ಕುಮಾರಸ್ವಾಮಿಗೆ ದೇಶಪ್ರೇಮ, ರಾಷ್ಟ್ರಭಕ್ತಿಯ ಕೊರತೆ ಎಂದು ಮತ್ತೊಮ್ಮೆ ಕುಟುಕಿದ ಶಿವಕುಮಾರ್

ಕುಮಾರಸ್ವಾಮಿಗೆ ದೇಶಪ್ರೇಮ, ರಾಷ್ಟ್ರಭಕ್ತಿಯ ಕೊರತೆ ಎಂದು ಮತ್ತೊಮ್ಮೆ ಕುಟುಕಿದ ಶಿವಕುಮಾರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 15, 2024 | 7:31 PM

ಗ್ಯಾರಂಟಿ ಯೋಜನೆಗಳಲ್ಲಿ ಯಾವುದನ್ನೂ ನಿಲ್ಲಿಸಲ್ಲ ಎಂದು ಪುನರುಚ್ಛರಿಸಿದ ಶಿವಕುಮಾರ್ ವಿಧಾನಸಭಾ ಉಪ ಚುನಾವಣೆಯಲ್ಲಿ ಚನ್ನಪಟ್ಟಣದಿಂದ ಕಾಂಗ್ರೆಸ್ ಅಭ್ಯರ್ಥಿ ಯಾರು ಅಂತ ಮಾಧ್ಯಮ ಪ್ರತಿನಿಧಿಯೊಬ್ಬರು ಕೇಳಿದಾಗ ನಾನೇ ಅಭ್ಯರ್ಥಿ ಅಂತ ಹೇಳುತ್ತಾರೆ. ಅವರು ಅದನ್ನು ತಮಾಷೆಗೆ ಹೇಳಿದರೋ ಅಥವಾ ಸಿರಿಯಸ್ಸಾಗಿ ಹೇಳಿದರೋ ಗೊತ್ತಾಗಲಿಲ್ಲ.

ನೆಲಮಂಗಲ: ನಾವು ಯಾವಾಗಲೂ ಹೇಳುವ ಹಾಗೆ ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಪರಸ್ಪರ ಟೀಕಿಸುವ, ಜರಿಯುವ ಯಾವ ಸಣ್ಣ ಅವಕಾಶವನ್ನು ಹೋಗಗೊಡುವುದಿಲ್ಲ! ಚನ್ನಪಟ್ಟಣದಲ್ಲಿ ಕಳೆದ ಐದಾರು ವರ್ಷಗಳಿಂದ ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ ಮತ್ತು ರಾಜ್ಯೋತ್ಸವ ಮೊದಲಾದ ಸಂದರ್ಭಗಳಲ್ಲಿ ಅಲ್ಲಿನ ಶಾಸಕರಾಗಿದ್ದ ಕುಮಾರಸ್ವಾಮಿ ಹೋಗಿಲ್ಲ ಅಂತ ಅಧಿಕಾರಿಗಳು ಹೇಳಿದ್ದನ್ನು ಕೇಳಿಸಿಕೊಂಡೆ ಅಂತ ಇಂದು ಬೆಳಗ್ಗೆ ಚನ್ನಪಟ್ಟಣದಲ್ಲಿ ಧ್ವಜಾರೋಹಣ ಮಾಡಿದ ಬಳಿಕ ಶಿವಕುಮಾರ್ ಮಾಧ್ಯಮದವರಿಗೆ ಹೇಳಿದ್ದರು. ಸಾಯಂಕಾಲ ನೆಲಮಂಗಲದಲ್ಲಿ ಪತ್ರಕರ್ತರೊಬ್ಬರು ಅದೇ ವಿಷಯದ ಬಗ್ಗೆ ಕೇಳಿದಾಗ ಶಿವಕುಮಾರ್ ಸ್ವಲ್ಪವೂ ತಡಮಾಡದೆ ಬೆಳಗ್ಗೆ ಚನ್ನಪಟ್ಟಣದಲ್ಲಿ ಹೇಳಿದ್ದನ್ನೇ ಪುನರಾವರ್ತಿಸಿದರು! ತಾನು ರಾಮನಗರದಲ್ಲಿ 5 ವರ್ಷಗಳ ಕಾಲ ಧ್ವಜಾರೋಹಣ ಮಾಡಿದೆ, ಆದರೆ ಚನ್ನಪಟ್ಟಣದ ಶಾಸಕರಾಗಿದ್ದವರಿಗೆ ದೇಶಭಕ್ತಿ, ರಾಷ್ಟ್ರಪ್ರೇಮ ಇಲ್ಲದಿದ್ದರೆ ಯಾರೇನು ಮಾಡೋದಿಕ್ಕಾಗುತ್ತೆ ಎಂದು ಶಿವಕುಮಾರ್ ಕುಟುಕುತ್ತಾರೆ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಚನ್ನಪಟ್ಟಣದಲ್ಲಿ ಡಿಕೆ ಶಿವಕುಮಾರ್ ಧ್ವಜಾರೋಹಣ: ರಂಗೇರಿದ ರಾಜಕಾರಣ!