
ಆನೇಕಲ್: ಲಾಕ್ಡೌನ್ ನಿಯಮ ಉಲ್ಲಂಘಿಸಿ ಸರ್ಕಾರಿ ಕಚೇರಿಯಲ್ಲಿ ಹೋಮ-ಹವನ ಮಾಡಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಅತ್ತಿಬೆಲೆ ಬಳಿಯ ಆರ್ಟಿಒ ಕಚೇರಿಯಲ್ಲಿ ನಡೆದಿದೆ.
RTO ಅಧಿಕಾರಿ ಶ್ರೀನಿವಾಸಪ್ಪ ನೇತೃತ್ವದಲ್ಲಿ ಸುಮಾರು 8ಕ್ಕೂ ಅಧಿಕ ಮಂದಿ ಪುರೋಹಿತರಿಂದ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹೋಮ-ಹವನ ಮಾಡಲಾಗಿದೆ. ಈ ವೇಳೆ RTO ಅಧಿಕಾರಿಗಳು, ಸಿಬ್ಬಂದಿ ಮಾಸ್ಕ್ ಧರಿಸದೇ, ಅಂತರ ಮರೆತು ಪೂಜೆಯಲ್ಲಿ ಭಾಗಿಯಾಗಿದ್ದಾರೆ.
ಲಾಕ್ಡೌನ್ ಮತ್ತು 144 ಸೆಕ್ಷನ್ ಜಾರಿ ಇದ್ರೂ ಕಾನೂನು ಪಾಲಿಸಬೇಕಾದ ಅಧಿಕಾರಿಗಳಿಂದಲೇ ಕಾನೂನು ಉಲ್ಲಂಘನೆಯಾಗಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಯಾವುದೇ ಕಾರ್ಯಕ್ರಮ ಮಾಡಬೇಕಿದ್ರು ತಾಲೂಕು ಆಡಳಿತದಿಂದ ಕಡ್ಡಾಯ ಅನುಮತಿ ಪಡೆಯಬೇಕು. ಆದರೆ ಅನುಮತಿ ಸಹ ಪಡೆಯದೇ ಸರ್ಕಾರಿ ಕಚೇರಿಯಲ್ಲಿ ಹೋಮ-ಹವನ ಮಾಡಲಾಗಿದೆ.
Published On - 1:30 pm, Sun, 17 May 20