ಕಾಂಗ್ರೆಸ್ ಭಿಕ್ಷೆಯಿಂದ ವಿಜಯೇಂದ್ರಗೆ ವಿಧಾನಸಭೆ ಮೆಟ್ಟಿಲು ಹತ್ತೋದು ಸಾಧ್ಯವಾಗಿದ್ದು: ಬಸನಗೌಡ ಯತ್ನಾಳ್

ಕಾಂಗ್ರೆಸ್ ಭಿಕ್ಷೆಯಿಂದ ವಿಜಯೇಂದ್ರಗೆ ವಿಧಾನಸಭೆ ಮೆಟ್ಟಿಲು ಹತ್ತೋದು ಸಾಧ್ಯವಾಗಿದ್ದು: ಬಸನಗೌಡ ಯತ್ನಾಳ್

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 15, 2024 | 4:47 PM

ಪಕ್ಷದ ನಾಯಕರ ವಿರುದ್ಧ ಟೀಕೆಗಳನ್ನು ಸುಮ್ಮನಿರುವಂತೆ ಪಕ್ಷದ ವರಿಷ್ಠರು ಮತ್ತು ಸಂಘದ ಪ್ರಮುಖರು ಸೂಚನೆ ನೀಡಿದ್ದಾರೆಂದು ಬಸನಗೌಡ ಯತ್ನಾಳ್ ಹೇಳುತ್ತಾರಾದರೂ ಇವತ್ತು ವಿಜಯಪುರದಲ್ಲಿ ಅವರು ಬಿಎಸ್ ಯಡಿಯೂರಪ್ಪ ಮತ್ತು ಬಿವೈ ವಿಜಯೇಂದ್ರರನ್ನು ಉಗ್ರವಾಗಿ ಟೀಕಿಸುವುದು ಮುಂದುವರಿಸಿದರು!

ವಿಜಯಪುರ: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಶಾನಕ ಬಸನಗೌಡ ಪಾಟೀಲ್ ಯತ್ನಾಳ್ ತಾನು ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಜೊತೆ ಮಾಡಿಕೊಳ್ಳುವುದು ಸಾಧ್ಯವಿಲ್ಲ, ಯಾಕೆಂದರೆ ಅವರು ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡು ವಿಧಾನಸಭೆಯ ಮೆಟ್ಟಲೇರಿದವರು, ಇದನ್ನು ಡಿಕೆ ಶಿವಕುಮಾರ್ ಸಹ ಅಂಗೀಕರಿಸಿದ್ದಾರೆ, ಕಾಂಗ್ರೆಸ್ ಭಿಕ್ಷೆಯಿಂದ ಶಾಸಕನಾದವನ ಜೊತೆ ಹೊಂದಾಣಿಕೆ ಮಾಡಿಕೊಳ್ಳಲಾಗದು ಎಂದರು. ವಿಷಯಗಳನ್ನು ತಾನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಜೊತೆ ಚರ್ಚೆ ಮಾಡಿದ್ದು ಅವರು ಸ್ವಲ್ಪ ಸಮಯದ ನಂತರ ಎಲ್ಲವನ್ನೂ ಸರಿ ಮಾಡುವ ಮತ್ತು ಪಕ್ಷದ ಹಳಬರಿಗೆ ಹಾಗೂ ಪ್ರಾಮಾಣಿಕರಿಗೆ ಸೂಕ್ತ ಸ್ಥಾನಮಾನ ಕಲ್ಪಿಸುವ ಭರವಸೆ ನೀಡಿದ್ದಾರೆ ಎಂದು ಯತ್ನಾಳ್ ಹೇಳಿದರು. ಸಂಘದ ಪ್ರಮುಖರು ಸಹ ರಾಜ್ಯದಲ್ಲಿ ಬಿಜೆಪಿಯನ್ನು ಹೊಂದಾಣಿಕೆ ಮುಕ್ತ ಮಾಡುವುದಾಗಿ ಎಂದಿದ್ದು, ತಾನು ಕೆಲ ದಿನಗಳವರೆಗೆ ತಾಳ್ಮೆಯಿಂದ ಇರಬೇಕು ಅಂತ ಹೇಳಿದ್ದಾರೆ ಎಂದ ಯತ್ನಾಳ್ ಪಕ್ಷದ ಮತ್ತು ಸಂಘದ ವರಿಷ್ಠರು ಹೇಳಿರುವುದನ್ನು ತಾನು ಪಾಲಿಸುವುದಾಗಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಉತ್ತರ ಕರ್ನಾಟಕದಲ್ಲಿ ಬಸನಗೌಡ ಯತ್ನಾಳ್ ನೇತೃತ್ವದ ಪಾದಯಾತ್ರೆಗೆ ನನ್ನ ಅಭ್ಯಂತರವಿಲ್ಲ: ವಿಜಯೇಂದ್ರ