ರಾಜ್ಯಪಾಲರು ಮುಖ್ಯಮಂತ್ರಿಗೆ ನೋಟೀಸ್ ನೀಡಿದಾಕ್ಷಣ ಆಕಾಶವೇನೂ ಕಳಚಿ ಬೀಳಲ್ಲ: ಜಿ ಪರಮೇಶ್ವರ್

ರಾಜ್ಯಪಾಲರು ಮುಖ್ಯಮಂತ್ರಿಗೆ ನೋಟೀಸ್ ನೀಡಿದಾಕ್ಷಣ ಆಕಾಶವೇನೂ ಕಳಚಿ ಬೀಳಲ್ಲ: ಜಿ ಪರಮೇಶ್ವರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 15, 2024 | 8:32 PM

ಒಂದು ವೇಳೆ ಮುಖ್ಯಮಂತ್ರಿ ಬದಲಾವಣೆ ಮಾಡುವ ಸಂದರ್ಭ ಎದುರಾದರೆ ನೀವೂ ಸಹ ಹುದ್ದೆಯ ಆಕಾಂಕ್ಷಿಗಳಲ್ಲಿ ಒಬ್ಬರೇ ಎಂದು ಕೇಳಿದ ಪ್ರಶ್ನೆಗೂ ಪರಮೇಶ್ವರ್ ರೇಗಿದರು. ಅಂಥ ಸಂದರ್ಭವೇ ಉದ್ಭವಿಸಲ್ಲ, ಒಂದು ವೇಳೆ ಅಂತ ಯಾಕೆ ಹೇಳುತ್ತೀರಿ? ಅಂಥ ಸ್ಥಿತಿ ಬಂದಾಗ ನೋಡೋಣ, ಈಗಂತೂ ಆದರ ಬಗ್ಗೆ ಯೋಚನೆ ಮಾಡುವ ಅವಶ್ಯಕತೆಯಿಲ್ಲ ಎಂದು ಪರಮೇಶ್ವರ್ ಹೇಳಿದರು.

ತುಮಕೂರು: ಗೃಹಸಚಿವ ಜಿ ಪರಮೇಶ್ವರ್ ಅವರು ಕಾನೂನು ಬಗ್ಗೆ ಮಾತಾಡುವಾಗ ಸ್ಪಷ್ಟವಾಗಿ ಮತ್ತು ಸಂದೇಹಗಳಿಗೆ ಆಸ್ಪದವಿಲ್ಲದಂತೆ ಮಾತಾಡುತ್ತಾರೆ. ಇಂದು ತುಮಕೂರುನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ ಅವರು ಕೊಂಚ ಕೋಪದಲ್ಲೂ ಇದ್ದರು. ಪತ್ರಕರ್ತರೊಬ್ಬರು ಸರ್ಕಾರ ಉಳಿಯುತ್ತಾ ಅಂತ ಕೇಳಿದ್ದಕ್ಕೆ ಅವರು ನಿಮಗ್ಯಾಕ್ರೀ ಅಂತ ಅನುಮಾನ, ನಿಮಗೆ ಸಂದೇಹವಿದ್ದರೆ ಮಾತ್ರ ಪ್ರಶ್ನೆ ಕೇಳಿ ಇಲ್ಲದಿದ್ದರೆ ಸುಮ್ಮನಿದ್ದುಬಿಡಿ ಅನ್ನುತ್ತಾರೆ. ಮತ್ತೊಬ್ಬ ಪತ್ರಕರ್ತರು ರಾಜ್ಯಪಾಲರಿಗೆ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರು ದೂರು ಸಲ್ಲಿಸಿದ್ದು ಮತ್ತು ರಾಜ್ಯಪಾಲರು ಮುಖ್ಯಮಂತ್ರಿಯವರಿಗೆ ಶೋಕಾಸ್ ನೋಟೀಸ್ ಜಾರಿ ಮಾಡಿರುವ ಬಗ್ಗೆ ಹೇಳಿದಾಗ ಪರಮೇಶ್ವರ್ ಅವರು, ನೋಟೀಸ್ ನೀಡಿದಾಕ್ಷಣ ಆಕಾಶವೇನೂ ಕಳಚಿ ತಲೆಮೇಲೆ ಬೀಳಲ್ಲ, ನೋಟೀಸ್ ಅನ್ನು ಕಾನೂನಾತ್ಮಕವಾಗಿ ಮತ್ತು ಸಂವಿಧಾನಾತ್ಮಕವಾಗಿ ಎದುರಿಸುವ ಅವಕಾಶ ಸರ್ಕಾರಕ್ಕಿದೆ ಎಂದು ಹೇಳಿದರು.

ನೋಟೀಸ್ ನೀಡುವ ಮುಂಚೆ ರಾಜ್ಯಪಾಲರು ದೂರಿನ ಸತ್ಯಾಸತ್ತಯತೆಯನ್ನು ಅರಿಯುವ ಪ್ರಯತ್ನ ಮಾಡಿದರೆ? ದೂರುದಾರನ ಹಿನ್ನೆಲೆ ಅರಿಯುವ ಪ್ರಯತ್ನ ಮಾಡಿದರೆ? ಒಬ್ಬ ಚುನಾಯಿತ ಮುಖ್ಯಮಂತ್ರಿಗೆ ಶೋಕಾಸ್ ನೋಟೀಸ್ ನೀಡುವುದು ಸುಲಭದ ಕೆಲಸವಲ್ಲ. ಮುಖ್ಯಮಂತ್ರಿಗೆ ನೀಡಿದ ದೂರಿನ ಸತ್ಯಾಸತ್ಯತೆಯನ್ನು ಪರಶೀಲಿಸಿ ಎಂದು ರಾಜ್ಯಪಾಲರಿಗೆ ಸಲಹೆ ನೀಡುವ ಅವಕಾಶವೂ ಸಚಿವ ಸಂಪುಟಕ್ಕಿರುತ್ತದೆ ಎಂದು ಪರಮೇಶ್ವರ್ ಹೇಳಿದರು. ಸುಳ್ಳು ಆರೋಪಗಳಿಗೆ ನೈತಿಕ ಹೊಣೆ ಹೊರುವ ಅವಶ್ಯಕತೆ ಮುಖ್ಯಮಂತ್ರಿಯವರಿಗಿಲ್ಲ ಎಂದು ಗೃಹ ಸಚಿವ ಖಾರವಾಗಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಕೆಡಿಪಿ ಸಭೆಗೆ ತಡವಾಗಿ ಬಂದ ಅಧಿಕಾರಿ ಮೇಲೆ ಶಾಲೆಯ ಮುಖ್ಯೋಪಾಧ್ಯಾಯನ ಹಾಗೆ ರೇಗಿದ ಪರಮೇಶ್ವರ್