AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೈಲು ಪ್ರಯಾಣಿಕರಿಗೆ RPF ಮಾರ್ಗಸೂಚಿ.. ರೂಲ್ಸ್ ಬ್ರೇಕ್ ಮಾಡುದ್ರೆ ಜೈಲು ಗ್ಯಾರಂಟಿ

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗ್ತಾನೇ ಇದೆ. ಅದೆಷ್ಟೇ ಮುಂಜಾಗ್ರತಾ ಕ್ರಮ ಕೈಗೊಕೊಂಡ್ರು ಜನ್ರು ಮಾತ್ರ ರೂಲ್ಸ್ ಫಾಲೋ ಮಾಡ್ತಿಲ್ಲ. ಮಾಸ್ಕ್ ಹಾಕ್ತಿಲ್ಲ ಸೋಶಿಯಲ್ ಡಿಸ್ಟೇನ್ಸ್ ಕಾಪಾಡುತ್ತಿಲ್ಲ. ಈ ಕಾರಣಕ್ಕೆ RPF ಪೋಲಿಸ್ರು ರೂಲ್ಸ್ ಬ್ರೇಕ್ ಮಾಡೋರ ಮೇಲೆ ಕೇಸ್ ದಾಖಲಿಸಿ ಜೈಲಿಗಟ್ಟಲು ಮುಂದಾಗಿದ್ದಾರೆ. ಶ್ರಾವಣ ಮುಗಿತಾ ಇದ್ದಂತೆ ಮುಂದೆ ದೊಡ್ಡ ದೊಡ್ಡ ಹಬ್ಬಗಳು ಬಂದು ಬಿಡ್ತವೆ. ಈ ಹೊತ್ತಲ್ಲಿ ದೇಶಾದ್ಯಂತ ಜನ ಸಂಚಾರ ಹೆಚ್ಚಾದಂತೆ, ರಾಜ್ಯದಲ್ಲೂ ಊರಿಂದ ಊರಿಗೆ ಹೋಗುವವರ ಸಂಖ್ಯೆ ಹೆಚ್ಚಾಗೆ […]

ರೈಲು ಪ್ರಯಾಣಿಕರಿಗೆ RPF ಮಾರ್ಗಸೂಚಿ.. ರೂಲ್ಸ್ ಬ್ರೇಕ್ ಮಾಡುದ್ರೆ ಜೈಲು ಗ್ಯಾರಂಟಿ
ಆಯೇಷಾ ಬಾನು
|

Updated on: Oct 15, 2020 | 6:46 AM

Share

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗ್ತಾನೇ ಇದೆ. ಅದೆಷ್ಟೇ ಮುಂಜಾಗ್ರತಾ ಕ್ರಮ ಕೈಗೊಕೊಂಡ್ರು ಜನ್ರು ಮಾತ್ರ ರೂಲ್ಸ್ ಫಾಲೋ ಮಾಡ್ತಿಲ್ಲ. ಮಾಸ್ಕ್ ಹಾಕ್ತಿಲ್ಲ ಸೋಶಿಯಲ್ ಡಿಸ್ಟೇನ್ಸ್ ಕಾಪಾಡುತ್ತಿಲ್ಲ. ಈ ಕಾರಣಕ್ಕೆ RPF ಪೋಲಿಸ್ರು ರೂಲ್ಸ್ ಬ್ರೇಕ್ ಮಾಡೋರ ಮೇಲೆ ಕೇಸ್ ದಾಖಲಿಸಿ ಜೈಲಿಗಟ್ಟಲು ಮುಂದಾಗಿದ್ದಾರೆ.

ಶ್ರಾವಣ ಮುಗಿತಾ ಇದ್ದಂತೆ ಮುಂದೆ ದೊಡ್ಡ ದೊಡ್ಡ ಹಬ್ಬಗಳು ಬಂದು ಬಿಡ್ತವೆ. ಈ ಹೊತ್ತಲ್ಲಿ ದೇಶಾದ್ಯಂತ ಜನ ಸಂಚಾರ ಹೆಚ್ಚಾದಂತೆ, ರಾಜ್ಯದಲ್ಲೂ ಊರಿಂದ ಊರಿಗೆ ಹೋಗುವವರ ಸಂಖ್ಯೆ ಹೆಚ್ಚಾಗೆ ಇರುತ್ತದೆ. ಆದರೆ ಈ ಬಾರಿ ಕೊರೊನಾ ಕಂಟಕ ಎದುರಾಗಿದ್ದು, ರೈಲು ಪ್ರಯಾಣಿಕರಿಗೆ ಹೊಸ ರೂಲ್ಸ್ ರಿಲೀಸ್ ಆಗಿದೆ.

ಮಾಸ್ಕ್ ಧರಿಸದಿದ್ರೆ ಅಂತರ ಕಾಪಾಡದಿದ್ರೆ ದಂಡ! ದೇಶದಲ್ಲಿ ಹಬ್ಬ ಹರಿದಿನಗಳು ಹತ್ತಿರವಾಗ್ತಿರೋ ಸಮಯದಲ್ಲಿ ಆರ್​ಪಿಎಫ್ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ನಿಂದ ಪ್ರಯಾಣಿಕರಿಗೆ ಗೈಡ್ ಲೈನ್ಸ್ ರಿಲೀಸ್ ಆಗಿದೆ. ಹಬ್ಬದ ಸಮಯದಲ್ಲಿ ರಾಜ್ಯದಿಂದ ರಾಜ್ಯಕ್ಕೆ ಬೇರೆ ಬೇರೆ ಊರುಗಳಿಗೆ ತೆರಳುವ ಪ್ರಯಾಣಿಕರು RPF ರೂಲ್ಸ್ ಫಾಲೋ ಮಾಡಲೇಬೇಕು. ಅಕಸ್ಮಾತ್ ಮಾಡಿಲ್ಲ ಅಂದರೆ ಜೈಲು ಗ್ಯಾರಂಟಿ. ಅಲ್ಲದೆ ಮಾರ್ಗಸೂಚಿ ಪಾಲನೆ ಮಾಡದಿದ್ರೆ ದಂಡ ವಿಧಿಸುವ ಎಚ್ಚರಿಕೆ ನೀಡಲಾಗಿದೆ. ಇನ್ನು ರೈಲ್ವೆ ಪ್ರಯಾಣಿಕರಿಗೆ ವಿಧಿಸಿರುವ ಹೊಸ ರೂಲ್ಸ್​ಗಳನ್ನ ಡೀಟೇಲ್ ಆಗಿ ನೋಡೋದಾದ್ರೆ.

ರೈಲು ಪ್ರಯಾಣಕ್ಕೆ ಹತ್ತಾರು ರೂಲ್ಸ್! ಕೊರೊನಾ ಕಂಟಕದ ಹಿನ್ನೆಲೆಯಲ್ಲಿ ಮಾಸ್ಕ್ ಇಲ್ಲದಿದ್ರೆ ಸದ್ಯಕ್ಕೆ ರೈಲು ಪ್ರಯಾಣಿಕರಿಗೆ ಅವಕಾಶವಿಲ್ಲ. ಹಾಗೇ ರೈಲು ನಿಲ್ದಾಣ ಸೇರೆದಂತೆ ರೈಲಿನಲ್ಲಿ ಪ್ರಯಾಣ ಮಾಡುವಾಗಲೂ ಸಾಮಾಜಿಕ ಅಂತರ ಕಡ್ಡಾಯವಾಗಿರುತ್ತದೆ. ‘ಕೊರೊನಾ’ ಸೋಂಕಿತರು ಇನ್ಮುಂದೆ ರೈಲು ನಿಲ್ದಾಣಕ್ಕೆ ಬರುವಂತಿಲ್ಲ ಎಂದು ಖಡಕ್ ಸೂಚನೆ ಹೊರಡಿಸಲಾಗಿದ್ದು, ಸಂಪೂರ್ಣ ಗುಣಮುಖರಾಗದೆ ರೈಲು ನಿಲ್ದಾಣಕ್ಕೆ ಬಂದ್ರೆ ಜೈಲು ಗ್ಯಾರಂಟಿ ಎಂಬ ನಿಯಮ ಜಾರಿಮಾಡಲಾಗಿದೆ. ಈ ಎಲ್ಲಾ ನಿಯಮಗಳ ಜತೆ ಪ್ರಯಾಣಿಕರು ನಿಲ್ದಾಣದಲ್ಲಿ ಸ್ವಚ್ಛತೆ ಕಾಪಾಡಬೇಕಾಗಿದ್ದು ನಿಯಮ ಮೀರಿದ್ರೆ ಕ್ರಮ ಪಕ್ಕಾ.

ಒಟ್ನಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ಖಡಕ್ ಕ್ರಮ ಕೈಗೊಂಡಿದೆ. ರೈಲ್ವೆ ಪೊಲೀಸರು ಪ್ರತಿಯೊಬ್ಬ ಪ್ರಯಾಣಿಕನ ಮೇಲೂ ಗಮನ ಇಡೋದಕ್ಕೆ ಖಡಕ್ ಕ್ರಮ ಕೈಗೊಂಡಿದ್ದಾರೆ. ಆದರೆ ಇದರಲ್ಲಿ ಅದೆಷ್ಟರಮಟ್ಟಿಗೆ ಸಕ್ಸಸ್ ಆಗ್ತಾರೆ ಅನ್ನೋದನ್ನ ಕಾದು ನೋಡ್ಬೇಕಿದೆ.

‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್