ಕೃಷ್ಣಂ ಪ್ರಣಯ ಸಖಿ ಸಿನಿಮಾ ನೋಡಲು ಬಂದ ಜನ ಸಾಗರ; ಶರಣ್ಯ ಶೆಟ್ಟಿಗೆ ಅಚ್ಚರಿ
ಗಣೇಶ್-ಮಾಳವಿಕಾ ನಾಯರ್ ಜೋಡಿಯಾಗಿ ನಟಿಸಿರುವ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾದಲ್ಲಿ ಶರಣ್ಯ ಶೆಟ್ಟಿ ಅವರ ಪಾತ್ರ ಕೂಡ ಹೈಲೈಟ್ ಆಗಿದೆ. ಸಿನಿಮಾ ಬಿಡುಗಡೆ ಆಗಿದ್ದು, ಜನರಿಂದ ಮೆಚ್ಚುಗೆ ಸಿಕ್ಕಿದೆ. ಭಾರಿ ಸಂಖ್ಯೆಯಲ್ಲಿ ಪ್ರೇಕ್ಷಕರು ಬಂದು ಸಿನಿಮಾ ನೋಡುತ್ತಿರುವುದನ್ನು ಕಂಡು ಶರಣ್ಯ ಶೆಟ್ಟಿ ಅವರು ಅಚ್ಚರಿಪಟ್ಟಿದ್ದಾರೆ. ಈ ವೇಳೆ ಅವರು ಮಾತನಾಡಿದ ವಿಡಿಯೋ ಇಲ್ಲಿದೆ..
ಇಂದು (ಆಗಸ್ಟ್ 15) ಬಿಡುಗಡೆ ಆಗಿರುವ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾವನ್ನು ನೋಡಿ ಜನರು ಇಷ್ಟಪಟ್ಟಿದ್ದಾರೆ. ಈ ಚಿತ್ರದಲ್ಲಿ ಶರಣ್ಯ ಶೆಟ್ಟಿ ಕೂಡ ಒಂದು ಪ್ರಮುಖ ಪಾತ್ರವನ್ನು ಮಾಡಿದ್ದಾರೆ. ‘ಗೋಲ್ಡನ್ ಸ್ಟಾರ್’ ಗಣೇಶ್ ಜೊತೆ ಅವರು ತೆರೆ ಹಂಚಿಕೊಂಡಿದ್ದಾರೆ. ಮೊದಲ ದಿನ ಮೊದಲ ಶೋ ನೋಡಲು ಜನ ಜಾತ್ರೆ ಸೇರಿದೆ. ಇದನ್ನು ಕಣ್ತುಂಬಿಕೊಂಡ ಶರಣ್ಯ ಶೆಟ್ಟಿ ಅವರಿಗೆ ಸಿಕ್ಕಾಪಟ್ಟೆ ಖುಷಿಯಾಗಿದೆ. ಚಿತ್ರಮಂದಿರದ ಮೇಲೆ ನಿಂತುಕೊಂಡು ಅವರು ಜನರ ಪ್ರತಿಕ್ರಿಯೆ ಬಗ್ಗೆ ಮಾತನಾಡಿದ್ದಾರೆ. ‘ಇದು ನನಗೆ ಮೊದಲ ಅನುಭವ. ಇಷ್ಟು ಜನರು ಬಂದಿದ್ದನ್ನು ನಾನು ನೋಡಿರಲಿಲ್ಲ. ನಿಮ್ಮ ಸಿನಿಮಾ ಎಂಬ ಕಾರಣದಿಂದ ಮಾತ್ರವಲ್ಲ, ಕನ್ನಡ ಸಿನಿಮಾಗೆ ಇಷ್ಟು ಜನರು ಬಂದಿರುವುದೇ ಒಂದು ಸಂಭ್ರಮ ಆಗಿದೆ. ಏನು ಹೇಳಬೇಕು ಎಂಬುದೇ ತಿಳಿಯುತ್ತಿಲ್ಲ. ಕೊನೆಗೂ ನನ್ನ ಜೀವನದಲ್ಲಿ ಇಂಥದ್ದೊಂದು ದಿನವನ್ನು ನೋಡುತ್ತಿದ್ದೇನಲ್ಲ ಅಂತ ಖುಷಿ ಆಗುತ್ತಿದೆ’ ಎಂದು ಶರಣ್ಯ ಶೆಟ್ಟಿ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos