AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇರಳದಿಂದ ಬರುವ ಎಲ್ಲಾ ವಿದ್ಯಾರ್ಥಿಗಳಿಗೆ ಒಂದು ವಾರಗಳ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯ

ಕೇರಳದಲ್ಲಿ ಕೊವಿಡ್ ಜಾಸ್ತಿ ಇರುವ ಕಾರಣ ಕೇರಳದಿಂದ ಬರುವ ಎಲ್ಲಾ ವಿದ್ಯಾರ್ಥಿಗಳಿಗೆ ಒಂದು ವಾರಗಳ ಕಡ್ಡಾಯ ಸಾಂಸ್ಥಿಕ ಕ್ವಾರಂಟೈನ್

ಕೇರಳದಿಂದ ಬರುವ ಎಲ್ಲಾ ವಿದ್ಯಾರ್ಥಿಗಳಿಗೆ ಒಂದು ವಾರಗಳ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on:Aug 30, 2021 | 7:16 PM

Share

ಬೆಂಗಳೂರು: ಕೇರಳದಲ್ಲಿ ಕೊವಿಡ್ ಜಾಸ್ತಿ ಇರುವ ಕಾರಣ ಕೇರಳದಿಂದ ಬರುವ ಎಲ್ಲಾ ವಿದ್ಯಾರ್ಥಿಗಳಿಗೆ ಒಂದು ವಾರಗಳ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರದ ನೀತಿ ನಿಯಮಗಳ ಬಗ್ಗೆ ಚರ್ಚೆ ಮಾಡಲಾಗುವುದು. ಸದ್ಯದ ಪರಿಸ್ಥಿತಿಯಲ್ಲಿ ಕೇರಳದಲ್ಲಿ ದಿನೇದಿನೆ ಕೊರೊನಾ ಪ್ರಕರಣ ಹೆಚ್ಚುತ್ತಿದೆ ಎಂದು ತಜ್ಞರ ಜತೆ ಸಭೆ ನಂತರ ಸಚಿವ ಆರ್. ಅಶೋಕ್ ಹೇಳಿಕೆ ನೀಡಿದ್ದಾರೆ. ಕೇರಳದಿಂದ ಬರುವವರಿಗೆ 1 ವಾರ ಕಡ್ಡಾಯ ಕ್ವಾರಂಟೈನ್​ ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದೆ. ಒಂದು ವಾರದ ನಂತರ ಕೊವಿಡ್ ಟೆಸ್ಟ್ ಮಾಡಿಸಬೇಕು ಎಂದು ತಿಳಿಸಲಾಗಿದೆ

ಕಲ್ಯಾಣ ಮಂಟಪಗಳಲ್ಲಿ ಸಭೆ, ಸಮಾರಂಭಗಳಿಗೆ ಅವಕಾಶ ನೀಡಲಾಗುವ ಬಗ್ಗೆ ಆರ್. ಅಶೋಕ್ ಹೇಳಿದ್ದಾರೆ. ಸಣ್ಣಪುಟ್ಟ ಛತ್ರಗಳಲ್ಲಿ ಶೇಕಡಾ 50 ರಷ್ಟು ಜನ ಸೇರಲು ಅವಕಾಶ ನೀಡಲಾಗುವುದು. ದೊಡ್ಡ ಛತ್ರಗಳಲ್ಲಿ 400 ಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ ಎಂದು ಅವರು ತಿಳಿಸಿದ್ದಾರೆ. ಉಡುಪಿ, ಚಿಕ್ಕಮಗಳೂರು, ಹಾಸನ, ಮೈಸೂರು, ಕೋಲಾರ, ಶಿವಮೊಗ್ಗ ಜಿಲ್ಲೆಗಳಲ್ಲಿ ವಿಧಿಸಿದ್ದ ನಿರ್ಬಂಧ ಸಡಿಲಿಕೆ ಮಾಡಲಾಗುವುದು. ಕೊಡಗು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಥಾಸ್ಥಿತಿ ಮುಂದುವರಿಯಲಿದೆ. ಉಳಿದ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಹಿಂಪಡೆಯುತ್ತಿದ್ದೇವೆ ಎಂದು ಅಶೋಕ್ ಹೇಳಿದ್ದಾರೆ. ರಾಜ್ಯಾದ್ಯಂತ ನೈಟ್ ಕರ್ಫ್ಯೂ ಮುಂದುವರಿಯಲಿದೆ. ರಾತ್ರಿ 9 ರಿಂದ ಮುಂಜಾನೆ 5 ಗಂಟೆವರೆಗೆ ನೈಟ್​ಕರ್ಫ್ಯೂ ಜಾರಿಯಲ್ಲಿ ಇರಲಿದೆ.

ತಜ್ಞರ ಜತೆ ಸಿಎಂ ಬಸವರಾಜ ಬೊಮ್ಮಾಯಿ ಮಹತ್ವದ ಸಭೆ ನಡೆಸಿದ್ದಾರೆ. ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ತಜ್ಞರ ಜತೆ ಸಭೆ ನಡೆಸಲಾಗಿದೆ. ಸಚಿವರಾದ ಕೆ. ಸುಧಾಕರ್, ಬಿ.ಸಿ.ನಾಗೇಶ್, ಆರ್.ಅಶೋಕ್, ಸಿಎಸ್​ಪಿ ರವಿಕುಮಾರ್, ಡಿಜಿ & ಐಜಿಪಿ ಪ್ರವೀಣ್ ಸೂದ್, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಸಭೆಯಲ್ಲಿ ಭಾಗಿ ಆಗಿದ್ದಾರೆ.

ದಕ್ಷಿಣ ಕನ್ನಡ: ಸೆಪ್ಟೆಂಬರ್ 1ರಿಂದ ದ್ವಿತೀಯ ಪಿಯು ಆರಂಭ; ಮಾರ್ಗಸೂಚಿ ಪ್ರಕಟ ಸೆಪ್ಟೆಂಬರ್ 1 ರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದ್ವಿತೀಯ ಪಿಯು ತರಗತಿಗಳು ಆರಂಭವಾಗಲಿದೆ. ಈ ಸಂಬಂಧ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ ಅಧಿಕೃತ ಆದೇಶ ಹೊರಡಿಸಿದ್ದಾರೆ. ದ್ವಿತೀಯ ಪಿಯು ಭೌತಿಕ ತರಗತಿ ಆರಂಭಿಸಲು ಮಾರ್ಗಸೂಚಿ ಹೊರಡಿಸಲಾಗಿದೆ. ಕೇರಳದಿಂದ ಬರುವ ವಿದ್ಯಾರ್ಥಿಗಳಿಗೆ 7 ದಿನ ಕ್ವಾರಂಟೈನ್ ಮಾಡಬೇಕು. ಕಾಲೇಜು ಹಾಸ್ಟೆಲ್‌ಗಳಲ್ಲಿ ಕೊವಿಡ್ ಕೇರ್ ಸೆಂಟರ್ ತೆರೆಯಬೇಕು. ಕೊರೊನಾ ಸೋಂಕು ದೃಢವಾದರೆ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ಕೊಡಿಸಬೇಕು ಎಮದು ತಿಳಿಸಲಾಗಿದೆ.

ಬೋಧಕ, ಬೋಧಕೇತರ ಸಿಬ್ಬಂದಿಗೆ ಕೊವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯ ಆಗಿರಲಿದೆ. ವಸತಿ ನಿಲಯ, ಸ್ಥಳೀಯ ವಿದ್ಯಾರ್ಥಿಗಳಿಗೆ ಪ್ರತ್ಯೇಕ ತರಗತಿ ಮಾಡಲಾಗುವುದು. ಸೆಪ್ಟೆಂಬರ್ 15 ರ ಬಳಿಕ ಪ್ರಥಮ ಪಿಯು ತರಗತಿ ಆರಂಭಿಸಲು ಸೂಚನೆ ನೀಡಲಾಗಿದೆ.

ಇದನ್ನೂ ಓದಿ: ಗಣೇಶೋತ್ಸವ ಆಚರಣೆಗೆ ಕಳೆದ ಬಾರಿಗಿಂತ ಹೆಚ್ಚು ಅವಕಾಶ; ಸೆಪ್ಟೆಂಬರ್ 5ಕ್ಕೆ ಅಂತಿಮ ತೀರ್ಮಾನ: ಆರ್ ಅಶೋಕ್

ಇದನ್ನೂ ಓದಿ: ಮದುವೆ ಸಮಾರಂಭಗಳಲ್ಲಿ 400 ಜನ ಸೇರಬಹುದು; ಕೊಡಗು, ದ.ಕ. ಹೊರತುಪಡಿಸಿ ಕೊರೊನಾ ನಿರ್ಬಂಧ ಸಡಿಲಿಕೆ

(Coronavirus 7 days Quarantine for Kerala students coming to Karnataka details here)

Published On - 5:55 pm, Mon, 30 August 21

Follow Us
ರಾಷ್ಟ್ರಪತಿಗಳ ಗಮನಸೆಳೆದ ಕರಗ: ದ್ರೌಪದಿ ಮುರ್ಮು ಹೇಳಿದ್ದೇನು ಗೊತ್ತಾ?
ರಾಷ್ಟ್ರಪತಿಗಳ ಗಮನಸೆಳೆದ ಕರಗ: ದ್ರೌಪದಿ ಮುರ್ಮು ಹೇಳಿದ್ದೇನು ಗೊತ್ತಾ?
ಮೊದಲ ಪಂದ್ಯದಲ್ಲಿ ಗೋಲ್ಡನ್ ಡಕ್​ಗೆ ಬಲಿಯಾದ ಕೆಎಲ್ ರಾಹುಲ್
ಮೊದಲ ಪಂದ್ಯದಲ್ಲಿ ಗೋಲ್ಡನ್ ಡಕ್​ಗೆ ಬಲಿಯಾದ ಕೆಎಲ್ ರಾಹುಲ್
ಚಂಡೀಗಢದ ಬಿಜೆಪಿ ಕಚೇರಿಯ ಹೊರಗೆ ಗ್ರೆನೇಡ್ ಸ್ಫೋಟ; ವಿಡಿಯೋ ಇಲ್ಲಿದೆ
ಚಂಡೀಗಢದ ಬಿಜೆಪಿ ಕಚೇರಿಯ ಹೊರಗೆ ಗ್ರೆನೇಡ್ ಸ್ಫೋಟ; ವಿಡಿಯೋ ಇಲ್ಲಿದೆ
ನೀವು ಯಾಕೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ? ನೇರವಾಗಿ ಉತ್ತರಿಸಿದ ಉಪೇಂದ್ರ
ನೀವು ಯಾಕೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ? ನೇರವಾಗಿ ಉತ್ತರಿಸಿದ ಉಪೇಂದ್ರ
ಮೊದಲ ಪಂದ್ಯದಲ್ಲೇ ರಿಷಭ್ ಪಂತ್​ಗೆ ಕೈಕೊಟ್ಟ ಅದೃಷ್ಟ
ಮೊದಲ ಪಂದ್ಯದಲ್ಲೇ ರಿಷಭ್ ಪಂತ್​ಗೆ ಕೈಕೊಟ್ಟ ಅದೃಷ್ಟ
ದಾವಣಗೆರೆಗೆ ಬಂದ ಸಿದ್ದರಾಮಯ್ಯಗೆ ಪ್ರೀತಿಯಿಂದ ಕ್ಲಾಸ್ ತೆಗೆದುಕೊಂಡ ಅಭಿಮಾನಿ
ದಾವಣಗೆರೆಗೆ ಬಂದ ಸಿದ್ದರಾಮಯ್ಯಗೆ ಪ್ರೀತಿಯಿಂದ ಕ್ಲಾಸ್ ತೆಗೆದುಕೊಂಡ ಅಭಿಮಾನಿ
ಟೋಲ್‌ನಲ್ಲಿ ಹೊಸ ನಿಯಮ ಪರಿಣಾಮ: ಫಾಸ್ಟ್‌ಟ್ಯಾಗ್​ಗೆ ಹೆಚ್ಚಿದ ಬೇಡಿಕೆ
ಟೋಲ್‌ನಲ್ಲಿ ಹೊಸ ನಿಯಮ ಪರಿಣಾಮ: ಫಾಸ್ಟ್‌ಟ್ಯಾಗ್​ಗೆ ಹೆಚ್ಚಿದ ಬೇಡಿಕೆ
ಯಮರಾಜನನ್ನು ಭೇಟಿಯಾದ ರಾಹುಲ್ ಗಾಂಧಿ
ಯಮರಾಜನನ್ನು ಭೇಟಿಯಾದ ರಾಹುಲ್ ಗಾಂಧಿ
ಮಹಿಳಾ ಉದ್ಯೋಗಿಯ ತುಟಿಗೆ ಚುಂಬಿಸಲು ಹೋದ ಕಾಮುಕ: ವೀಡಿಯೋ ವೈರಲ್
ಮಹಿಳಾ ಉದ್ಯೋಗಿಯ ತುಟಿಗೆ ಚುಂಬಿಸಲು ಹೋದ ಕಾಮುಕ: ವೀಡಿಯೋ ವೈರಲ್
ಜನಗಣತಿ: ಸ್ವಯಂ ಗಣತಿ ಹೇಗೆ ಮಾಡುವುದು? ಸಾರ್ವಜನಿಕರು ಭಾಗಿಯಾಗೋದು ಹೇಗೆ?
ಜನಗಣತಿ: ಸ್ವಯಂ ಗಣತಿ ಹೇಗೆ ಮಾಡುವುದು? ಸಾರ್ವಜನಿಕರು ಭಾಗಿಯಾಗೋದು ಹೇಗೆ?