ಅಬಕಾರಿ ಸಚಿವ ಕೆ. ಗೋಪಾಲಯ್ಯ ವಿರುದ್ಧ ಎಸಿಬಿಗೆ ರವಿಕೃಷ್ಣಾರೆಡ್ಡಿ ದೂರು

| Updated By: guruganesh bhat

Updated on: Jun 23, 2021 | 7:12 PM

ಅಬಕಾರಿ ಸಚಿವರು ಪ್ರತಿ ಜಿಲ್ಲೆಗಳಿಂದ 5 ಲಕ್ಷ ಹಣ ಸಂಗ್ರಹಿಸುತ್ತಿದ್ದಾರೆ ಎಂಬ ಆಡಿಯೋ ವೈರಲ್ ವೈರಲ್ ಆದ ಬೆನ್ನಲ್ಲೇ ಆಡಿಯೋವನ್ನು ಆಧಾರವನ್ನಾಗಿ ಇಟ್ಟುಕೊಂಡು ರವಿಕೃಷ್ಣಾರೆಡ್ಡಿ ದೂರು ನೀಡಿದ್ದಾರೆ.

ಅಬಕಾರಿ ಸಚಿವ ಕೆ. ಗೋಪಾಲಯ್ಯ ವಿರುದ್ಧ ಎಸಿಬಿಗೆ ರವಿಕೃಷ್ಣಾರೆಡ್ಡಿ ದೂರು
ಕೆ ಗೋಪಾಲಯ್ಯ ಮತ್ತು ರವಿಕೃಷ್ಣಾ ರೆಡ್ಡಿ
Follow us on

ಬೆಂಗಳೂರು: ಅಬಕಾರಿ ಸಚಿವ ಕೆ. ಗೋಪಾಲಯ್ಯ ವಿರುದ್ಧ ಭ್ರಷ್ಟಾಚಾರ ವಿರೋಧಿ ಹೋರಾಟಗಾರ ರವಿಕೃಷ್ಣಾರೆಡ್ಡಿ ಎಸಿಬಿಗೆ ದೂರು ನೀಡಿದ್ದಾರೆ. ಅಬಕಾರಿ ಸಚಿವರು ಪ್ರತಿ ಜಿಲ್ಲೆಗಳಿಂದ 5 ಲಕ್ಷ ಹಣ ಸಂಗ್ರಹಿಸುತ್ತಿದ್ದಾರೆ ಎಂಬ ಆಡಿಯೋ ವೈರಲ್ ವೈರಲ್ ಆದ ಬೆನ್ನಲ್ಲೇ ಆಡಿಯೋವನ್ನು ಆಧಾರವನ್ನಾಗಿ ಇಟ್ಟುಕೊಂಡು ರವಿಕೃಷ್ಣಾರೆಡ್ಡಿ ದೂರು ನೀಡಿದ್ದಾರೆ.

ಅಬಕಾರಿ ಇಲಾಖೆ ಅಧಿಕಾರಿಗಳು, ಸಚಿವರಿಂದ ಭ್ರಷ್ಟಾಚಾರ ಎಲ್ಲರೂ ಸೇರಿ ಭ್ರಷ್ಟಾಚಾರ ಮಾಡುತ್ತಿದ್ದಾರೆಂದು ಭ್ರಷ್ಟಾಚಾರ ವಿರೋಧಿ ಹೋರಾಟಗಾರ ರವಿಕೃಷ್ಣಾರೆಡ್ಡಿ ದೂರು ನೀಡಿದ್ದಾರೆ. ಆಡಿಯೋಗೆ ಸಂಬಂಧಿಸಿ ಈ ಸಂಬಂಧ ನಾಲ್ವರು ಅಧಿಕಾರಿಗಳನ್ನು ಸಚಿವ ಕೆ.ಗೋಪಾಲಯ್ಯ ಅಮಾನತು ಮಾಡಲಾಗಿದೆ.

ಕಳೆದ ವಾರ ಬೆಂಗಳೂರು ದಕ್ಷಿಣದಲ್ಲಿ ನೀರು ಬಿಡಲಿಲ್ಲ ಜಲಮಂಡಳಿ; ಈ ಬಾರಿ ಪಶ್ಚಿಮ ವಲಯದಲ್ಲಿ 2 ದಿನ ನೀರು ಬರಲ್ಲಾ!
900 ಮಿ.ಮೀ ವ್ಯಾಸದ ನೀರಿನ ಪೈಪ್ ಲೈನ್ನಲ್ಲಿ ಸೋರುವಿಕೆ ಕಂಡು ಬಂದಿದ್ದು ಬಿಡಬ್ಲ್ಯೂಎಸ್ಎಸ್ಬಿ ಸರಿಪಡಿಸುತ್ತಿರುವ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಬೆಂಗಳೂರು ಪಶ್ಚಿಮ ವಲಯದಲ್ಲಿ ನೀರು ಸರಬರಾಜು ನಿಲ್ಲಿಸಲಾಗುತ್ತಿದೆ. ಜೂನ್ 23 ಬುಧವಾರ ಬೆಳಗ್ಗೆ 6 ಗಂಟೆಯಿಂದ ಜೂನ್ 24ರ ಗುರುವಾರ ರಾತ್ರಿ 10 ಗಂಟೆಯವರೆಗೂ Local Shut Down ಹಾಗೂ ಅಗತ್ಯತೆಗೆ ಅನುಗುಣವಾಗಿ ಕಾವೇರಿ 4ನೇ ಹಂತ 1ನೇ ಘಟ್ಟದ 1 ಅಥವಾ 2 ಪಂಪ್ಗಳು ನಿಲ್ಲಿಸಲು ಅನುಮೋದಿಸಲಾಗಿದೆ.

ಇನ್ನು ಈ ಬಗ್ಗೆ ಬಿಡಬ್ಲ್ಯೂಎಸ್ಎಸ್ಬಿ ಪ್ರಕಟಣೆ ಹೊರಡಿಸಿದೆ. ನಾಗ್ಪುರ, ಮಹಾಲಕ್ಷ್ಮಿಪುರಂ, ಮಂಜುನಾಥ ನಗರ, ಶಿವನಗರ, ಮಹಾಗನಪತಿ ನಗರ, ತಿಮ್ಮಯ್ಯ ರಸ್ತೆ, ಬಸವೇಶ್ವರ ನಗರ. ಹೆಚ್ಬಿಸಿಎಸ್, ಶಕ್ತಿ ಗಣಪತಿ ನಗರ, ಶಂಕರ ಮಠ, ಕಮಲಾ ನಗರ, ಕಾಮಾಕ್ಷಿ ಪಾಳ್ಯ, ಶಾರದ ಕಾಲೋನಿ, ಬಿಇಎಮ್ಎಲ್ ಕಾಲೋನಿ, ಮೀನಾಕ್ಷಿ ನಗರ, ಬಾಲಾಜಿ ಲೇಔಟ್, ಮಲ್ಲತ್ ಹಳ್ಳಿ, ರೈಲ್ವೇ ಲೇಔಟ್ 2 ಸ್ಟೇಜ್, ಬಿಟಿಎಸ್ ಲೇಔಟ್, ಅಂಜನಾ ನಗರ, ಕೆಇಬಿ ರೋಡ್, ಬಡರಹಳ್ಳಿ,

ರಾಜೀವ್ ಗಾಂಧಿ ನಗರ, ಅಗ್ರಹಾರ ದಾಸರಭಾಲಿ, ಕೆಎಚ್‌ಬಿ 2 ನೇ ಹಂತ, ಪಾಪಯ್ಯ ಗಾರ್ಡನ್, ಮಹಾಲಕ್ಷ್ಮಿ ಲೇಔಟ್, ಸರಸ್ವತಿಪುರ, ಜೆಸಿ ನಗರ, ಕುರುಬರಹಳ್ಳಿ, ಸುಬ್ರಮಣ್ಯನಗರ ಎ, ಇ, ಡಿ ಬ್ಲಾಕ್, ಪ್ರಕಾಶ್ ನಗರ, ರಾಜಾಜಿನಗರ 1,2,3,4,5, 6ನೇ ಹಂತ ಮತ್ತು 1ಎನ್ ಬ್ಲಾಕ್, ಜೈ ಮಾರುತಿ ನಗರ, ಕಂಠೀರವ ನಗರ ಲೇಔಟ್, ನಂಜುಂಡೀಶ್ವರ ನಗರ, ಶ್ರೀ ಕಂಠೇಶ್ವರ ನಗರ, ಶಂಕರನಗರ, ಕೃಷ್ಣಾನಂದ ನಗರ, ಕೆಎಚ್‌ಬಿ ಕಾಲೋನಿ, ಜಾಸ್ಮಿನ್ ಗಾರ್ಡನ್, ವಿದ್ಯಾರಣ್ಯನಗರ, ಎನ್ಆರ್ ಗಾರ್ಡನ್, ಚೆಲುವಪ್ಪ ಗಾರ್ಡನ್, ಗಂಗಪ್ಪ ಗಾರ್ಡನ್, ಮಾಗಡಿ ರೋಡ್, ಕೆಪಿ ಅಗ್ರಹಾರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಂದಿನಿಂದ ಎರಡು ದಿನಗಳ ಕಾಲ ನೀರು ಸರಬರಾಜು ಸ್ಥಗಿತಗೊಳಿಸಲಾಗಿದೆ. ಇನ್ನು ಇದೇ ರೀತಿ ಕಳೆದ ವಾರ ಎರಡು ದಿನ ಬೆಂಗಳೂರು ದಕ್ಷಿಣದಲ್ಲಿ ನೀರು ಸ್ಥಗಿತಗೊಳಿಸಲಾಗಿತ್ತು.

ಇದನ್ನೂ ಓದಿ: Delta Plus Variant: ಕರ್ನಾಟಕದಲ್ಲಿ ಇದುವರೆಗೆ ಡೆಲ್ಟಾ ಪ್ಲಸ್ ವೈರಸ್​ ಪತ್ತೆಯಾಗಿಲ್ಲ; ಸಿಎಂ ಯಡಿಯೂರಪ್ಪ ಸ್ಪಷ್ಟನೆ

ಜುಲೈ ಮೊದಲ ಅಥವಾ ಎರಡನೇ ವಾರದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಕೊವಿಡ್ ಲಸಿಕೆ: ಡಿಸಿಎಂ ಡಾ. ಅಶ್ವತ್ಥ್ ನಾರಾಯಣ

(Ravi Krishna Reddy complaint against Karnataka Excise Minister Gopalaiah in ACB)

Published On - 7:11 pm, Wed, 23 June 21