ಬೆಂಗಳೂರು, ನವೆಂಬರ್ 11: ನಗರದ ಹೊರವಲಯ ಹೆಬ್ಬಗೋಡಿಯಲ್ಲಿ ರೇವ್ ಪಾರ್ಟಿ ಕೇಸ್ಗೆ (Rave party case) ಸಂಬಂಧಿಸಿದಂತೆ ಸಿಸಿಬಿ ಕುರಿತು ವಿಚಾರಣೆ ನಡೆಸುವಂತೆ ಮಾನವ ಹಕ್ಕುಗಳ ಆಯೋಗ ನ.7ರಂದು ಆದೇಶ ಹೊರಡಿಸಿತ್ತು. ಇದೀಗ ವಿಚಾರಣೆ ನಡೆಸಿ ಕ್ರಮಕೈಗೊಳ್ಳುವಂತೆ ಮತ್ತು ಕೈಗೊಂಡಕ್ರಮದ ಬಗ್ಗೆ ನ.21ರೊಳಗೆ ವರದಿ ನೀಡುವಂತೆ ಪೊಲೀಸ್ ಕಮಿಷನರ್‌ಗೆ ಸೂಚನೆ ನೀಡಲಾಗಿದೆ.
ಪ್ರಕರಣದ ಆರೋಪಿ ವಿಜಯ್ ಡೆನ್ನಿಸ್ ಎಂಬಾತ ಮಾನವ ಹಕ್ಕುಗಳು ಆಯೋಗಕ್ಕೆ ದೂರು ನೀಡಿದ್ದರು. ದೂರಿನ ಹಿನ್ನಲೆ ಬೆಂಗಳೂರು ಪೊಲೀಸ್ ಕಮಿಷನರ್‌ಗೆ ಮಾನವ ಹಕ್ಕುಗಳ ಆಯೋಗ ಸೂಚನೆ ಕೊಟ್ಟಿದೆ. ಇತ್ತೀಚೆಗೆ ಸಿಸಿಬಿ ಅಧಿಕಾರಿಗಳು ಪ್ರಕರಣದ ತನಿಖೆ ನಡೆಸಿ ಚಾರ್ಜ್ ಶೀಟ್ ಸಲ್ಲಿಸಿದ್ದರು.
ಇದನ್ನೂ ಓದಿ: ಬೆಂಗಳೂರು: ತಡರಾತ್ರಿವರೆಗೆ ನಡೆಯುತ್ತಿದ್ದ ರೇವ್ಪಾರ್ಟಿ ಮೇಲೆ ಸಿಸಿಬಿ ದಾಳಿ, ಐವರ ಬಂಧನ
ಈ ನಡುವೆ ಪ್ರತಿ ಆರೋಪಿಯ ಬಳಿ ಹತ್ತು ಲಕ್ಷ ಹಣ ಪಡೆದ ಗಂಭೀರ ಆರೋಪ ಸಿಸಿಬಿ ವಿರುದ್ಧ ಕೇಳಿ ಬಂದಿತ್ತು. ಆರೋಪಿಗಳ ವಿರುದ್ಧ ಸುಳ್ಳು ವೈದ್ಯಕೀಯ ಸಾಕ್ಷಗಳು ಕಲೆಹಾಕಿದ, ಅಷ್ಟೇ ಅಲ್ಲದೆ ಪ್ರಕರಣದಲ್ಲಿದ್ದ ಅಧಿಕಾರಿಗಳ ವಿರುದ್ಧ ಮಹಿಳಾ ಆರೋಪಿಗಳನ್ನ ಮಂಚಕ್ಕೆ ಕರೆದ ಆರೋಪ ಕೂಡ ಮಾಡಲಾಗಿತ್ತು. ಸದ್ಯ ಈ ಎಲ್ಲವನ್ನೂ ಉಲ್ಲೇಖಿಸಿ ಸಿಸಿಬಿ ವಿರುದ್ಧ ವರದಿ ನೀಡುವಂತೆ ಮಾನವ ಹಕ್ಕುಗಳ ಆಯೋಗ ಆದೇಶ ನೀಡಿದೆ.
ಮೇ 19ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸೂರು ಕೈಗಾರಿಕಾ ಪ್ರದೇಶದ ಗೋಪಾಲರೆಡ್ಡಿ ಫಾರ್ಮ್ ಹೌಸ್‌ನಲ್ಲಿ ಎಲ್. ವಾಸು ಎಂಬುವವರ ಹುಟ್ಟುಹಬ್ಬವನ್ನು ಆಯೋಜಿಸಿದ್ದರು. ಈ ವೇಳೆ ಸಿಸಿಬಿ ಪೊಲೀಸ್ ದಾಳಿ ಮಾಡಿ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದರು. ಅಷ್ಟೇ ಅಲ್ಲದೆ ಪಾರ್ಟಿ ಆಯೋಜಕ ವಾಸು ಹಾಗೂ ಮೂವರು ಡ್ರಗ್ ಪೆಡ್ಲರ್ಸ್ ಸೇರಿದಂತೆ ಐವರನ್ನು ಬಂಧಿಸಲಾಗಿತ್ತು.
ಇದನ್ನೂ ಓದಿ: ಬೆಂಗಳೂರು: ತೆಲುಗು ನಟಿಯರು ಭಾಗಿಯಾಗಿದ್ದ ರೇವ್ಪಾರ್ಟಿ ಮೇಲೆ ಸಿಸಿಬಿ ದಾಳಿ; ಡ್ರಗ್ಸ್, ಕೊಕೇನ್ ಪತ್ತೆ
ಸಿಸಿಬಿ ದಾಳಿ ವೇಳೆ 17 ಎಂಡಿಎಂಎ ಮಾತ್ರೆ, ಕೊಕೇನ್ ಪತ್ತೆಯಾಗಿತ್ತು. ದಾಳಿವೇಳೆ ಕೆಲವರು ಮಾದಕವಸ್ತುಗಳನ್ನ ಟಾಯ್ಲೆಟ್ನಲ್ಲಿ ಬಿಸಾಕಿ ನೀರು ಹಾಕಿ ನಾಶ ಮಾಡಿದ್ದರು. ಸಿಸಿಬಿ ಡಿಸಿಪಿ ಶ್ರೀನಿವಾಸ್ ಗೌಡ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.