ಮೈಸೂರು: ಹೋಟೆಲ್ ಸಿಬ್ಬಂದಿಗೆ ಬೈದಿರುವುದು ನಿಜ. ಆದರೆ ಹಲ್ಲೆ ನಡೆಸಿಲ್ಲ ಎಂದು ಸಂದೇಶ್ ತಿಳಿಸಿದ್ದಾರೆ. ಸದ್ಯ ಹೋಟೆಲ್ಗಳೆಲ್ಲ ಮುಚ್ಚಿ ನಾವೇ ಸಂಕಷ್ಟದಲ್ಲಿದ್ದೇವೆ. ಹೋಟೆಲ್ ನಮ್ಮ ಹೊಟ್ಟೆಪಾಡು. ಇಲ್ಲಿ ಗ್ರಾಹಕರು ಏನೇ ಹೇಳಿದ್ರೂ ನಾವು ಕೊಡಬೇಕಾಗುತ್ತೆ. ಅವರು ಏನೇ ಬೈದರೂ ನಾವು ಬೈಸಿಕೊಳ್ಳಬೇಕಾಗುತ್ತದೆ. ದರ್ಶನ್ ನಮ್ಮ ಸಿಬ್ಬಂದಿ ಮೇಲೆ ಸ್ವಲ್ಪ ಬೈದಿದ್ದಾರೆ, ಆದರೆ ಹೊಡೆದಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ಬೈಯುವಾಗ ನಾನು ನಮ್ಮ ಸಿಬ್ಬಂದಿಗೆ ಬಯ್ಯಬೇಡ ಎಂದು ಹೇಳಿದ್ದೆ. ಸಂದೇಶ್ ಪ್ರಿನ್ಸ್ ಹೋಟೆಲ್ ನಡೆಸುತ್ತಿರುವುದು ನಾನು. ನಮ್ಮ ತಂದೆಗೆ ಇದರ ಬಗ್ಗೆ ಏನೂ ಗೊತ್ತಿಲ್ಲ. ದಯವಿಟ್ಟು ಇದನ್ನು ಇಲ್ಲಿಗೇ ಬಿಟ್ಟುಬಿಡಿ. ನಿನ್ನೆ, ಮೊನ್ನೆಯ ಘಟನೆಯ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಅವರು ಪಬ್ಲಿಸಿಟಿಗೋಸ್ಕರ ಏನೇನೋ ಮಾಡುತ್ತಿದ್ದಾರೆ ಎಂದು ಮೈಸೂರಿನಲ್ಲಿ ಸಂದೇಶ್ ಅಭಿಪ್ರಾಯಪಟ್ಟಿದ್ದಾರೆ.
ನನಗೆ ಅನ್ನ ಕೊಡುತ್ತಿರುವುದು ನನ್ನ ಕಾರ್ಮಿಕರು. ಅವರ ಮೇಲೆ ಹಲ್ಲೆ ನಡೆದರೆ ನಾನು ಸುಮ್ಮನಿರುತ್ತೇನಾ? ಎಂದು ಪ್ರಶ್ನಿಸಿದ ಸಂದೇಶ್ ನಾಗರಾಜ್ ಪುತ್ರ, ದರ್ಶನ್ ನಮ್ಮ ಕಾರ್ಮಿಕರಿಗೆ ಬೈದಿರುವುದು ನಿಜ. ಅದಕ್ಕೆ ನಾನೇ ನಮ್ಮ ಕಾರ್ಮಿಕರ ಬಳಿ ಕ್ಷಮೆ ಕೇಳಿದ್ದೇನೆ. ಇದು ಲಾಕ್ಡೌನ್ಗೂ ಮೊದಲೇ ನಡೆದಿರುವ ಘಟನೆ. ಹೋಟೆಲ್ಗಳಲ್ಲಿ ಈ ರೀತಿ ಸಣ್ಣ ಪುಟ್ಟದ್ದು ಆಗುತ್ತಿರುತ್ತದೆ. ದರ್ಶನ್ ಜತೆ ಯಾವಾಗಲೂ 15-20 ಜನ ಬರುತ್ತಾರೆ. ಗಲಾಟೆ ನಡೆದ ದಿನವೂ 15-20 ಜನರು ಇದ್ದರು. ಗ್ರಾಹಕರು ಕುಡಿದು ಬೈದರೆ ನಾವು ಬೈಸಿಕೊಳ್ಳಬೇಕಾಗುತ್ತದೆ ಎಂದು ಹೇಳಿದರು.
ನಮ್ಮ ಹೋಟೆಲ್ನಲ್ಲಿ ಇರುವುದೇ ತರಬೇತುದಾರರು. ಚೆನ್ನೈ, ಬಿಹಾರ, ಪಶ್ಚಿಮ ಬಂಗಾಳದಿಂದ ಬಂದವರಿದ್ದಾರೆ. ನಮ್ಮ ಹೋಟೆಲ್ನಲ್ಲಿ 10 ದಿನಗಳ ಫೂಟೇಜ್ ಇರುತ್ತದೆ. ಆಮೇಲೆ ಸಿಸಿ ಕ್ಯಾಮರಾದ ದೃಶ್ಯಗಳು ಡಿಲೀಟ್ ಆಗುತ್ತದೆ. ನಮಗೆ ಹೋಟೆಲ್ ಗ್ರಾಹಕರು, ಸಿಬ್ಬಂದಿ ಇಬ್ಬರೂ ಬೇಕು. ಅಂದಿನ ಘಟನೆಯಿಂದ ನಮಗೂ ಸ್ವಲ್ಪ ಸಮಸ್ಯೆಯಾಗಿದೆ ಎಂದು ಸಂದೇಶ್ ಹೇಳಿದ್ದಾರೆ.
ಇದನ್ನೂ ಓದಿ
ಇಂದ್ರಜಿತ್ ಲಂಕೇಶ್ ಮನವಿಗೆ ಸ್ಪಂದಿಸಿದ ಗೃಹ ಸಚಿವ ಬೊಮ್ಮಾಯಿ; ತನಿಖೆಗೆ ಸೂಚನೆ
(Sandesh Nagaraj says Darshan abused hotel staff but not assaulted in Prince Hotel Mysore)