Ramesh Jarkiholi CD Controversy: ಸಂತ್ರಸ್ತೆಗೆ ಸಾಮಾಜಿಕ ಮಾಧ್ಯಮ, ಮಾಧ್ಯಮಗಳಿಂದ ಅನ್ಯಾಯ ಆಗ್ತಿದೆ; ದಿನೇಶ್ ಕಲ್ಲಹಳ್ಳಿ ಪರ ವಕೀಲ
Dinesh Kallahalli: ದೂರಿನಲ್ಲಿ ತಾಂತ್ರಿಕ ಸಮಸ್ಯೆಗಳಿದ್ದವು. ಹೀಗಾಗಿ ಹಿಂಪಡೆಯುತ್ತಿದ್ದೇವೆ. ದಿನೇಶ್ ಕಲ್ಲಹಳ್ಳಿ ದೂರು ನೀಡಿರುವುದು ನಿಜ. ಆದರೆ ಎಲ್ಲಿಯೂ ಪ್ರಕರಣ ದಾಖಲಾಗಿಲ್ಲ. ಹೀಗಾಗಿ ದೂರು ಹಿಂಪಡೆಯಲು ಅವಕಾಶವಿದೆ ಎಂದು ದಿನೆಶ್ ಕಲ್ಲಹಳ್ಳಿ ಪರ ವಕೀಲರು ತಿಳಿಸಿದ್ದಾರೆ.
ಬೆಂಗಳೂರು: ‘ದಿನೇಶ್ ಕಲ್ಲಹಳ್ಳಿ ನೀಡಿದ್ದ ದೂರಿನಲ್ಲಿ ತಾಂತ್ರಿಕ ದೋಷವಿದೆ. ಸಂತ್ರಸ್ತೆಯ ಚಾರಿತ್ರ್ಯಹರಣವಾಗುತ್ತಿರುವ ಹಿನ್ನೆಲೆಯಲ್ಲಿ ದೂರು ವಾಪಸ್ ಪಡೆಯುತ್ತಿದ್ದೇವೆ ಎಂದು ಟಿವಿ9 ಕನ್ನಡಕ್ಕೆ ದಿನೇಶ್ ಕಲ್ಲಹಳ್ಳಿ ಪರ ವಕೀಲ ಕುಮಾರ್ ಪಾಟೀಲ್ ಹೇಳಿಕೆ ನೀಡಿದ್ದಾರೆ. ಸಂತ್ರಸ್ತೆಗೆ ಸಾಮಾಜಿಕ ಮಾಧ್ಯಮ, ಮಾಧ್ಯಮಗಳಿಂದ ಅನ್ಯಾಯ ಆಗ್ತಿದೆ. ಅಂಗಿ ಮೇಲೆ ಮುಳ್ಳುಬಿದ್ದರೂ, ಮುಳ್ಳಿನ ಮೇಲೆ ಅಂಗಿ ಬಿದ್ದರೂ ಹರಿಯೋದು ಅಂಗಿಯೇ. ದಿನೇಶ್ ಕಲ್ಲಹಳ್ಳಿ ಅವರ ಸೂಚನೆಯಂತೆ ದೂರು ಹಿಂಪಡೆಯುತ್ತಿದ್ದೇನೆ’ ಎಂದು ವಕೀಲ ಕುಮಾರ್ ಪಾಟೀಲ್ ಹೇಳಿದ್ದಾರೆ. ತಮ್ಮ ವಕೀಲರ ಪರ ಮೂಲಕ ದೂರು ಹಿಂಪಡೆಯುವ ಪತ್ರವನ್ನು ದಿನೇಶ್ ಕಲ್ಲಹಳ್ಳಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ರವಾನಿಸಿದ್ದು, ಈ ವೇಳೆ ವಕೀಲ ಕುಮಾರ್ ಪಾಟೀಲ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. .
‘ದಿನೇಶ್ ಕಲ್ಲಹಳ್ಳಿ ಈಗೇಕೆ ದೂರು ಹಿಂಪಡೆಯಲು ನಿರ್ಧರಿಸಿದ್ದಾರೆ? ಅವರೇ ಏಕೆ ಪೊಲೀಸ್ ಠಾಣೆಗೆ ಹೋಗುತ್ತಿಲ್ಲ’ ಎಂಬ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ವಕೀಲರು, ‘ಅವರು ಕೊಟ್ಟ ದೂರಿನಲ್ಲಿ ತಾಂತ್ರಿಕ ಸಮಸ್ಯೆಗಳಿದ್ದವು. ಹೀಗಾಗಿ ಹಿಂಪಡೆಯುತ್ತಿದ್ದೇವೆ. ದಿನೇಶ್ ಕಲ್ಲಹಳ್ಳಿ ದೂರು ನೀಡಿರುವುದು ನಿಜ. ಆದರೆ ಎಲ್ಲಿಯೂ ಪ್ರಕರಣ ದಾಖಲಾಗಿಲ್ಲ. ಹೀಗಾಗಿ ದೂರು ಹಿಂಪಡೆಯಲು ಅವಕಾಶವಿದೆ. ದಿನೇಶ್ ಕಲ್ಲಹಳ್ಳಿ ಅವರು ದೂರು ಹಿಂಪಡೆಯುವಂತೆ ನನಗೆ ಪತ್ರ ಕೊಟ್ಟಿದ್ದಾರೆ. ಪೊಲೀಸರು ಏನು ನಿರ್ಧಾರ ಮಾಡ್ತಾರೆ ನೋಡೋಣ. ಬಹುಶಃ ದಿನೇಶ್ ಕಲ್ಲಹಳ್ಳಿ ಅವರಿಗೆ ಹುಷಾರು ಇಲ್ಲದೆ ಇರಬಹುದು. ಹೀಗಾಗಿ ಅವರು ಬಾರದಿರಬಹುದು. ನಾನು ಪೊಲೀಸ್ ಠಾಣೆಗೆ ಹೋಗ್ತಿದ್ದೀನಿ’ ಎಂದು ದಿನೇಶ್ ಕಲ್ಲಹಳ್ಳಿ ಪರ ವಕೀಲರು ಹೇಳಿದ್ದಾರೆ.
ದಿನೇಶ್ ಕಲ್ಲಹಳ್ಳಿ ಮೇಲೆ ಒತ್ತಡವಿಲ್ಲ ನನ್ನ ಕಕ್ಷಿದಾರ ದಿನೇಶ್ ಕಲ್ಲಹಳ್ಳಿ ಮೇಲೆ ಯಾವುದೇ ಒತ್ತಡವಿಲ್ಲ. ದೂರಿನಲ್ಲಿ ಕೆಲ ತಾಂತ್ರಿಕ ಸಮಸ್ಯೆಗಳಿವೆ, ಹೀಗಾಗಿ ಹಿಂದಕ್ಕೆ ಪಡೆಯುತ್ತಿದ್ದೇವೆ. ಅವರು ಭಯಪಟ್ಟಿದ್ದಾರೆ ಎನ್ನೋದು ಸುಳ್ಳು. ಅವರೊಬ್ಬ ಸಾಮಾಜಿಕ ಹೋರಾಟ ಎಂದು ದಿನೇಶ್ ಕಲ್ಲಹಳ್ಳಿ ಪರ ವಕೀಲ ಕುಮಾರ್ ಪಾಟೀಲ್ ಟಿವಿ9ಗೆ ಪ್ರತಿಕ್ರಿಯಿಸಿದರು.
ದೂರು ಹಿಂಪಡೆಯಲು ಕುಮಾರಸ್ವಾಮಿ ಕಾರಣ: ದಿನೇಶ್ ಕಲ್ಲಹಳ್ಳಿ ಈ ಪ್ರಕರಣದಲ್ಲಿ ಮಾಹಿತಿ ಕೊಡೋರೋನ್ನೇ ಟಾರ್ಗೆಟ್ ಮಾಡಿರೋದು. ಕುಮಾರಣ್ಣ ಹೇಳಿಕೆಯಿಂದ ನನಗೆ ನೋವಾಗಿದೆ. ಹೀಗಾಗಿ ದೂರು ಹಿಂಪಡೆಯುತ್ತಿದ್ದೇನೆ ಎಂದು ದಿನೇಶ್ ಹೇಳಿದ್ದಾರೆ.
ಕುಮಾರಸ್ವಾಮಿ ಏನು ಹೇಳಿದ್ದರು? ‘ಈ ಪ್ರಕರಣದಲ್ಲಿ ₹ 5 ಕೋಟಿ ಪರಭಾರೆ ಆಗಿದೆ ಅಂತ ನನಗೆ ಮಾಹಿತಿಯಿದೆ. ಈ ರೀತಿಯ ಬ್ಲಾಕ್ಮೇಲ್ ಮಾಡುವ ವ್ಯಕ್ತಿಗಳನ್ನು ಸರ್ಕಾರ ಬಂಧಿಸಬೇಕು. ಆ ಮಾಹಿತಿಯನ್ನು ಸರ್ಕಾರವೇ ತಗೊಂಡು ಜನರ ಮುಂದೆ ಇಟ್ಟುಬಿಡಲಿ’ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದರು.
ಇದನ್ನೂ ಓದಿ: 6 ಮಂದಿ ಸಚಿವರು ಯಾಕೆ ಕೋರ್ಟ್ ಮೊರೆ ಹೋಗಿದ್ದಾರೆಂದು ನನಗೆ ಗೊತ್ತಿಲ್ಲ: ದಿನೇಶ್ ಕಲ್ಲಹಳ್ಳಿ
Published On - 3:42 pm, Sun, 7 March 21