ಮದುವೆ ಸಮಾರಂಭಗಳಲ್ಲಿ 400 ಜನ ಸೇರಬಹುದು; ಕೊಡಗು, ದ.ಕ. ಹೊರತುಪಡಿಸಿ ಕೊರೊನಾ ನಿರ್ಬಂಧ ಸಡಿಲಿಕೆ

| Updated By: ganapathi bhat

Updated on: Aug 30, 2021 | 8:42 PM

ಛತ್ರಗಳ ಮಾಲೀಕರು ಸಿಎಂ ಭೇಟಿಯಾಗಿ ಮನವಿ ಮಾಡಿದ್ದರು. ಹೀಗಾಗಿ, ಮದುವೆ, ಮತ್ತಿತರೆ ಸಮಾರಂಭಗಳಲ್ಲಿ 400 ಜನ ಸೇರಬಹುದು ಎಂದು ಹೇಳಲಾಗಿದೆ. ಆರ್. ಅಶೋಕ್ ಮಾಹಿತಿ ನೀಡಿದ್ಧಾರೆ.

ಮದುವೆ ಸಮಾರಂಭಗಳಲ್ಲಿ 400 ಜನ ಸೇರಬಹುದು; ಕೊಡಗು, ದ.ಕ. ಹೊರತುಪಡಿಸಿ ಕೊರೊನಾ ನಿರ್ಬಂಧ ಸಡಿಲಿಕೆ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಉಡುಪಿ, ಚಿಕ್ಕಮಗಳೂರು, ಹಾಸನ, ಮೈಸೂರು, ಕೋಲಾರ, ಶಿವಮೊಗ್ಗ ಜಿಲ್ಲೆಗಳಲ್ಲಿ ವಿಧಿಸಿದ್ದ ಕೊರೊನಾ ನಿರ್ಬಂಧ ಸಡಿಲಿಕೆ ಮಾಡಲಾಗುವುದು. ಕೊಡಗು, ದಕ್ಷಿಣ ಕನ್ನಡ ಹೊರತುಪಡಿಸಿ ಉಳಿದೆಡೆ ಕೊರೊನಾ ನಿರ್ಬಂಧ ಸಡಿಲಿಸಲಾಗುವುದು ಎಂದು ತಿಳಿಸಲಾಗಿದೆ. ಕೊಡಗು, ದಕ್ಷಿಣ ಕನ್ನಡ, ಉಡುಪಿ ಹಾಗೂ ಹಾಸನ ಜಿಲ್ಲೆಗಳಲ್ಲಿ ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಹಿಂಪಡೆಯುತ್ತಿದ್ದೇವೆ. ಛತ್ರಗಳ ಮಾಲೀಕರು ಸಿಎಂ ಭೇಟಿಯಾಗಿ ಮನವಿ ಮಾಡಿದ್ದರು. ಹೀಗಾಗಿ, ಮದುವೆ, ಮತ್ತಿತರೆ ಸಮಾರಂಭಗಳಲ್ಲಿ 400 ಜನ ಸೇರಬಹುದು ಎಂದು ಹೇಳಲಾಗಿದೆ. ಆರ್. ಅಶೋಕ್ ಮಾಹಿತಿ ನೀಡಿದ್ಧಾರೆ.

ಕಲ್ಯಾಣ ಮಂಟಪಗಳಲ್ಲಿ ಸಭೆ, ಸಮಾರಂಭಗಳಿಗೆ ಅವಕಾಶ ನೀಡಲಾಗುವ ಬಗ್ಗೆ ಆರ್. ಅಶೋಕ್ ಹೇಳಿದ್ದಾರೆ. ಸಣ್ಣಪುಟ್ಟ ಛತ್ರಗಳಲ್ಲಿ ಶೇಕಡಾ 50 ರಷ್ಟು ಜನ ಸೇರಲು ಅವಕಾಶ ನೀಡಲಾಗುವುದು. ದೊಡ್ಡ ಛತ್ರಗಳಲ್ಲಿ 400 ಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ ಎಂದು ಅವರು ತಿಳಿಸಿದ್ದಾರೆ. ಉಡುಪಿ, ಚಿಕ್ಕಮಗಳೂರು, ಹಾಸನ, ಮೈಸೂರು, ಕೋಲಾರ, ಶಿವಮೊಗ್ಗ ಜಿಲ್ಲೆಗಳಲ್ಲಿ ವಿಧಿಸಿದ್ದ ಇತರ ನಿರ್ಬಂಧ ಸಡಿಲಿಕೆ ಮಾಡಲಾಗುವುದು. ಕೊಡಗು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಥಾಸ್ಥಿತಿ ಮುಂದುವರಿಯಲಿದೆ. ರಾಜ್ಯಾದ್ಯಂತ ನೈಟ್ ಕರ್ಫ್ಯೂ ಮುಂದುವರಿಯಲಿದೆ. ರಾತ್ರಿ 9 ರಿಂದ ಮುಂಜಾನೆ 5 ಗಂಟೆವರೆಗೆ ನೈಟ್​ಕರ್ಫ್ಯೂ ಜಾರಿಯಲ್ಲಿ ಇರಲಿದೆ.

ರಾಜ್ಯ ಸರ್ಕಾರದಿಂದ ಕೊವಿಡ್​ ಮಾರ್ಗಸೂಚಿ ಪ್ರಕಟ
ಸೆಪ್ಟೆಂಬರ್ 13 ರವರೆಗೆ ಅನ್ವಯಿಸುವಂತೆ ಗೈಡ್​ಲೈನ್ಸ್​ ಪ್ರಕಟವಾಗಿದೆ. ಅದರಂತೆ, ರಾಜ್ಯದ 4 ಜಿಲ್ಲೆಗಳಲ್ಲಿ ಮಾತ್ರ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರಲಿದೆ. ಕೊಡಗು ಜಿಲ್ಲೆ, ಉಡುಪಿ ಜಿಲ್ಲೆ, ಹಾಸನ ಜಿಲ್ಲೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ಇರಲಿದೆ. ಬೆಳಗಾವಿ, ಬೀದರ್, ವಿಜಯಪುರ, ಕಲಬುರಗಿ, ಮೈಸೂರು, ಚಾಮರಾಜನಗರ ಜಿಲ್ಲೆಯಲ್ಲಿ ವೀಕೆಂಡ್​ ಕರ್ಪ್ಯೂ ಹಿಂತೆಗೆದುಕೊಳ್ಳಲಾಗಿದೆ.

ತಜ್ಞರ ಜತೆ ಸಿಎಂ ಬಸವರಾಜ ಬೊಮ್ಮಾಯಿ ಮಹತ್ವದ ಸಭೆ ನಡೆಸಿದ್ದಾರೆ. ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ತಜ್ಞರ ಜತೆ ಸಭೆ ನಡೆಸಲಾಗಿದೆ. ಸಚಿವರಾದ ಕೆ. ಸುಧಾಕರ್, ಬಿ.ಸಿ.ನಾಗೇಶ್, ಆರ್.ಅಶೋಕ್, ಸಿಎಸ್​ಪಿ ರವಿಕುಮಾರ್, ಡಿಜಿ & ಐಜಿಪಿ ಪ್ರವೀಣ್ ಸೂದ್, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಸಭೆಯಲ್ಲಿ ಭಾಗಿ ಆಗಿದ್ದಾರೆ.

ದಕ್ಷಿಣ ಕನ್ನಡ: ಸೆಪ್ಟೆಂಬರ್ 1ರಿಂದ ದ್ವಿತೀಯ ಪಿಯು ಆರಂಭ; ಮಾರ್ಗಸೂಚಿ ಪ್ರಕಟ
ಸೆಪ್ಟೆಂಬರ್ 1 ರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದ್ವಿತೀಯ ಪಿಯು ತರಗತಿಗಳು ಆರಂಭವಾಗಲಿದೆ. ಈ ಸಂಬಂಧ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ ಅಧಿಕೃತ ಆದೇಶ ಹೊರಡಿಸಿದ್ದಾರೆ. ದ್ವಿತೀಯ ಪಿಯು ಭೌತಿಕ ತರಗತಿ ಆರಂಭಿಸಲು ಮಾರ್ಗಸೂಚಿ ಹೊರಡಿಸಲಾಗಿದೆ. ಕೇರಳದಿಂದ ಬರುವ ವಿದ್ಯಾರ್ಥಿಗಳಿಗೆ 7 ದಿನ ಕ್ವಾರಂಟೈನ್ ಮಾಡಬೇಕು. ಕಾಲೇಜು ಹಾಸ್ಟೆಲ್‌ಗಳಲ್ಲಿ ಕೊವಿಡ್ ಕೇರ್ ಸೆಂಟರ್ ತೆರೆಯಬೇಕು. ಕೊರೊನಾ ಸೋಂಕು ದೃಢವಾದರೆ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ಕೊಡಿಸಬೇಕು ಎಮದು ತಿಳಿಸಲಾಗಿದೆ.

ಬೋಧಕ, ಬೋಧಕೇತರ ಸಿಬ್ಬಂದಿಗೆ ಕೊವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯ ಆಗಿರಲಿದೆ. ವಸತಿ ನಿಲಯ, ಸ್ಥಳೀಯ ವಿದ್ಯಾರ್ಥಿಗಳಿಗೆ ಪ್ರತ್ಯೇಕ ತರಗತಿ ಮಾಡಲಾಗುವುದು. ಸೆಪ್ಟೆಂಬರ್ 15 ರ ಬಳಿಕ ಪ್ರಥಮ ಪಿಯು ತರಗತಿ ಆರಂಭಿಸಲು ಸೂಚನೆ ನೀಡಲಾಗಿದೆ.

ಇದನ್ನೂ ಓದಿ: ಗಣೇಶೋತ್ಸವ ಆಚರಣೆಗೆ ಕಳೆದ ಬಾರಿಗಿಂತ ಹೆಚ್ಚು ಅವಕಾಶ; ಸೆಪ್ಟೆಂಬರ್ 5ಕ್ಕೆ ಅಂತಿಮ ತೀರ್ಮಾನ: ಆರ್ ಅಶೋಕ್

ಇದನ್ನೂ ಓದಿ: ಕೇರಳದಿಂದ ಬರುವ ಎಲ್ಲಾ ವಿದ್ಯಾರ್ಥಿಗಳಿಗೆ ಒಂದು ವಾರಗಳ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯ

(Relaxation to marriage Restrictions and Weekend Curfew in Karnataka says R Ashok)

Published On - 6:08 pm, Mon, 30 August 21