ತುಂಗಭದ್ರಾ ಡ್ಯಾಂ: 5 ದಿನದಲ್ಲಿ ಬರೋಬ್ಬರಿ 28 ಟಿಎಂಸಿ ನೀರು ಖಾಲಿ, ತಾತ್ಕಾಲಿಕ ಗೇಟ್ ಅಳವಡಿಕೆ ಕಾರ್ಯ ಚುರುಕು

ಕೊಪ್ಪಳ ಜಿಲ್ಲೆ ಮುನಿರಾಬಾದ್‌ನಲ್ಲಿ ತುಂಗಭದ್ರಾ ಡ್ಯಾಂನ 19ನೇ ಕ್ರಸ್ಟ್​​ಗೇಟ್ ತುಂಡಾಗಿ ಬರೋಬ್ಬರಿ 5 ದಿನ. ಅಷ್ಟರಲ್ಲೇ 28ಕ್ಕೂ ಹೆಚ್ಚು ಟಿಎಂಸಿ ನೀರು ಪೋಲಾಗಿದೆ. ಉಳಿದ ನೀರನ್ನ ಉಳಿಸಲು ನಾಲ್ಕೈದು ದಿನದಿಂದ ತಜ್ಞರ ತಂಡ ಹರಸಾಹಸ ಪಡುತ್ತಿದೆ.. ಈಗಾಗಲೇ ತಾತ್ಕಾಲಿಕ ಗೇಟ್ ಅಳವಡಿಕೆಗೆ ಕಾರ್ಯ ಚುರುಕುಗೊಂಡಿದ್ದು, ಡ್ಯಾಮ್ ಬಳಿಗೆ ಕ್ರಸ್ಟ್‌ ಗೇಟ್‌ನ ಪ್ಲೇಟ್‌ಗಳನ್ನು ತರಲಾಗುತ್ತಿದೆ.

| Updated By: ಗಣಪತಿ ಶರ್ಮ

Updated on: Aug 15, 2024 | 2:11 PM

ಸದ್ಯ ಡ್ಯಾಮ್‌ನಲ್ಲಿ 77 ಟಿಎಂಸಿ ನೀರಿದ್ದು, ಕನಿಷ್ಠ 65 ಟಿಎಂಸಿ ನೀರು ಉಳಿಸಲು ಪ್ರಯತ್ನ ಮಾಡಲಾಗುತ್ತಿದೆ.ಇದಕ್ಕಾಗಿ 10 ಮೀಟರ್ ಉದ್ದದ ನಾಲ್ಕು ಅಡಿ ಅಗಲದ ಮೂರು ಗೇಟ್‌ಗಳನ್ನು ಡ್ಯಾಮ್‌ ಬಳಿ ತರಲಾಗಿದೆ. ಸಂಜೆವರೆಗೆ ಮತ್ತೆರಡು ಪ್ಲೇಟ್‌ಗಳು ಬರಲಿದ್ದು, 65 ಟನ್ ತೂಕವಿರುವ ಸ್ಟಾಪ್‌ ಲಾಗ್ ಗೇಟ್‌ಗಳನ್ನು ಅಳವಡಿಸಲಿದ್ದಾರೆ.

1 / 5
ಜಲಾಶಯದ ಮೇಲ್ಬಾಗಕ್ಕೆ ಗೇಟ್ ರವಾನಿಸಲಾಗುತ್ತಿದ್ದು, ಟ್ರಕ್‌ನಿಂದ ಪ್ಲೇಟ್‌ಗಳನ್ನು ಇಳಿಸುವಾಗ ಒಮ್ಮೆ ಬ್ಯಾಲೆನ್ಸ್ ತಪ್ಪಿತ್ತು. ಅದೃಷ್ಟವಶಾತ್ ಯಾವುದೇ ಸಮಸ್ಯೆಯಾಗಿಲ್ಲ. ನಂತರ ಕ್ರೇನ್ ಮೂಲಕ ಬೆಲ್ಟ್ ಹಾಕಿ ಕಬ್ಬಿಣ ಪೇಲ್ಟ್‌ಗಳನ್ನು ಜಲಾಶಯದ ಮೇಲ್ಭಾಗಕ್ಕೆ ಸಾಗಿಸಿದ್ದಾರೆ.

2 / 5
ಡ್ಯಾಮ್ ಸುರಕ್ಷತಾ ತಜ್ಞ ಕನ್ನಯ್ಯ ನಾಯ್ಡು ನೇತೃತ್ವದಲ್ಲಿ ಗೇಟ್ ಅಳವಡಿಕೆ ಕಾರ್ಯ ನಡೆಯುತ್ತಿದ್ದು, ನೂರಾರು ಕಾರ್ಮಿಕರು ಕೆಲಸದಲ್ಲಿ ನಿರತರಾಗಿದ್ದಾರೆ. ಬುಧವಾರ ಮಳೆ ಹಿನ್ನಲೆ ಗೇಟ್ ಅಳವಡಿಕೆಗೆ ಅಡ್ಡಿಯಾಗಿತ್ತು. ಇವತ್ತು ಮಳೆ ಬಿಡುವು ಕೊಟ್ಟಿದ್ದು, ಎಲ್ಲಾ ಪ್ಲೇಟ್‌ಗಳು ಬಂದ ನಂತ್ರ ಅಳವಡಿಕೆ ಶುರುವಾಗಲಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಡ್ಯಾಮ್ ಸುರಕ್ಷತಾ ತಜ್ಞ ಕನ್ನಯ್ಯ ನಾಯ್ಡು, ನಾಳೆ ಶುಭ ಸುದ್ದಿ ಕೊಡುತ್ತೇನೆ ಎಂದಿದ್ದಾರೆ.

3 / 5
ಏತನ್ಮಧ್ಯೆ 19 ನೇ ಗೇಟ್ ಅಳವಡಿಕೆ ಕಾರ್ಯಾರಂಭವಾಗಿದ್ದು, ಜಿಂದಾಲ್ ಇಂಜಿನಿಯರ್ಸ್ಕ್ರೇನ್ ಮೂಲಕ ಸ್ಟಾಪ್​​ಲಾಗ್ ಗೇಟ್ ಎಲಿಮೆಂಟ್ ಎತ್ತಿದ್ದಾರೆ. ಕೆಲವೇ ಹೊತ್ತಲ್ಲಿ ಸ್ಟಾಪ್ ಲಾಗ್ ಎಲಿಮೆಂಟ್ ಅಳವಡಿಕೆ ಮಾಡಲಾಗುತ್ತದೆ. 5 ಎಲಿಮೆಂಟ್‌ಗಳ ಜೋಡಿಸಲು ಪ್ಲಾನ್ ಮಾಡಲಾಗಿದೆ. ತಲಾ ಒಂದು ಎಲಿಮೆಂಟ್ 25 ಟಿಎಂಸಿ ನೀರು ತಡೆಯುವ ಸಾಮರ್ಥ್ಯ ಹೊಂದಿದೆ. ಸದ್ಯ 80 ಕ್ಕೂ ಹೆಚ್ಚು ತಾಂತ್ರಿಕ ಸಿಬ್ಬಂದಿಯಿಂದ‌ ಗೇಟ್ ಅಳವಡಿಕೆ ಕಾರ್ಯ ನಡೆಯುತ್ತಿದೆ.

4 / 5
ಅರ್ಧ ಡ್ಯಾಮ್ ಖಾಲಿ ಮಾಡಿ ಗೇಟ್ ಅಳವಡಿಸಲು ನಿರ್ದರಿಸಿದ್ದೆವು. ಆದರೆ, ಅದಕ್ಕೂ ಮುನ್ನವೇ ಗೇಟ್ ಅಳವಡಿಕೆ ಪ್ರಯತ್ನ ಮಾಡುತ್ತಿದ್ದೇವೆ ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ.  ಅದೇನೇ ಇರಲಿ, ಆದಷ್ಟು ಬೇಗ ಗೇಟ್ ಅಳವಡಿಕೆಯಾಗಲಿ. 65 ಟಿಎಂಸಿ ನೀರು ಉಳಿಯಲಿ ಅನ್ನೋದು ರೈತರ ಪ್ರಾರ್ಥನೆಯಾಗಿದೆ.

5 / 5
Follow us
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ

ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?

ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್

ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ

ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ

ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ

ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು

ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ

ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!

ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ