ಗಂಗಾವಳಿ ನದಿಯಲ್ಲಿ ಮುಳುಗಿದ್ದ ಟ್ರಕ್ ಪತ್ತೆ ಮಾಡಿದ ಈಶ್ವರ್ ಮಲ್ಪೆ, ಕೆಲ ನಿಮಿಷಗಳಲ್ಲಿ ಲಾರಿ ನೀರಿಂದ ಹೊರಕ್ಕೆ
ಅದು ಸರಿ, ನದಿಯಲ್ಲಿ ಮುಳುಗಿರುವವವರ ಪೈಕಿ ಇದುವರೆಗೆ ಪತ್ತೆಯಾಗದ ಲೋಕೇಶ ನಾಯ್ಕ್, ಜಗನ್ನಾಥ ನಾಯ್ಕ್ ಮತ್ತು ಕೇರಳದ ಟ್ರಕ್ ಡ್ರೈವರ್ ಅರ್ಜುನ್ ದೇಹಗಳು ಸಿಕ್ಕಾವೆಯೇ? ಒಂದು ತಿಂಗಳಿಂದ ನದಿಯಲ್ಲಿರುವ ದೇಹಗಳು ಸಂಪೂರಣವಾಗಿ ಕೊಳೆತಿರುತ್ತವೆ. ದೇಹಗಳು ಸಿಕ್ಕರೂ ಅವುಗಳನ್ನು ಮೇಲೆತ್ತಲಾದೀತೇ ಅನ್ನೋ ಪ್ರಶ್ನೆ ಉದ್ಭವಿಸುತ್ತದೆ.
ಕಾರವಾರ: ಪರಿಣಿತ ಈಜುಗಾರ, ಮುಳುಗುತಜ್ಞ ಮತ್ತು ಸ್ಕೂಬಾ ಡೈವರ್ ಈಶ್ವರ್ ಮಲ್ಪೆ ತಾವು ನೀಡಿದ ಭರಸವಸೆಯನ್ನು ಉಳಿಸಿಕೊಂಡಿದ್ದಾರೆ. ಗಂಗಾವಳಿ ನದಿಯಲ್ಲಿ ಒಂದು ತಿಂಗಳು ಹಿಂದೆ ಮುಳುಗಿಹೋದರೂ ಇನ್ನೂ ಪತ್ತೆಯಾಗದ ಮೂವರು ಮತ್ತು ಕೇರಳ ಮೂಲದ ಟ್ರಕ್ಕನ್ನು ಪತ್ತೆ ಮಾಡುವ ಸಂಕಲ್ಪದೊಂದಿಗೆ ನದಿಗೆ ಧುಮುಕಿದ ಅವರು ಎರಡು ದಿನಗಳ ಹುಡುಕಾಟದ ನಂತರ ಲಾರಿಯನ್ನು ಪತ್ತೆ ಮಾಡಿದ್ದಾರೆ ಮತ್ತು ಅದನ್ನು ಮೇಲ್ಲಕ್ಕೆತ್ತುವ ಹರಸಾಹಸ ಜಾರಿಯಲ್ಲಿದೆ. ನಮ್ಮ ಕಾರವಾರ ಪ್ರತಿನಿಧಿಯೊಂದಿಗೆ ಮಾತಾಡಿರುವ ಈಶ್ವರ್ ಅವರು ತಾವು ನದಿಯಲ್ಲಿ ಸುಮಾರು 40-50 ಅಡಿ ಆಳಕ್ಕೆ ಹೋಗಿ ಲಾರಿಯ ಛಾಸ್ಸಿಸ್ ಗೆ ಹಗ್ಗ ಕಟ್ಟಿ ಬಂದ ಅತ್ಯಂತ ದುರ್ಗಮ ಸಂಗತಿಯನ್ನು ವಿವರಿಸಿದ್ದಾರೆ. ಆದರೆ ಅವರ ದೊಡ್ಡತನವನ್ನು ಗಮನಿಸಿ. ಕಾರ್ಯಾಚರಣೆ ಶ್ರೇಯಸ್ಸನ್ನು ತಮಗೆ ನೆರವಾದ ಸ್ಥಳೀಯ ಮಿನುಗಾರರಿಗೆ ನೀಡುತ್ತಾರೆ. ಲಾರಿಯನ್ನ ನದಿಯಿಂದ ಮೇಲೆತ್ತುವ ಕಾರ್ಯ ಇನ್ನೊಂದು ಅರ್ಧಗಂಟೆಯಲ್ಲಿ ಮುಗಿಯಲಿದೆಯಂತೆ. ಈಶ್ವರ್ ಮಲ್ಪೆ ಅವರ ಸಂಕಲ್ಪ ಮತ್ತು ಸಾಹಸಕ್ಕೆ ನಮ್ಮಲ್ಲೆರದೊಂದು ಸಲಾಂ!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮುಳುಗುತಜ್ಞ ಈಶ್ವರ್ ಮಲ್ಪೆ ಗಂಗಾವಳಿ ನದಿಯಲ್ಲಿ ಟ್ರಕ್ಕಿನ ಜ್ಯಾಕ್ ಪತ್ತೆ ಮಾಡಿದ ದೃಶ್ಯ ಕೆಮೆರಾದಲ್ಲಿ ಸೆರೆ