ಸಿಡಿಲಿನಿಂದ ತಾಯಿ ಮಗ ದುರ್ಮರಣ; ಬೈಕ್​​ನಲ್ಲಿ ತೆರಳ್ತಿದ್ದ ದಂಪತಿ ಜೊತೆ ಮೊಮ್ಮಗಳ ಸಾವು, ಬಸ್ ಡಿಕ್ಕಿ ಬೈಕ್​​ನಲ್ಲಿ ತೆರಳ್ತಿದ್ದ ಇಬ್ಬರ ಸಾವು

| Updated By: ಸಾಧು ಶ್ರೀನಾಥ್​

Updated on: May 04, 2022 | 9:10 PM

ಅಪಘಾತದಲ್ಲಿ ಕಿರಣ್(23) ಮತ್ತು ವೆಂಕಟೇಶ್​​(25) ಸಾವಿಗೀಡಾಗಿದ್ದಾರೆ. ಜಾತ್ರೆಯ ಊಟ ಮುಗಿಸಿದ ಬಳಿಕ ಇಬ್ಬರೂ ಸ್ನೇಹಿತರು ಊರಿಗೆ ವಾಪಸಾಗುತ್ತಿದ್ದರು. ಮೃತರು ಹೊಸಪೇಟೆ ತಾಲೂಕಿನ ಕಾಕುಬಾಳು ನಿವಾಸಿಗಳು.

ಸಿಡಿಲಿನಿಂದ ತಾಯಿ ಮಗ ದುರ್ಮರಣ; ಬೈಕ್​​ನಲ್ಲಿ ತೆರಳ್ತಿದ್ದ ದಂಪತಿ ಜೊತೆ ಮೊಮ್ಮಗಳ ಸಾವು, ಬಸ್ ಡಿಕ್ಕಿ ಬೈಕ್​​ನಲ್ಲಿ ತೆರಳ್ತಿದ್ದ ಇಬ್ಬರ ಸಾವು
ಸಿಡಿಲಿನಿಂದ ತಾಯಿ ಮಗ ದುರ್ಮರಣ; ಬೈಕ್​​ನಲ್ಲಿ ತೆರಳ್ತಿದ್ದ ದಂಪತಿ ಜೊತೆ ಮೊಮ್ಮಗಳ ಸಾವು, ಬಸ್ ಡಿಕ್ಕಿ ಬೈಕ್​​ನಲ್ಲಿ ತೆರಳ್ತಿದ್ದ ಇಬ್ಬರ ಸಾವು
Follow us on

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ಮೇಗಳಹಟ್ಟಿ ಗ್ರಾಮದ ಬಳಿ ಸಿಡಿಲು ಬಡಿದು ತಾಯಿ ಮತ್ತು ಮಗ ದುರ್ಮರಣಕ್ಕೀಡಾಗಿದ್ದಾರೆ. ಮೇಗಳಹಟ್ಟಿಯ ಮಾರಕ್ಕ(40) ಮತ್ತು ಮಗ ವೆಂಕಟೇಶ್​​​(17) ಮೃತರು. ಕುರಿ ಮೇಯಿಸಲು ಹೋಗಿದ್ದಾಗ ಸಿಡಿಲು ಬಡಿದು ಇಬ್ಬರೂ ಸಾವನ್ನಪ್ಪಿದ್ದಾರೆ. ಮೊಳಕಾಲ್ಮೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಅಪಘಾತದಲ್ಲಿ ಮೊಮ್ಮಗಳೊಂದಿಗೆ ದಂಪತಿ ಸಾವು:
ದಾವಣಗೆರೆ ನಗರದ ಹೊರವಲಯದಲ್ಲಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಕುಂದುವಾಡ ಕ್ರಾಸ್ ಬಳಿ ಬುಧವಾರ ನಡೆದ ರಸ್ತೆ ಅಪಘಾತದಲ್ಲಿ ಮೊಮ್ಮಗಳ ಜೊತೆಗೆ ದಂಪತಿ ಮೃತಪಟ್ಟಿದ್ದಾರೆ. ಶಿವಮೊಗ್ಗದ ಟಿಪ್ಪುನಗರದ ಮೊಹಮ್ಮದ್ ಜಬೀವುಲ್ಲಾ (45), ಅವರ ಪತ್ನಿ ಹಮೀದಾ (43) ಹಾಗೂ ಅವರ ಪುತ್ರಿಯ ಮಗಳಾದ ಗೌಸಿಯಾಬಾನು (4) ಮೃತರು. ಮೂವರೂ ಒಂದೇ ಬೈಕಿನಲ್ಲಿ ಶಿವಮೊಗ್ಗದಿಂದ ದಾವಣಗೆರೆಗೆ ಬರುತ್ತಿದ್ದರು. ದಾವಣಗೆರೆಯ ಚಿಕ್ಕನಹಳ್ಳಿಯ ಹೊಸ ಬಡಾವಣೆಯಲ್ಲಿರುವ ಮಗಳ ಮನೆಗೆ ಮೊಮ್ಮಗಳನ್ನು ಬಿಡಲು ಬರುತ್ತಿದ್ದರು. ಈ ವೇಳೆ ಬೈಕ್ ಆಯ ತಪ್ಪಿ ಬಿದ್ದು, ಲಾರಿಯ ಚಕ್ರಕ್ಕೆ ಸಿಲುಕಿದೆ. ಹಮೀದಾ ಹಾಗೂ ಗೌಸಿಯಾಬಾನು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೊಹಮ್ಮದ್‌ ಜಬೀವುಲ್ಲಾ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ದಾವಣಗೆರೆ ದಕ್ಷಿಣ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಜಾತ್ರೆಯ ಊಟ ಮುಗಿಸಿ ಊರಿಗೆ ಹೊರಟಿದ್ದ ಇಬ್ಬರು ಯುವಕರ ಸಾವು
ವಿಜಯನಗರ: ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಗಾದಿಗನೂರು ಗ್ರಾಮದ ಸಮೀಪ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸರ್ಕಾರಿ ಬಸ್ ಡಿಕ್ಕಿ ಹೊಡೆದು ​ಬೈಕ್​​ನಲ್ಲಿ ತೆರಳುತ್ತಿದ್ದ ಇಬ್ಬರು ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಕಿರಣ್(23) ಮತ್ತು ವೆಂಕಟೇಶ್​​(25) ಸಾವಿಗೀಡಾಗಿದ್ದಾರೆ. ಜಾತ್ರೆಯ ಊಟ ಮುಗಿಸಿದ ಬಳಿಕ ಇಬ್ಬರೂ ಸ್ನೇಹಿತರು ಊರಿಗೆ ವಾಪಸಾಗುತ್ತಿದ್ದರು. ಮೃತರು ಹೊಸಪೇಟೆ ತಾಲೂಕಿನ ಕಾಕುಬಾಳು ನಿವಾಸಿಗಳು. ಹೊಸಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮಳೆಯಿಂದ ಆಟೋ ಮೇಲೆ ಮರ ಬಿದ್ದು ವ್ಯಕ್ತಿ ಸಾವು:
ಹುಬ್ಬಳ್ಳಿ ನಗರದ ಪಿಂಟೋ ರಸ್ತೆಯಲ್ಲಿ ಬುಧವಾರ ಸಂಜೆ ಮಳೆಯಿಂದ ಆಟೋ ಮೇಲೆ ಮರ ಬಿದ್ದು ವ್ಯಕ್ತಿಯೊಬ್ಬರು ಕೊನೆಯುಸಿರೆಳೆದಿದ್ದಾರೆ. ಆಟೋದಲ್ಲಿದ್ದ ರಾಬಿನ್ ಮಾರ್ಶ್ ಗಂಭೀರ ಗಾಯಗೊಂಡಿದ್ದರು. ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ರಾಬಿನ್ ಮಾರ್ಶ್ ಅಸುನೀಗಿದ್ದಾರೆ. ಮೃತ ರಾಬಿನ್​, ಹುಬ್ಬಳ್ಳಿಯ ಸೋನಿಯಾ ಗಾಂಧಿ ನಗರ ನಿವಾಸಿ. ಕಿಮ್ಸ್ ಆಸ್ಪತ್ರೆಗೆ ತಹಶೀಲ್ದಾರ್​​​​​ ಶಶಿಧರ್ ಮಾಡ್ಯಳ ಭೇಟಿ ನೀಡಿದ್ದರು.