ಬ್ಯಾಂಕ್ ಹಾಕಿದ್ದ ಹೆಚ್ಚುವರಿ ಹಣ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಮೈಸೂರು ದಂಪತಿ
ಮೈಸೂರು: ಕೊರೊನಾ ಲಾಕ್‌ಡೌನ್ ನಡುವೆ ಜನ ಸಂಕಷ್ಟದಲ್ಲಿದ್ದಾರೆ. ಕೆಲಸ ಕಾರ್ಯಗಳಿಲ್ಲದೆ ಮುಂದೆ ಜೀವನ ಹೆಂಗೆ ಎಂಬ ಗೊಂದಲಗಳು ಹೆಚ್ಚಾಗಿವೆ. ಇದರ ನಡುವೆಯೂ ತಮ್ಮ ಖಾತೆಗೆ ಹೆಚ್ಚುವರಿಯಾಗಿ ಹಾಕಿದ್ದ ಹಣವನ್ನು ಬ್ಯಾಂಕ್ಗೆ ವಾಪಸ್ ನೀಡಿ ಮೈಸೂರಿನ ಹಿರಿಯ ದಂಪತಿ ಪ್ರಾಮಾಣಿಕತೆ ಮೆರೆದಿದ್ದಾರೆ. ಗುತ್ತಿಗೆದಾರ ಸಹಕಾರ ಸಂಘದಲ್ಲಿ ಖಾತೆ ಹೊಂದಿದ್ದ ಮೈಸೂರಿನ ಇಟ್ಟಿಗೆಗೂಡು ಬಡಾವಣೆ ನಿವಾಸಿಗಳಾದ ಪುಟ್ಟಣ್ಣ, ಇಂದಿರಾ ದಂಪತಿ ತಮ್ಮ ಖಾತೆಗೆ ಬಂದಿದ್ದ 13.5 ಲಕ್ಷ ರೂ. ವಾಪಸ್ ನೀಡಿದ್ದಾರೆ. ದಂಪತಿ 1.5 ಲಕ್ಷ ಹಣ ಎಫ್.ಡಿ ಇಟ್ಟಿದ್ದರು. […]
ಮೈಸೂರು: ಕೊರೊನಾ ಲಾಕ್‌ಡೌನ್ ನಡುವೆ ಜನ ಸಂಕಷ್ಟದಲ್ಲಿದ್ದಾರೆ. ಕೆಲಸ ಕಾರ್ಯಗಳಿಲ್ಲದೆ ಮುಂದೆ ಜೀವನ ಹೆಂಗೆ ಎಂಬ ಗೊಂದಲಗಳು ಹೆಚ್ಚಾಗಿವೆ. ಇದರ ನಡುವೆಯೂ ತಮ್ಮ ಖಾತೆಗೆ ಹೆಚ್ಚುವರಿಯಾಗಿ ಹಾಕಿದ್ದ ಹಣವನ್ನು ಬ್ಯಾಂಕ್ಗೆ ವಾಪಸ್ ನೀಡಿ ಮೈಸೂರಿನ ಹಿರಿಯ ದಂಪತಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಗುತ್ತಿಗೆದಾರ ಸಹಕಾರ ಸಂಘದಲ್ಲಿ ಖಾತೆ ಹೊಂದಿದ್ದ ಮೈಸೂರಿನ ಇಟ್ಟಿಗೆಗೂಡು ಬಡಾವಣೆ ನಿವಾಸಿಗಳಾದ ಪುಟ್ಟಣ್ಣ, ಇಂದಿರಾ ದಂಪತಿ ತಮ್ಮ ಖಾತೆಗೆ ಬಂದಿದ್ದ 13.5 ಲಕ್ಷ ರೂ. ವಾಪಸ್ ನೀಡಿದ್ದಾರೆ. ದಂಪತಿ 1.5 ಲಕ್ಷ ಹಣ ಎಫ್.ಡಿ ಇಟ್ಟಿದ್ದರು.
ಲಾಕ್‌ಡೌನ್ ಹಿನ್ನೆಲೆ ಹಣದ ಅವಶ್ಯಕತೆಗಾಗಿ ಎಫ್.ಡಿ ಹಣ ವಾಪಸ್ ಪಡೆದಿದ್ದರು. ಗುತ್ತಿಗೆದಾರ ಸಹಕಾರ ಬ್ಯಾಂಕ್, ಬ್ಯಾಂಕ್ ಆಫ್ ಬರೋಡದಲ್ಲಿ ಖಾತೆ ಹೊಂದಿದೆ. ಹೀಗಾಗಿ ಬ್ಯಾಂಕ್ ಆಫ್ ಬರೋಡ 1.5 ಲಕ್ಷದ ಬದಲಾಗಿ ದಂಪತಿ ಖಾತಗೆ 15 ಲಕ್ಷ ಜಮಾ ಮಾಡಿದೆ. ಖಾತೆಯಲ್ಲಿ ಹೆಚ್ಚಿನ ಹಣ ಕಂಡು ಅಚ್ಚರಿಯಾದ ದಂಪತಿ ಬ್ಯಾಂಕ್ ಸಿಬ್ಬಂದಿಗೆ ವಿಚಾರ ತಿಳಿಸಿ ಹೆಚ್ಚಿನ ಹಣ ವಾಪಸ್ ನೀಡಿದ್ದಾರೆ. ದಂಪತಿ ಪ್ರಾಮಾಣಿಕತೆ ಮೆಚ್ಚಿ ಬ್ಯಾಂಕ್ ಕೃತಜ್ಞತಾ ಪತ್ರ ಬರೆದಿದೆ.
Published On - 2:22 pm, Sun, 17 May 20