ಜನರ ನಡುವೆ ನಿಮ್ಗೆ ಏನೂ ಮಾಡೋಕಾಗಲ್ಲ: ಇನ್​​ಸ್ಪೆಕ್ಟರ್​ಗೆ ರೌಡಿಶೀಟರ್, ಸಹಚರರ ಆವಾಜ್

| Updated By: ಸಾಧು ಶ್ರೀನಾಥ್​

Updated on: Nov 27, 2020 | 12:36 PM

ಪೊಲೀಸ್ ಇನ್​ಸ್ಪೆಕ್ಟರ್ ಜೊತೆ ರೌಡಿಶೀಟರ್​ಗಳು ಅನುಚಿತವಾಗಿ ವರ್ತಿಸಿರುವ ಘಟನೆ ನವನಗರದಲ್ಲಿ ಬೆಳಕಿಗೆ ಬಂದಿದೆ.ಇನ್​​ಸ್ಪೆಕ್ಟರ್​ ಪ್ರಭು ಸೂರಿನ ಜೊತೆ ರೌಡಿಶೀಟರ್ ಪ್ರವೀಣ್ ಪೂಜಾರಿ, ಮಲ್ಲಯ್ಯ ಮತ್ತು ವಿನೋದ್​ ಎಂಬುವವರು ಅನುಚಿತವಾಗಿ ವರ್ತಿಸಿದ್ದಾರೆ ಎಂದು ಹೇಳಲಾಗಿದೆ.

ಜನರ ನಡುವೆ ನಿಮ್ಗೆ ಏನೂ ಮಾಡೋಕಾಗಲ್ಲ: ಇನ್​​ಸ್ಪೆಕ್ಟರ್​ಗೆ ರೌಡಿಶೀಟರ್, ಸಹಚರರ ಆವಾಜ್
Follow us on

ಹುಬ್ಬಳ್ಳಿ: ಪೊಲೀಸ್ ಇನ್​ಸ್ಪೆಕ್ಟರ್ ಜೊತೆ ರೌಡಿಶೀಟರ್​ ಅನುಚಿತವಾಗಿ ವರ್ತಿಸಿರುವ ಘಟನೆ ನವನಗರದಲ್ಲಿ ಬೆಳಕಿಗೆ ಬಂದಿದೆ. ಇನ್​​ಸ್ಪೆಕ್ಟರ್​ ಪ್ರಭು ಸೂರಿನ ಜೊತೆ ರೌಡಿಶೀಟರ್ ಪ್ರವೀಣ್ ಪೂಜಾರಿ, ಮಲ್ಲಯ್ಯ ಮತ್ತು ವಿನೋದ್​ ಎಂಬುವವರು ಅನುಚಿತವಾಗಿ ವರ್ತಿಸಿದ್ದಾರೆ ಎಂದು ಹೇಳಲಾಗಿದೆ.

ಏನಿದು ಪ್ರಕರಣ?
ಅಂದ ಹಾಗೆ, ನವನಗರದಲ್ಲಿ ರೌಡಿಶೀಟರ್ ಪ್ರವೀಣ್ ಪೂಜಾರಿ ಮತ್ತು ಮಲ್ಲಯ್ಯನ ನಡುವೆ ಜಗಳ ಶುರುವಾದ ಹಿನ್ನೆಲೆಯಲ್ಲಿ ಇನ್​​ಸ್ಪೆಕ್ಟರ್​ ಪ್ರಭು ಸೂರಿನ ಗಲಾಟೆ ಬಿಡಿಸಲು ಹೋಗಿದ್ದರು. ಈ ವೇಳೆ ಪ್ರವೀಣ್ ಪೂಜಾರಿ ಮತ್ತು ಮಲ್ಲಯ್ಯ ಪ್ರಭು ಸೂರಿನ ಮೇಲೆ ಆವಾಜ್ ಹಾಕಿದ್ದಾರೆ. ಜೊತೆಗೆ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ತಿಳಿದುಬಂದಿದೆ.

ಇದಲ್ಲದೆ, ಪ್ರವೀಣ್ ಜೊತೆಗಿದ್ದ ವಿನೋದ್‌ ಪಾಟೀಲ್ ಎಂಬಾತ ಸಹ ಪೊಲೀಸರಿಗೆ ಆವಾಜ್​ ಹಾಕಿದ್ದಾನಂತೆ. ಠಾಣೆಗೆ ಬಂದು ನಿಮ್ಮ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಇನ್​​ಸ್ಪೆಕ್ಟರ್​ ಹೇಳಿದರೆ ನಾವು ಬರೋಕಾಗಲ್ಲ ಎಂದು ಹೇಳಿ ವಿನೋದ್ ಅಲ್ಲಿಂದ ತೆರಳಿದ್ದಾನೆ. ಜೊತೆಗೆ, ವಕೀಲ  ವೃತ್ತಿಯಲ್ಲಿರೋ ವಿನೋದ್ ಪಾಟೀಲ್ ಜನರ ನಡುವೆ ನಿಮ್ಗೆ ಏನೂ ಮಾಡೋಕಾಗಲ್ಲ ಎಂದು ಸಹ ಹೇಳಿದ್ದಾನಂತೆ.

ಸದ್ಯ, ಕರ್ತವ್ಯನಿರತ ಪೊಲೀಸರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಆರೋಪದಡಿ ನವನಗರ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಮೂವರ ಮೇಲೆ ಪ್ರಕರಣ ದಾಖಲಾಗಿದೆ. ಠಾಣಾಧಿಕಾರಿ ಪ್ರಭು ಸೂರಿನ ಖುದ್ದು ದೂರು ನೀಡಿದ್ದಾರೆ.

Published On - 11:28 am, Fri, 27 November 20