Tunga Bhadra Dam Live: ತುಂಗಭದ್ರಾ ಡ್ಯಾಂ ಸ್ಟಾಪ್ಲಾಗ್ ಗೇಟ್ ಅಳವಡಿಕೆ ನೇರಪ್ರಸಾರ
ತುಂಗಭದ್ರಾ ಜಲಾಶಯ 19 ರಲ್ಲಿ ಮೊದಲ ಎಲಿಮೆಂಟ್ ಅಳವಡಿಕೆ ಪ್ರಕ್ರಿಯೆ ಆರಂಭವಾಗಿದೆ. ಎರಡು ಕ್ರೇನ್ಗಳ ಮೂಲಕ ಅಳವಡಿಕೆ ಸಿಬ್ಬಂದಿಗಳು ಮುಂದಾಗಿದ್ದಾರೆ. ಗೇಟ್ ಅಳವಡಿಸುವ ಪ್ರಕ್ರಿಯೆ ಹೇಗಿರಲಿದೆ ಎಂದು ನಮ್ಮ ಪ್ರತಿನಿಧಿ ಸಂಜಯ್ ಪ್ರತ್ಯಕ್ಷವರದಿ ನೀಡಿದ್ದಾರೆ. ಅದರ ನೇರಪ್ರಸಾರ ಇಲ್ಲಿದೆ ನೋಡಿ.
ಕೊಪ್ಪಳ, ಆಗಸ್ಟ್ 15: ಕೊಪ್ಪಳ ಜಿಲ್ಲೆ ಮುನಿರಾಬಾದ್‌ನಲ್ಲಿ ತುಂಗಾಭದ್ರಾ ಜಲಾಶಯದ (Tunga Bhadra Dam) 19ನೇ ಗೇಟ್ ಮುರಿದು ನೀರು ಪೋಲಾಗುತ್ತಿದೆ. ಇದೀಗ ತುಂಗಭದ್ರಾ ಜಲಾಶಯದ ಕ್ರಸ್ಟ್ಗೇಟ್ ಅಳವಡಿಕೆ ಕಾರ್ಯ ಭರದಿಂದ ಸಾಗಿದೆ. ರಭಸವಾಗಿ ಹರಿಯುವ ನೀರಿನ ಮಧ್ಯೆ ಜಲಾಶಯಕ್ಕೆ ಇಳಿದು ಓರ್ವ ಸಿಬ್ಬಂದಿ ಕೆಲಸ ಆರಂಭಿಸಿದ್ದಾರೆ. ಎಲಿಮೆಂಟ್ ಅಳವಡಿಕೆಗಿದ್ದ ಕೆಲ ಅಡ್ಡಿಯನ್ನು ಸಿಬ್ಬಂದಿ ನಿವಾರಿಸುತ್ತಿದ್ದಾರೆ. ಜಲಾಶಯಕ್ಕೆ ಧಕ್ಕೆ ಆಗದಂತೆ ಗೇಟ್ ಅಳವಡಿಕೆಗೆ ಹರಸಾಹಸ ಪಡುತ್ತಿದ್ದಾರೆ. ತುಂಗಭದ್ರಾ ಜಲಾಶಯದ ಕ್ರಸ್ಟ್ಗೇಟ್ ಅಳವಡಿಕೆ ಕಾರ್ಯದ ನೇರಪ್ರಸಾರ ವೀಕ್ಷಿಸಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Aug 15, 2024 05:52 PM
Latest Videos