AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಚ್ಚಾಟಿತ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ವಿರುದ್ಧ ಆರೋಪ; ರುಪ್ಸಾ ಸಂಘಟನೆಯಿಂದ ಪೊಲೀಸ್ ಆಯುಕ್ತರಿಗೆ ದೂರು

ಉಚ್ಚಾಟನೆ ಬಳಿಕ ಲೋಕೇಶ್ ತಾಳಿಕಟ್ಟೆ 2021, ಫೇಬ್ರವರಿ 3 ರಂದು ರಿಜಿಸ್ಟರ್ಡ್ ಯುನೈಡೆಡ್ ಪ್ರೈವೆಟ್ ಸ್ಕೂಲ್ ಮ್ಯಾನೆಜ್​ಮೆಂಟ್ ಎಂಬ ಮತ್ತೊಂದು ಸಂಘಟನೆ ರಚನೆ ಮಾಡಿದ್ದರು. ಈ ಸಂಘಟನೆ ರುಪ್ಸಾ ಹೆಸರನ್ನೇ ಹೋಲುವ ಸಂಘಟನೆಯಾಗಿತ್ತು.

ಉಚ್ಚಾಟಿತ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ವಿರುದ್ಧ ಆರೋಪ; ರುಪ್ಸಾ ಸಂಘಟನೆಯಿಂದ ಪೊಲೀಸ್ ಆಯುಕ್ತರಿಗೆ ದೂರು
ಲೋಕೇಶ್ ತಾಳಿಕಟ್ಟೆ
preethi shettigar
|

Updated on:May 28, 2021 | 1:44 PM

Share

ಬೆಂಗಳೂರು: ಉಚ್ಚಾಟಿತ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ವಿರುದ್ಧ ರುಪ್ಸಾ (ಖಾಸಗಿ ಅನುದಾನ ರಹಿತ ಶಾಲೆಗಳ ಸಂಘ) ಸಂಘಟನೆ ಪದಾಧಿಕಾರಿಗಳು ದೂರು ನೀಡಿದ್ದಾರೆ. ಸಂಘಟನೆಯ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಹಿನ್ನೆಲೆ ಪೊಲೀಸ್ ಆಯುಕ್ತರ ಬಳಿ ದೂರು ನೀಡಲಾಗಿದೆ. ರುಪ್ಸಾ ಸಂಘಟನೆ ಅಧ್ಯಕ್ಷರಾಗಿದ್ದ ಲೋಕೇಶ್ ತಾಳಿಕಟ್ಟೆ ಅವರನ್ನು ಸಂಘಟನೆ ವಿರುದ್ಧ ನಿರ್ಧಾರ ಕೈಗೊಂಡ ಹಿನ್ನೆಲೆ ಕೆಲ ದಿನಗಳ ಹಿಂದೆಯೇ ಉಚ್ಚಾಟನೆ ಮಾಡಲಾಗಿತ್ತು.

ಉಚ್ಚಾಟನೆ ಬಳಿಕ ಲೋಕೇಶ್ ತಾಳಿಕಟ್ಟೆ 2021, ಫೇಬ್ರವರಿ 3 ರಂದು ರಿಜಿಸ್ಟರ್ಡ್ ಯುನೈಡೆಡ್ ಪ್ರೈವೆಟ್ ಸ್ಕೂಲ್ ಮ್ಯಾನೆಜ್​ಮೆಂಟ್ ಎಂಬ ಮತ್ತೊಂದು ಸಂಘಟನೆ ರಚನೆ ಮಾಡಿದ್ದರು. ಈ ಸಂಘಟನೆ ರುಪ್ಸಾ ಹೆಸರನ್ನೇ ಹೋಲುವ ಸಂಘಟನೆಯಾಗಿತ್ತು.

ಇನ್ನು ರುಪ್ಸಾ ಸಂಘಟನೆಯಿಂದ ಉಚ್ಚಾಟಿಸಿದ ಬಳಿಕವೂ ಲೋಕೇಶ್ ತಾಳಿಕಟ್ಟೆ, ರುಪ್ಸಾ ಹೆಸರಿನಲ್ಲಿ‌ ಗೂಗಲ್ ಮೀಟ್ ನಡೆಸುತ್ತಿದ್ದರು. ಅಲ್ಲದೇ ಸರ್ಕಾರಕ್ಕೆ ಮತ್ತು ಸಚಿವರಿಗೆ ರುಪ್ಸಾ ಲೋಗೊ ಬಳಸಿ ಪತ್ರ ಬರೆಯುತ್ತಿದ್ದರು ಎಂದು ಆರೋಪಿಸಲಾಗಿದೆ. ಹೀಗಾಗಿ ಪೊಲೀಸ್ ಆಯುಕ್ತರಿಗೆ ರುಪ್ಸಾ‌ ಸಂಘಟನೆಯ ನೂತನ ರಾಜ್ಯಧ್ಯಕ್ಷ ಹಾಲನೂರು‌ ಎಸ್ ಲೇಪಾಕ್ಷಿ ದೂರು ನೀಡಿದ್ದಾರೆ.

rupsa complaint

ದೂರಿನ ಪ್ರತಿ

ತೇಜಸ್ವಿ ಸೂರ್ಯ ಹಾಗೂ ಸತೀಶ್ ರೆಡ್ಡಿ ಬಂಧಿಸುವಂತೆ ಕಮಲ್ ಪಂತ್​ಗೆ ದೂರು ಬೆಂಗಳೂರು ನಗರದಲ್ಲಿ ಕೊವಿಡ್ ಬೆಡ್ ಬ್ಲಾಕ್ ದಂಧೆ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಹಾಗೂ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಬಂಧನಕ್ಕೆ ಒತ್ತಾಯಿಸಿ ಬ್ಲಾಕ್​ ಕಾಂಗ್ರೆಸ್ ಸಮಿತಿಯಿಂದ ಪೊಲೀಸ್ ಕಮಿಷನರ್​ಗೆ ದೂರು ನೀಡಲಾಗಿದೆ. ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್​ಗೆ ದೂರು ಸಲ್ಲಿಸಲಾಗಿದೆ.

ಬೆಡ್ ಬ್ಲಾಕ್ ದಂಧೆಯಲ್ಲಿ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಆಪ್ತನಾಗಿರುವ ಬಾಬು ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗ, ಪೊಲೀಸರು ಕೂಡಲೇ ತೇಜಸ್ವಿ ಸೂರ್ಯ ಹಾಗೂ ಸತೀಶ್ ರೆಡ್ಡಿ ಬಂಧಿಸಬೇಕು ಎಂದು ಆಗ್ರಹ ಕೇಳಿಬಂದಿದೆ. ಈ ಬಗ್ಗೆ, ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್​ಗೆ ದೂರು ಸಲ್ಲಿಸಲಾಗಿದೆ.

ರಾಜ್ಯದಲ್ಲಿ ಬಾರಿ ಸಂಚಲನ ಮೂಡಿಸಿದ ಆಸ್ಪತ್ರೆಗಳಲ್ಲಿ ಬೆಡ್ ಬ್ಲಾಕಿಂಗ್ ಹಗರಣದ ಆರೋಪ ತಮಗೇ ತಿರುಗುಬಾಣವಾಗುತ್ತಿರುವ ಕುರಿತು ಶಾಸಕ ಸತೀಶ್ ರೆಡ್ಡಿ ಸ್ಪಷ್ಟನೆ ನೀಡಿದ್ದರು. ಕೊವಿಡ್ ವಿರುದ್ಧದ ಹೋರಾಟದಲ್ಲಿ ಏಜೆನ್ಸಿಗಳನ್ನು ನೇಮಿಸಿದ್ದ ಓರ್ವ ಐಎಎಸ್ ಅಧಿಕಾರಿ ನನ್ನ ಬಗ್ಗೆ ಸುದ್ದಿ ಹಬ್ಬಿಸುತ್ತಿದ್ದಾರೆ. ಈಗ ಬೆಡ್ ಬ್ಲಾಕಿಂಗ್ ಹಗರಣದಲ್ಲಿ ತನ್ನ ಹೆಸರು ಬಯಲಾಗುತ್ತದೆ ಎಂದು ನನ್ನ ಹೆಸರನ್ನು ಈ ಪ್ರಕರಣದಲ್ಲಿ ತರುವ ಕುತಂತ್ರ ಮಾಡುತ್ತಿದ್ದಾರೆ. ತಾವು ಸಿಕ್ಕಿಬೀಳಬಾರದು ಎಂದು ನನ್ನ ಹೆಸರು ಹೇಳಿದ್ದಾರೆ. ಈ ಮೂಲಕ ಪ್ರಕರಣದ ದಾರಿ ತಪ್ಪಿಸಲು ಪ್ರಯತ್ನಿಸಿದ್ದಾರೆ ಎಂದು ಶಾಸಕ ಸತೀಶ್ ರೆಡ್ಡಿ ಆಪಾದಿಸಿದ್ದರು.

ಸಂಸದ ತೇಜಸ್ವಿ ಸೂರ್ಯ ಬಿಬಿಎಂಪಿ ದಕ್ಷಿಣ ವಯಲದ ವಾರ್ ರೂಂ ನಲ್ಲಿ ನಡೆಯುತ್ತಿದ್ದ ಬೆಡ್ ಬ್ಲಾಕಿಂಗ್ ದಂಧೆಯನ್ನು ಬಯಲಿಗೆಳೆದಿದ್ದರು. ಈಗ ಇದೇ ಪ್ರಕರಣಕ್ಕೆ ಸಂಬಂಧಿಸಿ ಕೆ.ಎಸ್.ಲೇಔಟ್ ಠಾಣಾ ವ್ಯಾಪ್ತಿಯ ಪ್ರಕರಣದ ಪ್ರಮುಖ ಆರೋಪಿ ಮಂಜುನಾಥ್ನನ್ನು ಪೊಲೀಸರು ಬಂಧಿಸಿದ್ದರು.

ಇದನ್ನೂ ಓದಿ:

Bed Blocking Case: ಬೆಡ್ ಬ್ಲಾಕಿಂಗ್ ಪ್ರಕರಣ: ತೇಜಸ್ವಿ ಸೂರ್ಯ ಹಾಗೂ ಸತೀಶ್ ರೆಡ್ಡಿ ಬಂಧಿಸುವಂತೆ ಕಮಲ್ ಪಂತ್​ಗೆ ದೂರು

ಮಂಗಳೂರಿನಲ್ಲಿ ಮಾಸ್ಕ್ ಧರಿಸದ ಪ್ರಕರಣ: ಸೂಪರ್ ಮಾರ್ಕೆಟ್ ಮಾಲೀಕನ ವಿರುದ್ಧ ದೂರು ದಾಖಲಿಸಿದ ವೈದ್ಯ ಕಕ್ಕಿಲಾಯ

Published On - 1:42 pm, Fri, 28 May 21