ಬಿಬಿಎಂಪಿ ನಿರ್ಲಕ್ಷ್ಯದಿಂದ ಪಾಳುಕೊಂಪೆಯಾದ ಕಮ್ಯುನಿಟಿ ಹಾಲ್: 3.5 ಕೋಟಿ ರೂ. ವೆಚ್ಚದ ಕಟ್ಟಡಕ್ಕಿಲ್ಲ ಉದ್ಘಾಟನಾ ಭಾಗ್ಯ

| Updated By: ಗಂಗಾಧರ​ ಬ. ಸಾಬೋಜಿ

Updated on: Aug 15, 2024 | 8:09 PM

ಜಯನಗರದಲ್ಲಿ ಕೋಟಿ ಕೋಟಿ ರೂ. ವೆಚ್ಚದಲ್ಲಿ ಬಿಬಿಎಂಪಿಯ ಸಮುದಾಯ ಭವನ ನಿರ್ಮಸಲಾಗಿದೆ. 6.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಈ ಕಟ್ಟಡ 2020ರಲ್ಲೇ ಉದ್ಘಾಟನೆಯಾಗಬೇಕಿತ್ತು, ಆದರೆ ಮಾಜಿ ಶಾಸಕಿ ಸೌಮ್ಯರೆಡ್ಡಿ ಹಾಗೂ ಹಾಲಿ ಶಾಸಕ ಸಿ.ಕೆ.ರಾಮಮೂರ್ತಿ ಜಿದ್ದಾಜಿದ್ದಿನಿಂದ ಕಟ್ಟಡಕ್ಕೆ ಉದ್ಘಾಟನೆ ಭಾಗ್ಯ ಸಿಗದೇ ಭೂತಬಂಗಲೆಯಂತಾಗಿದೆ.

ಬಿಬಿಎಂಪಿ ನಿರ್ಲಕ್ಷ್ಯದಿಂದ ಪಾಳುಕೊಂಪೆಯಾದ ಕಮ್ಯುನಿಟಿ ಹಾಲ್: 3.5 ಕೋಟಿ ರೂ. ವೆಚ್ಚದ ಕಟ್ಟಡಕ್ಕಿಲ್ಲ ಉದ್ಘಾಟನಾ ಭಾಗ್ಯ
ಬಿಬಿಎಂಪಿ ನಿರ್ಲಕ್ಷ್ಯದಿಂದ ಪಾಳುಕೊಂಪೆಯಾದ ಕಮ್ಯುನಿಟಿ ಹಾಲ್: 3.5 ಕೋಟಿ ರೂ. ವೆಚ್ಚದ ಕಟ್ಟಡಕ್ಕಿಲ್ಲ ಉದ್ಘಾಟನಾ ಭಾಗ್ಯ
Follow us on

ಬೆಂಗಳೂರು, ಆಗಸ್ಟ್​ 15: ಅದು ಬಡವರು, ಮಧ್ಯಮವರ್ಗದ ಜನರ ಕಾರ್ಯಕ್ರಮಗಳಿಗೆ ಅಂತಾ ಕೋಟಿ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಕಟ್ಟಡ. ಆದರೆ ಆ ಕಟ್ಟಡದಲ್ಲಿ ಶುಭಸಮಾರಂಭಗಳ ಸಂತಸದ ಸದ್ದು ಕೇಳುವ ಬದಲು ರಾತ್ರಿಯಾದರೆ ಸಾಕು ಕುಡುಕರು, ಪುಡಾರಿಗಳ ಶಿಳ್ಳೆ, ಕೇಕೆ ಕೇಳಿಬರ್ತಿದೆ. ಕೋಟಿ ಕೋಟಿ ರೂ. ವೆಚ್ಚ ಮಾಡಿ ಕಟ್ಟಿಸಿದ್ದ ಬಿಬಿಎಂಪಿಯ (BBMP) ಸಮುದಾಯಭವನ ಉದ್ಘಾಟನೆ ಭಾಗ್ಯ ಸಿಗದೇ ಗಬ್ಬೆದ್ದುನಾರುತ್ತಿದೆ.

ಭೂತಬಂಗಲೆಯಂತಾದ ಬಿಬಿಎಂಪಿಯ ಸಮುದಾಯ ಭವನ 

ಜಯನಗರದಲ್ಲಿ ಕೋಟಿ ಕೋಟಿ ರೂ. ವೆಚ್ಚದಲ್ಲಿ ಬಿಬಿಎಂಪಿಯ ಸಮುದಾಯ ಭವನ ನಿರ್ಮಸಲಾಗಿದೆ. 3.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಈ ಕಟ್ಟಡ 2020ರಲ್ಲೇ ಉದ್ಘಾಟನೆಯಾಗಬೇಕಿತ್ತು, ಆದರೆ ಮಾಜಿ ಶಾಸಕಿ ಸೌಮ್ಯರೆಡ್ಡಿ ಹಾಗೂ ಹಾಲಿ ಶಾಸಕ ಸಿ.ಕೆ.ರಾಮಮೂರ್ತಿ ಜಿದ್ದಾಜಿದ್ದಿನಿಂದ ಕಟ್ಟಡಕ್ಕೆ ಉದ್ಘಾಟನೆ ಭಾಗ್ಯ ಸಿಗದೇ ಭೂತಬಂಗಲೆಯಂತಾಗಿದೆ.

ಇದನ್ನೂ ಓದಿ: ಕುಮಾರಸ್ವಾಮಿಗೆ ದೇಶಪ್ರೇಮ, ರಾಷ್ಟ್ರಭಕ್ತಿಯ ಕೊರತೆ ಎಂದು ಮತ್ತೊಮ್ಮೆ ಕುಟುಕಿದ ಶಿವಕುಮಾರ್

ಜಯನಗರ ಸುತ್ತಮುತ್ತಲಿನ ಜನರಿಗೆ ಕಾರ್ಯಕ್ರಮಗಳು, ಸಮಾರಂಭ ನಡೆಸೋಕೆ ಸಹಾಯವಾಗಲಿ ಅಂತಾ ಸೌಮ್ಯರೆಡ್ಡಿ ಶಾಸಕಿಯಾಗಿದ್ದ ವೇಳೆ ಈ ಕಟ್ಟಡದ ಕಾಮಗಾರಿ ನಡೆಸಲಾಗಿತ್ತು. ಬಿಬಿಎಂಪಿಯ ಅನುದಾನದಿಂದ 3.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದ್ದ ಈ ಕಟ್ಟಡ ಬಳಿಕ ಬಂದ ಶಾಸಕ ರಾಮಮೂರ್ತಿ ಅವಧಿಯಲ್ಲಿ ಕಾಮಗಾರಿ ಮುಗಿದ್ರೂ ರಾಜಕೀಯ ಒಳಮುನಿಸಿನಿಂದ ಕಟ್ಟಡ ಉದ್ಘಾಟನೆಯಾಗಿಲ್ಲ ಅಂತಾ ಸ್ಥಳೀಯರು ಆರೋಪಿಸ್ತಿದ್ದಾರೆ. ಸದ್ಯ ಕೋಟ್ಯಾಂತರ ರೂ ವೆಚ್ಚದ ಈ ಸಮುದಾಯ ಭವನ ಕಟ್ಟಡ, ಕುಡುಕರು, ಪುಂಡರ ತಾಣವಾಗಿದ್ದು, ಜನರ ತೆರಿಗೆ ಹಣ ವ್ಯರ್ಥ ಮಾಡಿರೋ ಪಾಲಿಕೆ ವಿರುದ್ಧ ಜನರು ಕಿಡಿಕಾರುತ್ತಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಪ್ರತಿ ದಿನ ರಸ್ತೆಗಿಳಿಯುತ್ತಿವೆ 2000 ಹೊಸ ವಾಹನ! ವಾಯು ಮಾಲಿನ್ಯದಲ್ಲಿ ದೆಹಲಿಯನ್ನೂ ಮೀರಿಸುವ ಆತಂಕ

ಸದ್ಯ ಹೊಸ ಕಟ್ಟಡದ ಕಿಟಕಿ ಗಾಜುಗಳು ಕೂಡ ಪುಡಿಪುಡಿಯಾಗಿದ್ದು, ಕೋಟಿ ಕೋಟಿ ರೂ. ಹಣ ವ್ಯಯಿಸಿ ನಿರ್ಮಿಸಿದ್ದ ಕಟ್ಟಡ ಉದ್ಘಾಟನೆಗೂ ಮೊದಲೇ ಭೂತಬಂಗಲೆಯಂತಾಗಿದೆ. ಸದ್ಯ ಬಿಬಿಎಂಪಿ ಹಾಗೂ ಸ್ಥಳೀಯ ಶಾಸಕರು ಈಗಲಾದ್ರೂ ಎಚ್ಚೆತ್ತುಕೊಂಡು ನಿರುಪಯುಕ್ತವಾಗಿ ಬಿದ್ದಿರೋ ಮೂರು ಅಂತಸ್ತಿನ ಈ ನೂತನ ಕಟ್ಟಡಕ್ಕೆ ಉದ್ಘಾಟನೆ ಭಾಗ್ಯ ನೀಡ್ತಾರಾ ಅನ್ನೋ ನಿರೀಕ್ಷೆಯಲ್ಲಿ ಸ್ಥಳೀಯರು ಕಾದುಕುಳಿತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:51 pm, Thu, 15 August 24