AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Monsoon 2021: ಮೈಸೂರಿನ ಕಬಿನಿ ಜಲಾಶಯದಲ್ಲಿ ಗರಿಷ್ಠ ನೀರು ಶೇಖರಣೆ; ಮಳೆಯಿಂದ ಸಂತಸ

ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿ ಗ್ರಾಮದ ಬಳಿಯಿರುವ ಕಬಿನಿ ಜಲಾಶಯದ ಗರಿಷ್ಠ ಮಟ್ಟ 84 ಅಡಿಯಾಗಿದ್ದು, ಇಂದಿನ ಜಲಾಶಯದ ಗರಿಷ್ಠ ಶೇಖರಣೆ ಪ್ರಮಾಣ 19.52 ಟಿಎಂಸಿ.

Karnataka Monsoon 2021: ಮೈಸೂರಿನ ಕಬಿನಿ ಜಲಾಶಯದಲ್ಲಿ ಗರಿಷ್ಠ ನೀರು ಶೇಖರಣೆ; ಮಳೆಯಿಂದ ಸಂತಸ
ಕಬಿನಿ ಡ್ಯಾಂ
TV9 Web
| Edited By: |

Updated on:Jun 19, 2021 | 1:09 PM

Share

ಪ್ರತಿ ವರ್ಷದ ಮಳೆಗಾಲ ನೊವು- ನಲಿವಿನ ಸಮಾಗಮವಿದ್ದಂತೆ. ಮಳೆಗಾಲ ಆರಂಭವಾದ ಕೂಡಲೇ ಭತ್ತಿ ಹೋದ ನದಿಗಳು ಮರು ಜೀವ ಪಡೆದುಕೊಳ್ಳುತ್ತದೆ. ಅಂತೆಯೇ ಇಳೆಗೆ ಮಳೆ ಎಂಬ ತಂಪುಗವಿಯಲಾರಂಬಿಸುತ್ತದೆ. ಮಳೆ ಬಂದರೆ ಸಾಕು ಎಂದು ಬೇಡಿಕೊಳ್ಳುವ ರೈತರು ಒಂದು ಕಡೆಯಾದರೆ, ಮಳೆಗೆ ಹೆದರಿ ಮನೆಯನ್ನು ಭದ್ರಪಡಿಸುವ ಮಂದಿ ಇನ್ನೊಂದು ಕಡೆ. ಮಳೆಯ ವಿಶೇಷತೆಯೇ ಬಹುಷಃ ಇದೆ ಅನಿಸುತ್ತದೆ. ಒಂದು ಕಡೆ ಮಳೆ ಬಂದರೆ ಖುಷಿ, ಇದೇ ಮಳೆ ಅತಿಯಾದರೆ ದುಖಃ. ಮಳೆಗಾಲ ಈಗ ಆರಂಭವಾಗಿದೆ. ಮಳೆಗಾಗಿ ಹಂಬಲಿಸುತ್ತಿದ್ದ ಜನಕ್ಕೆ ನೆಮ್ಮದಿ ದೊರೆತಂತಾಗಿದೆ. ಅಂತೆಯೇ ಗಾಳಿ ಮಳೆಗೆ ಅನೇಕರು ಮನೆ ಮಠ ಕಳೆದುಕೊಳ್ಳುವ ಭಯದ ಅಂಚಿನಲ್ಲಿದ್ದಾರೆ. ಮೈಸೂರು ಭಾಗದಲ್ಲಿ ಸದ್ಯ ಈಗಷ್ಟೇ ಮಳೆ ಆರಂಭವಾಗಿದ್ದು, ಜನರು ಮಳೆಯ ಆಗಮನದಿಂದಾಗಿ ಸಂತಸದಲ್ಲಿದ್ದಾರೆ.

ಕೇರಳದ ವಯನಾಡಿನಲ್ಲಿ ಹೆಚ್ಚಿದ ಮಳೆ ಪ್ರಮಾಣ ಕೇರಳದ ವಯನಾಡಿನಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಬಿನಿ ಜಲಾಶಯಕ್ಕೆ ನೀರಿನ ಒಳ ಹರಿವು ಪ್ರಮಾಣ ಹೆಚ್ಚಳವಾಗಿದೆ. ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿ ಗ್ರಾಮದ ಬಳಿಯಿರುವ ಕಬಿನಿ ಜಲಾಶಯದ ಗರಿಷ್ಠ ಮಟ್ಟ 84 ಅಡಿಯಾಗಿದ್ದು, ಇನ್ನು ಜಲಾಶಯದ ಗರಿಷ್ಠ ಶೇಖರಣೆ ಪ್ರಮಾಣ 19.52 ಟಿಎಂಸಿ, ಜಲಾಶಯದ ಇಂದಿನ ಶೇಖರಣೆ ಪ್ರಮಾಣ 13.91 ಟಿಎಂಸಿ, ನಾಲೆಗಳಿಗೆ 00 ಮತ್ತು ಜಲಾನಯನ ಪ್ರದೇಶದಲ್ಲಿ ಮಳೆ‌ ಪ್ರಮಾಣ 25 ಎಂಎಂ ಆಗಿದೆ. ಇಂದಿನ ಜಲಾಶಯದ ನೀರಿನ ಮಟ್ಟ 74.34 ಅಡಿಯಾಗಿದೆ. ಕಬಿನಿ ಡ್ಯಾಂಗೆ 16,213 ಕ್ಯೂಸೆಕ್ ನೀರು ಒಳ ಹರಿವು ಇದ್ದು, ಕಬಿನಿ ಡ್ಯಾಂನಿಂದ 700 ಕ್ಯೂಸೆಕ್ ನೀರು ಹೊರ ಹರಿವು ಆಗಿದೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಡ್ಯಾಂಕೆಆರ್‌ಎಸ್ ಡ್ಯಾಂ ಜಲಾಶಯದ ನೀರಿನ ಮಟ್ಟ ಕೆಆರ್‌ಎಸ್ ಜಲಾಶಯದ ಇಂದಿನ ನೀರಿನ ಮಟ್ಟ 89.16 ಅಡಿ ಕೆಆರ್‌ಎಸ್ ಜಲಾಶಯದ ಗರಿಷ್ಠ ನೀರಿನ ಮಟ್ಟ 124.80 ಅಡಿ ಕೆಆರ್‌ಎಸ್ ಜಲಾಶಯಕ್ಕೆ ಒಳ ಹರಿವು 16,588 ಕ್ಯೂಸೆಕ್ ಜಲಾಶಯದಿಂದ 1,104 ಕ್ಯೂಸೆಕ್ ನೀರು ಹೊರ ಹರಿವು ನೀರಿನ ಸಂಗ್ರಹ 15.443 ಟಿಎಂಸಿ ಗರಿಷ್ಟ ಸಂಗ್ರಹ – 49.452 ಟಿಎಂಸಿ

ಇದನ್ನೂ ಓದಿ:

Rain Effect: ಮಲೆನಾಡಿನಲ್ಲೂ ಭಾರೀ ಮಳೆ; ಮಳೆಗಾಲದ ಆರಂಭಿಕ ಹಂತದಲ್ಲಿಯೇ ತತ್ತರಿಸಿದ ಜನತೆ

Rain Effect: ಮುಂಬೈ ಕರ್ನಾಟಕದಲ್ಲಿ ಭಾರೀ ಮಳೆ; ನದಿಗಳು ತುಂಬಿ ರಸ್ತೆ ಜಲಾವೃತ

Published On - 1:06 pm, Sat, 19 June 21

ಕೈಕೊಟ್ಟ ಕೇಂದ್ರದ ವಾಹನ್-4: ಬೇರೆ ರಾಜ್ಯಗಳಿಗೆ ತೆರಳುವ ವಾಹನಗಳ ಪರದಾಟ
ಕೈಕೊಟ್ಟ ಕೇಂದ್ರದ ವಾಹನ್-4: ಬೇರೆ ರಾಜ್ಯಗಳಿಗೆ ತೆರಳುವ ವಾಹನಗಳ ಪರದಾಟ
ರಾಶಿಕಾ ಬಗ್ಗೆ ಅಪರೂಪದ ವಿಷಯಗಳ ಹೇಳಿದ ತಾಯಿ
ರಾಶಿಕಾ ಬಗ್ಗೆ ಅಪರೂಪದ ವಿಷಯಗಳ ಹೇಳಿದ ತಾಯಿ
ಕಾಡಾನೆ ಓಡಿಸಲೂ ಬಂತು AI ಕ್ಯಾಮರಾ: ಹೇಗೆ ಕೆಲಸ ಮಾಡುತ್ತೆ ಗೊತ್ತಾ?
ಕಾಡಾನೆ ಓಡಿಸಲೂ ಬಂತು AI ಕ್ಯಾಮರಾ: ಹೇಗೆ ಕೆಲಸ ಮಾಡುತ್ತೆ ಗೊತ್ತಾ?
GBA ಕಂದಾಯ ಆಯುಕ್ತ ಮುನೀಶ್ ಮೌದ್ಗಿಲ್ ವಿರುದ್ಧ ಸಿಡಿದೆದ್ದ ನೌಕರರು
GBA ಕಂದಾಯ ಆಯುಕ್ತ ಮುನೀಶ್ ಮೌದ್ಗಿಲ್ ವಿರುದ್ಧ ಸಿಡಿದೆದ್ದ ನೌಕರರು
ಜ್ಯುವೆಲ್ಲರಿ ಅಂಗಡಿಗೆ ಕನ್ನ: ಸಿಸಿಟಿವಿಯ ಡಿವಿಆರ್ ಕದ್ದೊಯ್ದ ಖದೀಮರು
ಜ್ಯುವೆಲ್ಲರಿ ಅಂಗಡಿಗೆ ಕನ್ನ: ಸಿಸಿಟಿವಿಯ ಡಿವಿಆರ್ ಕದ್ದೊಯ್ದ ಖದೀಮರು
ಮದ್ವೆಯಾದ ಹತ್ತೇ ದಿನದಲ್ಲಿ ನವವಿವಾಹಿತ ಜೈಲು ಪಾಲು!
ಮದ್ವೆಯಾದ ಹತ್ತೇ ದಿನದಲ್ಲಿ ನವವಿವಾಹಿತ ಜೈಲು ಪಾಲು!
ಅಲೋಕ್ ಕುಮಾರ್ ವಿಶೇಷ ಕಾರ್ಯಾಚರಣೆ:ಮಂಗಳೂರು ಜೈಲು ಪರಿಶೀಲನೆ
ಅಲೋಕ್ ಕುಮಾರ್ ವಿಶೇಷ ಕಾರ್ಯಾಚರಣೆ:ಮಂಗಳೂರು ಜೈಲು ಪರಿಶೀಲನೆ
ವಾಹನ ಸವಾರರೇ ಎಚ್ಚರ ಎಚ್ಚರ: ಬೆಂಗಳೂರಲ್ಲಿ ಪಂಕ್ಚರ್ ಮಾಫಿಯಾ ಮತ್ತೆ ಸಕ್ರಿಯ
ವಾಹನ ಸವಾರರೇ ಎಚ್ಚರ ಎಚ್ಚರ: ಬೆಂಗಳೂರಲ್ಲಿ ಪಂಕ್ಚರ್ ಮಾಫಿಯಾ ಮತ್ತೆ ಸಕ್ರಿಯ
ದಂಪತಿ ರೈಲಿನಿಂದ ಹಾರುವ ಮುನ್ನ ಇಬ್ಬರ ನಡುವೆ ರೈಲಿನಲ್ಲಿ ಏನಾಗಿತ್ತು ನೋಡಿ
ದಂಪತಿ ರೈಲಿನಿಂದ ಹಾರುವ ಮುನ್ನ ಇಬ್ಬರ ನಡುವೆ ರೈಲಿನಲ್ಲಿ ಏನಾಗಿತ್ತು ನೋಡಿ
ಚಾಮರಾಜನಗರ: ಚಿರತೆ ಸೆರೆಗೆ ಇಟ್ಟಿದ್ದ ಬೋನಿನಲ್ಲಿ ಸಿಕ್ಕಿಬಿದ್ದ ವ್ಯಕ್ತಿ!
ಚಾಮರಾಜನಗರ: ಚಿರತೆ ಸೆರೆಗೆ ಇಟ್ಟಿದ್ದ ಬೋನಿನಲ್ಲಿ ಸಿಕ್ಕಿಬಿದ್ದ ವ್ಯಕ್ತಿ!