RRB (ರೈಲ್ವೆ ನೇಮಕಾತಿ ಮಂಡಳಿ) NTPC 2021ರ ಮೊದಲ ಸ್ಟೇಜ್, 4ನೇ ಹಂತದ ಪರೀಕ್ಷೆಯ ದಿನಾಂಕಗಳು, ನಡೆಯುವ ನಗರಗಳು, ಶಿಫ್ಟ್ ಸಮಯ, ಪ್ರವೇಶ ಪತ್ರ ಮತ್ತು ಮಾಕ್ ಟೆಸ್ಟ್ ಬಗ್ಗೆ ಮಾಹಿತಿ ಪಡೆಯಲು ರೈಲ್ವೆ ನೇಮಕಾತಿ ಮಂಡಳಿ ಲಿಂಕ್ ಸಕ್ರಿಯಗೊಳಿಸಿದೆ. ಆರ್ಆರ್ಬಿ ಎನ್ಟಿಪಿಸಿ 2021ರ ಮೊದಲ ಸ್ಟೇಜ್ನ ಸಿಬಿಟಿ ನಾಲ್ಕನೇ ಹಂತದ ಪರೀಕ್ಷೆ ಬರೆಯಲಿಚ್ಛಿಸುವ ಪರೀಕ್ಷಾರ್ಥಿಗಳು ಆರ್ಆರ್ಬಿಯ ಈ ಲಿಂಕ್ ಮೂಲಕ ವೆಬ್ಸೈಟ್ಗೆ ಭೇಟಿ ಕೊಟ್ಟು, ವಿವರಗಳನ್ನು ಪಡೆಯಬಹುದು.
ಇನ್ನು RRB NTPC 2020ರ ಅಡ್ಮಿಟ್ ಕಾರ್ಡ್ಗಳನ್ನು ರೈಲ್ವೆ ನೇಮಕಾತಿ ಮಂಡಳಿ ಈಗಾಗಲೇ ಬಿಡುಗಡೆ ಮಾಡಿದ್ದು, ಈ ಪರೀಕ್ಷೆಗಳು ಫೆಬ್ರವರಿ 15ರಿಂದ ಮಾರ್ಚ್ 3ರವರೆಗೆ ನಡೆಯಲಿದೆ. ಒಟ್ಟು 15 ಲಕ್ಷ ಜನರು ಪರೀಕ್ಷೆ ಬರೆಯಲಿದ್ದಾರೆ. ಹಾಗೇ 2021ರ NTPC 2021ರ ಮೊದಲ ಸ್ಟೇಜ್, 4ನೇ ಹಂತದ ಪರೀಕ್ಷೆ ಸಂಬಂಧ ಮಾಹಿತಿ ಪಡೆಯಲು ಇದೀಗ ಲಿಂಕ್ ಸಕ್ರಿಯಗೊಳಿಸಲಾಗಿದ್ದು, ಪರೀಕ್ಷಾರ್ಥಿಗಳು ಈ ಲಿಂಕ್ ಮೂಲಕ ಹೋಗಿ ಆರ್ಆರ್ಬಿ ವೆಬ್ಸೈಟ್ಗೆ ಲಾಗಿನ್ ಆಗಬೇಕು. ಯಾವುದೇ ಕ್ಷಣದಲ್ಲಾದರೂ ದಿನಾಂಕ ಪ್ರಕಟವಾಗಬಹುದು. ಹಾಗೇ ಪ್ರವೇಶ ಪತ್ರ ವಿತರಣೆಯೂ ಶುರುವಾಗಬಹುದಾಗಿದೆ.
ಇನ್ನು ಪ್ರವೇಶ ಪತ್ರ ಸಿಗುತ್ತಿದ್ದಂತೆ ಅದನ್ನು ಪ್ರಿಂಟ್ ತೆಗೆದು ಇಟ್ಟುಕೊಳ್ಳಿ ಎಂದು ಪರೀಕ್ಷಾರ್ಥಿಗಳಿಗೆ ಆರ್ಆರ್ಬಿ ಸಲಹೆ ನೀಡಿದೆ. ಹಾಗೇ ಅದರ ಮೇಲೊಂದು ಪಾಸ್ಪೋರ್ಟ್ ಸೈಜ್ನ ಫೋಟೋ ಅಂಟಿಸಬೇಕು. ಇನ್ನು ಪರೀಕ್ಷೆಗೆ ಹೋಗುವಾಗ ಪ್ರವೇಶ ಪತ್ರದೊಂದಿಗೆ ಒರಿಜಿನಲ್ ಗುರುತುಪತ್ರ, ಮತ್ತೊಂದು ಫೋಟೋ ಕಾಪಿಯನ್ನೂ ಕೊಂಡೊಯ್ಯಬೇಕು.
ಹಾಗೇ, ಅಭ್ಯರ್ಥಿಗಳು ಮಾಸ್ಕ್ ಧರಿಸಿಯೇ ಪರೀಕ್ಷೆ ಬರೆಯವುದು ಕಡ್ಡಾಯವಾಗಿದೆ. ಇನ್ನು ಇದರೊಂದಿಗೆ ರೈಲ್ವೆ ಮಂಡಳಿ, ಆನ್ಲೈನ್ ಮೂಲಕವೂ ಪರೀಕ್ಷೆ ನಡೆಸಲಿದೆ. ಇನ್ನು ಪರೀಕ್ಷಾರ್ಥಿಗಳು ರೈಲ್ವೆ ನೇಮಕಾತಿ ಮಂಡಳಿಯ ಅಧಿಕೃತ ವೆಬ್ಸೈಟ್ ಭೇಟಿ ಕೊಡಬಹುದು. ಅಲ್ಲಿ ಎಲ್ಲ ರೀತಿಯ ಮಾಹಿತಿಗಳೂ ಲಭ್ಯವಾಗುತ್ತವೆ.
UPSC CSE ನಾಗರಿಕ ಸೇವಾ ಪರೀಕ್ಷೆ; ಇನ್ನೊಂದು ಅವಕಾಶ ನೀಡಲು ಕೇಂದ್ರ ಸಮ್ಮತಿ