ನ್ಯಾಯ ಬೆಲೆ ಅಂಗಡಿ ವಿತರಕರಿಗೆ ಸಿಗ್ತಿಲ್ಲ ಕಮಿಷನ್.. ಆಹಾರ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ

ಕೊರೊನಾ ವೈರಸ್ ಹರಡುವ ಭೀತಿಯ ನಡುವೆ ಬಡವರ ಹೊಟ್ಟೆ ತುಂಬಿಸಿರೋರ ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕಿಕೊಳ್ಳುವ ಅವಸ್ಥೆ ಎದುರಾಗಿದೆ. ಆಹಾರ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿಗೆ ಅವರ ಬದುಕು ಬೀದಿಗೆ ಬಿದ್ದಿದೆ. ಯಾರವರು..? ಏನು ಆ ಅವಸ್ಥೆ ಇಲ್ಲಿದೆ ಡಿಟೇಲ್ಸ್.

  • TV9 Web Team
  • Published On - 7:20 AM, 25 Jan 2021
ನ್ಯಾಯ ಬೆಲೆ ಅಂಗಡಿ ವಿತರಕರಿಗೆ ಸಿಗ್ತಿಲ್ಲ ಕಮಿಷನ್.. ಆಹಾರ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ

ರಾಯಚೂರು: ಇವರು ಕೊರೊನಾ ಭೀತಿಯ ನಡುವೆಯೂ ನ್ಯಾಯ ಬೆಲೆ ಅಂಗಡಿಗಳಲ್ಲಿ ಪ್ರತಿ ನಿತ್ಯ ಪಡಿತರ ಧಾನ್ಯಗಳನ್ನ ಯಶಸ್ವಿಯಾಗಿ ವಿತರಿಸಿದ್ದಾರೆ. ಕೊರೊನಾ ವೈರಸ್ ಹರಡುವ ಭೀತಿಯ ನಡುವೆ ಪಡಿತರ ಪಡೆಯಲು ಬರುವವರಿಗೆ ಸ್ಯಾನಿಟೇಜರ್, ಮಾಸ್ಕ್ ಕೊಟ್ಟು ದೈಹಿಕ ಅಂತರ ಪಾಲಿಸಿ ಪಡಿತರ ಧಾನ್ಯಗಳನ್ನ ವಿತರಿಸಿದ್ರು.

ಈ ರೀತಿ ಬಡವರಿಗೆ ಪಡಿತರ ವಿತರಿಸುವ ನ್ಯಾಯ ಬೆಲೆ ಅಂಗಡಿ ವಿತರಕರಿಗೆ ಸರ್ಕಾರ ಪ್ರತಿ ಕ್ವಿಂಟಾಲ್​ಗೆ 100 ರೂಪಾಯಿಯಂತೆ ಕಮಿಷನ್ ಹಣ ನೀಡುತ್ತೆ. ಆದ್ರೆ, ಕಳೆದ ಒಂಭತ್ತು ತಿಂಗಳಿಂದ ರಾಯಚೂರು ಜಿಲ್ಲೆಯಾದ್ಯಂತ ಪಡಿತರ ಅಂಗಡಿ ನಡೆಸುತ್ತಿರುವ ಪಡಿತರ ವಿತರಕರಿಗೆ ಸರ್ಕಾರ 35 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಿತ್ತು. ಆದ್ರೆ ಸಕಾಲಕ್ಕೆ ಬಿಲ್ ಪಾವತಿಸಲು ಆಹಾರ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರಿಂದ ಆ ಹಣ ಸರ್ಕಾರಕ್ಕೆ ವಾಪಸ್ ಆಗಿದೆ. ಇದಕ್ಕೆ ಪಡಿತರ ವಿತರಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ನಾನಾ ತಾಲೂಕುಗಳ ನ್ಯಾಯ ಬೆಲೆ ಅಂಗಡಿಗಳ ಪಡಿತರ ವಿತರಕರಿಗೆ ಕಮಿಷನ್ ಹಣ ಸಿಗದೇ ಇರೋದ್ರಿಂದ ನಿತ್ಯ ಬದುಕು ಸಾಗಿಸೋಕು ಆಗ್ತಿಲ್ಲ. ಕೆಲವರು ಗೋದಾಮುಗಳಿಗೆ ಬಾಡಿಗೆ ಹಣವೂ ಕಟ್ಟೋಕಾಗದೇ ಪರದಾಡ್ತಿದ್ದಾರೆ. ಕಮಿಷನ್ ಹಣ ನೀಡುವಂತೆ ಕೋರಿ ಪಡಿತರ ವಿತರಕರು ಜಿಲ್ಲಾಡಳಿತಕ್ಕೆ ಹತ್ತಾರು ಬಾರಿ ಮನವಿ ಸಲ್ಲಿಸಿದ್ರೂ ಪ್ರಯೋಜನವಾಗಿಲ್ಲ. ಇನ್ನಾದ್ರೂ ಸರ್ಕಾರ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಕಮಿಷನ್ ಹಣ ಬಿಡುಗಡೆ ಮಾಡಬೇಕೆಂದು ಪಡಿತರ ವಿತರಕರು ಆಗ್ರಹಿಸ್ತಿದ್ದಾರೆ.

ಒಟ್ನಲ್ಲಿ ಬಡವರ ಹೊಟ್ಟೆ ತುಂಬಿಸುತ್ತಿರುವ ನ್ಯಾಯ ಬೆಲೆ ಅಂಗಡಿಯ ಪಡಿತರ ವಿತರಕರು ಕಮಿಷನ್ ಹಣವಿಲ್ಲದೇ ಕಂಗಾಲಾಗಿದ್ದಾರೆ. ಇನ್ನಾದ್ರೂ ಸರ್ಕಾರ ಎಚ್ಚೆತ್ತುಕೊಂಡು ಸಂಷ್ಟಕ್ಕೆ ಸ್ಪಂದಿಸುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.

ಬರಿಗೈಲಿ ಆ ಊರಿಗೆ ಬಂದ ‘ಅಕ್ಕಿ ಚೋರ’ ಈಗ ಕೋಟಿ ಕುಳ.. ಅಕ್ರಮ ಅಕ್ಕಿ ದಂಧೆಯ ಬಗ್ಗೆ ಗೊತ್ತಿದ್ರು ಸುಮ್ಮನಿದೆಯಾ ಸರ್ಕಾರ?