ಬೆಂಗಳೂರು: ಗರುಡಾಚಾರ್ ಪಾಳ್ಯದಲ್ಲಿ ದಂಪತಿಯನ್ನು ಹತ್ಯೆ ಮಾಡಿ ಪರಾರಿಯಾಗಿದ್ದ ಆರೋಪಿಗಳನ್ನು ಮಹದೇವಪುರ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಲ್ಲಿ ಕ್ಯಾಬ್ ಚಾಲಕನಾಗಿದ್ದ ಆರೋಪಿ ವೆಂಕಟೇಶ್(30) ಮತ್ತು ಆತನ ಪತ್ನಿ ಅರ್ಪಿತಾ(21) ಬಂಧಿತ ಆರೋಪಿಗಳು.
ಮದುವೆ ಮನೆಯಲ್ಲಿ ಭೇಟಿಯಾಗುತ್ತಿದ್ದ ಸಂಬಂಧಿಕರನ್ನೇ ಆರೋಪಿಗಳು ಟಾರ್ಗೆಟ್ ಮಾಡುತ್ತಿದ್ದರು. ಮಕ್ಕಳಿಲ್ಲದ ಶ್ರೀಮಂತ ದಂಪತಿಯನ್ನು ಪರಿಚಯ ಮಾಡಿಕೊಂಡು ಅವರ ಮನೆಗೆ ತೆರಳಿ ಸ್ನೇಹ ಸಂಪಾದಿಸುತ್ತಿದ್ದರು. ಅದೇ ರೀತಿ ಚಂದ್ರೇಗೌಡ ನಿವಾಸಕ್ಕೆ 2 ಬಾರಿ ಬಂದಿದ್ದರು. ಅ.17ರಂದು ಮನೆಗೆ ಬಂದಿದ್ದ ಆರೋಪಿಗಳು ಚಂದ್ರೇಗೌಡ, ಲಕ್ಷ್ಮಮ್ಮ ದಂಪತಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದರು.
ಬಂಧಿತ ವೆಂಕಟೇಶ್ ಮತ್ತು ಅರ್ಪಿತಾ ದಂಪತಿ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ಮೂಲದವರಾಗಿದ್ದಾರೆ. ಇವರು ಸ್ವಂತ ಕಾರುಕೊಳ್ಳಲು ಮತ್ತು ಮಾಡಿದ್ದ ಸಾಲ ತೀರಿಸಲು ಹತ್ಯೆ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಬಂಧಿತರಿಂದ 5ಲಕ್ಷ ಮೌಲ್ಯದ 305 ಗ್ರಾಂ ಚಿನ್ನಾಭರಣವನ್ನು ಮಹದೇವಪುರ ಪೊಲೀಸರು ಜಪ್ತಿ ಮಾಡಿದ್ದಾರೆ.
ರಾಯಸಮುದ್ರ ಜೋಡಿ ಕೊಲೆ ಪ್ರಕರಣ: ಈಗಾಗಲೇ ಆರೋಪಿಗಳ ಬಂಧನ
ರಾಯಸಮುದ್ರ ಜೋಡಿ ಕೊಲೆ ಪ್ರಕರಣ ಸಂಬಂಧ ಈಗಾಗಲೇ ಆರೋಪಿಗಳನ್ನು ಬಂಧಿಸಲಾಗಿದೆ. ಆದ್ರೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನ ಮಹದೇವಪುರ ಪೋಲಿಸರು ಬಂಧಿಸಿದ್ದಾರೆಂಬ ಮಾಹಿತಿ ಇದೆ. ಈ ಬಗ್ಗೆ ಇನ್ನು ಖಚಿತವಾಗಿಲ್ಲ ಎಂದು ಮಂಡ್ಯ ಎಸ್ಪಿ ಪರಶುರಾಮ್ ಹೇಳಿದ್ದಾರೆ.
Published On - 3:46 pm, Mon, 28 October 19