ಕರ್ನಾಟಕದಲ್ಲಿ ಸದ್ದಿಲ್ಲದೆ ರದ್ದಾಗುತ್ತಿವೆ ಪಡಿತರ ಚೀಟಿ: ಬಿಪಿಎಲ್​, ಎಪಿಎಲ್​ ಕಾರ್ಡ್​ದಾರರಿಗೆ ಬಿಗ್​ ಶಾಕ್​

| Updated By: ಗಂಗಾಧರ​ ಬ. ಸಾಬೋಜಿ

Updated on: Nov 16, 2024 | 5:59 PM

ಕರ್ನಾಟಕ ಸರ್ಕಾರದ ಗೃಹಲಕ್ಮಿ ಯೋಜನೆಯಿಂದ ಆರ್ಥಿಕ ಹೊರೆ ಹೆಚ್ಚಾಗಿದೆ ಎಂದು ಆರೋಪ ಕೇಳಿಬಂದಿದ್ದು, 11 ಲಕ್ಷಕ್ಕೂ ಹೆಚ್ಚು ಪಡಿತರ ಚೀಟಿಗಳನ್ನು ರದ್ದುಗೊಳಿಸಲಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಹಾಸನ, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್ ಕಾರ್ಡ್‌ಗಳಾಗಿ ಪರಿವರ್ತಿಸಲಾಗಿದೆ.

ಕರ್ನಾಟಕದಲ್ಲಿ ಸದ್ದಿಲ್ಲದೆ ರದ್ದಾಗುತ್ತಿವೆ ಪಡಿತರ ಚೀಟಿ: ಬಿಪಿಎಲ್​, ಎಪಿಎಲ್​ ಕಾರ್ಡ್​ದಾರರಿಗೆ ಬಿಗ್​ ಶಾಕ್​
ಕರ್ನಾಟಕದಲ್ಲಿ ಸದ್ದಿಲ್ಲದೆ ರದ್ದಾಗುತ್ತಿವೆ ಪಡಿತರ ಚೀಟಿ: ಬಿಪಿಎಲ್​, ಎಪಿಎಲ್​ ಕಾರ್ಡ್​ದಾರರಿಗೆ ಬಿಗ್​ ಶಾಕ್​
Follow us on

ಹಾಸನ, ನವೆಂಬರ್​ 16: ಕರ್ನಾಟಕದಲ್ಲಿ ಕಾಂಗ್ರೆಸ್​​ ಪಕ್ಷ ಗ್ಯಾರಂಟಿ ಘೋಷಣೆ ಮಾಡಿ ಅಧಿಕಾರಕ್ಕೆ ಬಂದ ಬಳಿಕ ಗೃಹಜ್ಯೋತಿ, ಗೃಹಲಕ್ಷ್ಮಿ ಹಾಗೂ ಬಸ್ ಫ್ರೀ ಯೋಜನೆಯಂತಾ ಮಹತ್ವದ ಯೋಜನೆ ಜಾರಿ ಮಾಡಿದೆ. ಆದರೆ ಮಹಿಳೆಯ ಖಾತೆಗೆ ನೇರವಾಗಿ ತಿಂಗಳಿಗೆ 2 ಸಾವಿರ ರೂ. ಹಣ ವರ್ಗಾವಣೆ ಮಾಡುವ ಗೃಹಲಕ್ಷ್ಮಿ ಯೋಜನೆಯಿಂದ ಆಗುತ್ತಿರುವ ಹೊರೆಯನ್ನ ತಪ್ಪಿಸಲು ಸರ್ಕಾರ ಬಿಪಿಎಲ್ ಕಾರ್ಡ್​ಗಳನ್ನೇ (ration card) ಕಡಿಮೆ ಮಾಡಲು ಮುಂದಾಗಿದೆ ಎಂಬ ಆರಪ ಕೇಳಿ ಬಂದಿದೆ. ಹಾಗಾಗಿ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ 11 ಲಕ್ಷ ಪಡಿತರ ಚೀಟಿಗಳನ್ನ ರದ್ದು ಮಾಡಲಾಗಿದೆ ಎಂದು ಬಿಜೆಪಿ ನಾಯಕ ಮಾಜಿ ಸಚಿವ ಶಾಸಕ ಸುನಿಲ್ ಕುಮಾರ್ ಗಂಭಿರ ಆರೋಪ ಮಾಡಿದ್ದಾರೆ.

ಹಾಸನನಲ್ಲಿ 3925 ಬಿಪಿಎಲ್​ ಕಾರ್ಡ್‌ಗಳು ಬಿಪಿಎಲ್​ ಆಗಿ ಬದಲಾವಣೆ

ಜಿಲ್ಲೆಯಲ್ಲಿ ಒಟ್ಟು 83 ರೇಷನ್ ಕಾರ್ಡ್​ಗಳು ರದ್ದು ಮಾಡಲಾಗಿದೆ. ಒಟ್ಟು 3925 ಬಿಪಿಎಲ್​ ಕಾರ್ಡ್‌ಗಳು ಎಪಿಎಲ್​ ಕಾರ್ಡ್‌ಗಳಾಗಿ ಬದಲಾವಣೆ ಮಾಡಲಾಗಿದೆ. ಟ್ಯಾಕ್ಸ್ ಪಾವತಿಸುತ್ತಿದ್ದಾರೆ ಎಂಬ ಕಾರಣಕ್ಕೆ 3408 ಬಿಪಿಎಲ್ ಕಾರ್ಡ್‌ಗಳು ಎಪಿಎಲ್‌ ಕಾರ್ಡ್‌ಗಳಾಗಿ ಬದಲಾವಣೆ ಮಾಡಲಾಗಿದೆ.

ಇದನ್ನೂ ಓದಿ: ನಕಲಿ ಬಿಪಿಎಲ್ ಕಾರ್ಡ್ ಪರಿಷ್ಕರಣೆ ಬಗ್ಗೆ ಮಹತ್ವದ ಚರ್ಚೆ! ಇಲಾಖೆ ಮಟ್ಟದಲ್ಲೇ ಸಮಿತಿ ರಚನೆ ಸಾಧ್ಯತೆ

1,20,000ಕ್ಕಿಂತ ಹೆಚ್ಚಿನ ಆದಾಯ ಕಾರಣದಿಂದ 415 ಬಿಪಿಎಲ್​ ಪಡಿತರ ಕಾರ್ಡ್‌ಗಳು ಎಪಿಎಲ್​  ಕಾರ್ಡ್‌ಗಳಾಗಿ ಬದಲಾವಣೆ ಮಾಡಲಾಗಿದೆ. ಸರ್ಕಾರಿ ನೌಕರರು ಎಂಬ ಕಾರಣಕ್ಕೆ 102 ಕಾರ್ಡ್‌ಗಳು ಬದಲಾವಣೆ. ಅದೇ ರೀತಿಯಾಗಿ ಸಾವಿರಾರು ಕಾರ್ಡ್​ಗಳು ವಿವಿಧ ತಾಂತ್ರಿಕ ಕಾರಣದಿಂದ ಅಮಾನತು ಮಾಡಲಾಗಿದೆ.

ಕೋಲಾರದಲ್ಲಿ 6500 ಎಪಿಎಲ್ ಕಾರ್ಡ್​ಗಳಾಗಿ ಪರಿವರ್ತನೆ

ಕೋಲಾರದಲ್ಲಿ 6500 ಬಿಪಿಎಲ್ ಕಾರ್ಡ್​ಗಳನ್ನು ಎಪಿಎಲ್ ಕಾರ್ಡ್​ಗಳಾಗಿ ಪರಿವರ್ತನೆ ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ತೆರಿಗೆ ಪಾವತಿ ಮಾಡುತ್ತಿದ್ದಾರೆ ಎಂಬ ಕಾರಣ ನೀಡಿ 3500 ಕಾರ್ಡ್, ಸರ್ಕಾರಿ ನೌಕರರು ಅಂತ 80 ಕಾರ್ಡ್ ಬಿಪಿಎಲ್​ನಿಂದ ಎಪಿಎಲ್​ಗೆ ಬದಲಾವಣೆ ಮಾಡಲಾಗಿದೆ.

1, 20,000 ಕ್ಕಿಂತ ಹೆಚ್ಚಿನ ಆದಾಯ ಹೊಂದಿದ್ದಾರೆ ಅಂತ 2900 ಪಡಿತರ ಕಾರ್ಡ್ ಪರಿವರ್ತನೆ ಮಾಡಲಾಗಿದೆ. ಜಿಲ್ಲೆಯಲ್ಲಿ 6500 ಕಾರ್ಡುಗಳು ಎಪಿಎಲ್​ಗೆ ಕನ್ವರ್ಟ್ ಮಾಡಲು ಗುರುತು ಮಾಡಿ ಅಮಾನತ್ತಿನಲ್ಲಿಡಲಾಗಿದೆ. ಪರಿವರ್ತನೆ ಕಾರ್ಯ ಚಾಲ್ತಿಯಲ್ಲಿದೆ ಎಂದು ಆಹಾರ ಇಲಾಖೆ ಉಪನಿರ್ದೇಶಕಿ ಲತಾ ಮಾಹಿತಿ ನೀಡಿದ್ದಾರೆ.

ಚಿಕ್ಕಬಳ್ಳಾಪುರದಲ್ಲೂ‌ 2201 ಬಿಪಿಎಲ್ ಕಾರ್ಡ್​ಗಳು ಎಪಿಎಲ್​ಗೆ ಬದಲಾವಣೆ ಮಾಡಲಾಗಿದೆ. ಟ್ಯಾಕ್ಸ್ ಪಾವತಿ ಮಾಡುತ್ತಿದ್ದಾರೆ ಎಂಬ ಕಾರಣ ನೀಡಿ 1992 ಕಾರ್ಡ್​ಗಳು ಎಪಿಎಲ್​ಗೆ, ಸರ್ಕಾರಿ ನೌಕರರು ಅಂತ 31 ಕಾರ್ಡ್​ ಮತ್ತು 1, 20000 ಕ್ಕಿಂತ ಹೆಚ್ಚಿನ ಆದಾಯ ಹೊಂದಿದ್ದಾರೆ ಅಂತ 178 ಪಡಿತರ ಚೀಟಿ ಬದಲಾವಣೆ ಮಾಡಲಾಗಿದೆ. ಜಿಲ್ಲೆಯಾದ್ಯಾಂತ 2021 ಕಾರ್ಡ್​ಗಳು ಎಪಿಎಲ್​ಗೆ ಪರಿವರ್ತನೆ ಮಾಡಲಾಗಿದೆ.

ಇದನ್ನೂ ಓದಿ: ಸೆಪ್ಟೆಂಬರ್​ನಲ್ಲಿ ಕೇವಲ ಅರ್ಹರಿಗೆ ಮಾತ್ರ ಹೊಸ ಬಿಪಿಎಲ್ ಕಾರ್ಡ್​ಗಳ ವಿತರಣೆ: ಕೆ ಹೆಚ್ ಮುನಿಯಪ್ಪ

ಇನ್ನು ವಿಜಯಪುರದಲ್ಲಿ 4359, ಬಾಗಲಕೋಟೆ ಜಿಲ್ಲೆಯಲ್ಲಿ 6299, ಶಿವಮೊಗ್ಗ ಜಿಲ್ಲೆಯಲ್ಲಿ 2346 ಯಾವುದೇ ಕಾರ್ಡ್ ರದ್ದು ಆಗಿಲ್ಲ. ಮೈಸೂರಿನಲ್ಲಿ 4,221, ಬಳ್ಳಾರಿ ಜಿಲ್ಲೆಯಲ್ಲಿ 1848, ಕಲಬುರಗಿ ಜಿಲ್ಲೆಯಲ್ಲೂ 1925, ಮಂಡ್ಯದಲ್ಲಿ 2824, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 3019, ಚಿತ್ರದುರ್ಗ ಜಿಲ್ಲೆಯಲ್ಲಿ 1670, ದಾವಣಗೆರೆ ಜಿಲ್ಲೆಯಲ್ಲಿ ಒಟ್ಟು 1599 ಬಿಪಿಎಲ್​ನಿಂದ ಎಪಿಎಲ್​ ಕಾರ್ಡ್​ಗೆ ವರ್ಗಾವಣೆ ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.