‘ಕೃಷ್ಣಂ ಪ್ರಣಯ ಸಖಿ’ ಚಿತ್ರಕ್ಕೆ ಭರ್ಜರಿ ಓಪನಿಂಗ್; ಗಣೇಶ್ ಗೆಲುವಿನ ನಗು
ಚಿತ್ರಮಂದಿರಗಳಿಗೆ ಜನರು ಬರುತ್ತಿಲ್ಲ ಎಂಬ ಕೊರಗನ್ನು ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾ ನೀಗಿಸಿದೆ. ಗಣೇಶ್, ಮಾಳವಿಕಾ ನಾಯರ್, ಶರಣ್ಯ ಶೆಟ್ಟಿ ಮುಂತಾದವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಜನರಿಂದ ಸಿಕ್ಕಿರುವ ಪಾಸಿಟಿವ್ ಪ್ರತಿಕ್ರಿಯೆ ಕಂಡು ಚಿತ್ರತಂಡಕ್ಕೆ ತುಂಬ ಸಂತಸ ಆಗಿದೆ. ಈ ಖುಷಿಯಲ್ಲಿ ಗಣೇಶ್ ಅವರು ಮಾತಾಡಿದ್ದಾರೆ.
‘ಗೋಲ್ಡನ್ ಸ್ಟಾರ್’ ಗಣೇಶ್ ನಟನೆಯ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾಗೆ ಉತ್ತಮ ಓಪನಿಂಗ್ ಸಿಕ್ಕಿದೆ. ಇಂದು (ಆಗಸ್ಟ್ 15) ಸರ್ಕಾರಿ ರಜೆ ಇರುವುದರಿಂದ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದಿದ್ದಾರೆ. ಮೊದಲ ದಿನ ಜನರ ಪ್ರತಿಕ್ರಿಯೆ ಕಂಡು ಗಣೇಶ್ ಖುಷಿಯಾಗಿದ್ದಾರೆ. ಕಳೆದ ಒಂದು ತಿಂಗಳಿಂದ ಈ ಸಿನಿಮಾದ ಹಾಡುಗಳು ಧೂಳೆಬ್ಬಿಸುತ್ತಿದ್ದವು. ಸಿಕ್ಕಾಪಟ್ಟೆ ವೈರಲ್ ಆಗಿದ್ದ ‘ದ್ವಾಪರ..’ ಹಾಡನ್ನು ಈಗ ದೊಡ್ಡ ಪರದೆಯಲ್ಲಿ ನೋಡಿ ಅಭಿಮಾನಿಗಳು ಎಂಜಾಯ್ ಮಾಡುತ್ತಿದ್ದಾರೆ. ಸಿನಿಮಾಗೆ ಗೆಲುವು ಸಿಕ್ಕಿರುವ ಖುಷಿಯಲ್ಲಿ ಗಣೇಶ್ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ..
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos