ಚಾಗಿದೆ. ಟಿವಿಯಲ್ಲಿ ಅಥವಾ ಸಂದರ್ಶನದಲ್ಲಿ ಅವರು ಮಾತನಾಡುವುದು ನೈಜತೆಯ ಸ್ವರೂಪವನ್ನು ತೋರಿಸುವುದರಿಂದ ಜೀವನಕ್ಕೆ ಬಾಹ್ಯ ವ್ಯಕ್ತಿಯಾಗಿ ಅನಿಸಿಬಿಡುತ್ತಾರೆ.

ಹೀಗಿರುವಾಗ ವಾಸ್ತವದ ಬಗ್ಗೆ ತಿಳಿಯುವುದು ಮುಖ್ಯ. ವಾಸ್ತವವನ್ನು ಅರಿತಿದ್ದರೆ ಭಯಬೀಳುವ ಅಗತ್ಯವಿಲ್ಲ. ಎಲ್ಲಾ ಸಂಬಂಧಗಳು ಮತ್ತು ಭಾವನೆಗಳಂತೆಯೇ ಒಬ್ಬರ ಮಾನಸಿಕ ಮತ್ತು ಭಾವನಾತ್ಮಕ ಸ್ಥಿತಿ ಮೇಲೆ ಅವುಗಳ ಪ್ರಭಾವ ಬೀರದಿದ್ದರೆ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಬಹುದು ಎಂದು ಅವರು ವಿವರಿಸಿದ್ದಾರೆ.

ಇದನ್ನೂ ಓದಿ:

Mental Health: 14ನೇ ವಯಸ್ಸಿನೊಳಗೇ ಶುರುವಾಗುತ್ತವೆ ಶೇಕಡಾ 50ರಷ್ಟು ಮಾನಸಿಕ ಸಮಸ್ಯೆಗಳು; ಮಕ್ಕಳಿಗೆ ಉತ್ತಮ ಬಾಲ್ಯ ರೂಪಿಸಲು ಸಲಹೆ

Mental Health: ನೀವು ಮಾನಸಿಕ ಒತ್ತಡದಿಂದ ಬಳಲುತ್ತಿದ್ದೀರಾ? ಸಮಸ್ಯೆಗೆ ಪರಿಹಾರಗಳು ಇಲ್ಲಿವೆ

ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ