ಮೈಸೂರು: ನಾನು ಮೈಸೂರಿನ ಮಗಳೆಂಬ ಭಾವನೆಯಲ್ಲಿ ಹೋಗ್ತಿದ್ದೇನೆ. ಈ ಜಿಲ್ಲೆ ನನಗೆ ತಾಯಿಯ ಪ್ರೀತಿ ಕೊಟ್ಟಿದೆ ಎಂದು ನಿರ್ಗಮಿತ ಡಿಸಿ ರೋಹಿಣಿ ಸಿಂಧೂರಿ ಹೇಳಿದರು. ಜೊತೆಗೆ ಶಿಲ್ಪಾನಾಗ್ ನೀಡಿರುವ ಹೇಳಿಕೆ ಬಗ್ಗೆ ನನಗೆ ಅನುಕಂಪವಿದೆ. ಯಾವುದೇ ಅಧಿಕಾರಿಯನ್ನು ತೆಗಳುವುದು ತಪ್ಪು. ಕೆಲಸವನ್ನು ನಾನು ಮಾಡಿ ಮುಗಿಸಿದ್ದೇನೆ ಎಂಬುದು ತಪ್ಪು. ಇಂತಹ ವ್ಯವಸ್ಥೆ ಇದ್ದರೆ ಕೆಲಸ ನಡೆಸುವುದಕ್ಕೆ ಕಷ್ಟವಾಗುತ್ತದೆ ಎಂದು ರೋಹಿಣಿ ಸಿಂಧೂರಿ ಅಭಿಪ್ರಾಯಪಟ್ಟರು.
ಮೈಸೂರು ಹೊಸ ಜಿಲ್ಲಾಧಿಕಾರಿಗೆ ಶುಭಾಶಯ ತಿಳಿಸಿದ್ದೇನೆ. ಜೊತೆಗೆ ಕೊವಿಡ್ ಕೆಲಸಗಳ ಬಗ್ಗೆಯೂ ಮಾಹಿತಿ ನೀಡಿದ್ದೇನೆ ಎಂದು ಮಾತನಾಡಿದ ರೋಹಿಣಿ, ನನ್ನ ವರ್ಗಾವಣೆಯ ಬಗ್ಗೆ ನಾನು ನಿರೀಕ್ಷೆಯೇ ಮಾಡಿರಲಿಲ್ಲ. ಒಳ್ಳೆಯ ಕೆಲಸ ಮಾಡುವ ಸಮಯದಲ್ಲಿ ವರ್ಗಾವಣೆ ಆಗಿದೆ. ನಾನು ಮಗಳು ತವರುಮನೆ ಬಿಟ್ಟು ಹೋದಂತೆ ಹೋಗುತ್ತಿದ್ದೇನೆ. ಏನು ನಡೀತು, ಹೇಗೆ ನಡೀತೆಂದು ಎಲ್ಲರ ಮುಂದೆ ನಡೆದಿದೆ. ಈಗ ಅದರ ಬಗ್ಗೆ ನಾನು ಮಾತನಾಡುವುದಕ್ಕೆ ಹೋಗುವುದಿಲ್ಲ. ‘ಧನ್ಯವಾದ ಮೈಸೂರು’ ಎಂದು ಹೇಳಿ ತೆರಳಿದರು.
ನ್ಯಾಯಾಂಗ ತನಿಖೆಗೆ ಆಗ್ರಹಿಸಿದ ಎಂ.ಲಕ್ಷ್ಮಣ್
ಬಿಜೆಪಿ ಸಂಸದ ಪ್ರತಾಪ್ ಸಿಂಹ ಸಾಧನೆ ಏನು? ಫೇಸ್‌ಬುಕ್ ಲೈವ್ ಮಾಡುವುದು ಬಿಟ್ಟು ಸಾಧನೆ ಹೇಳಿ. ಕೊಡಗು ಜನತೆಗೆ ನೀವು ಏನು ಮಾಡಿದ್ದೀರಿ? ಮೆಡಿಕಲ್, ಭೂ ಮಾಫಿಯಾ ಕುರಿತು ತನಿಖೆಯಾಗಬೇಕು. ರೋಹಿಣಿ, ಶಿಲ್ಪಾನಾಗ್ ಮಾಡಿರುವ ಆಪಾದನೆಗಳ ಕುರಿತು ನ್ಯಾಯಾಂಗ ತನಿಖೆಯಾಗಲಿ ಎಂದು ಕೆಪಿಸಿಸಿ ವಕ್ತರಾ ಎಂ.ಲಕ್ಷ್ಮಣ ಆಗ್ರಹಿಸಿದರು.
ಇದನ್ನೂ ಓದಿ
ರೋಹಿಣಿ ಸಿಂಧೂರಿ ಬಯೋಪಿಕ್ ಬಗ್ಗೆ ಚರ್ಚೆ; ಅಕ್ಷತಾ ಪಾಂಡವಪುರ ಹೆಸರನ್ನು ಸೂಚಿಸಿದ ಹಿರಿಯ ಬರಹಗಾರ್ತಿ
(Rohini Sindhuri said that Mysore district gave me the love of a mother home)