AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Santro Ravi Case: ಸ್ಯಾಂಟ್ರೋ ರವಿ ಪ್ರಕರಣ; ಅಖಾಡಕ್ಕಿಳಿದ ಸಿಐಡಿ, ಮೈಸೂರಿನಲ್ಲಿ ಮಾಹಿತಿ ಸಂಗ್ರಹ

ಸಿಐಡಿ ಡಿವೈಎಸ್​ಪಿ ನರಸಿಂಹಮೂರ್ತಿ ನೇತೃತ್ವದ ತಂಡ ಸೋಮವಾರ ಸಂಜೆ ನಗರಕ್ಕೆ ಆಗಮಿಸಿ ಮೈಸೂರಿನ ವಿಜಯನಗರ ಉಪವಿಭಾಗದ ಎಸಿಪಿ ಶಿವಶಂಕರ್​​ರಿಂದ ಮಾಹಿತಿ ಸಂಗ್ರಹಿಸಿದೆ.

Santro Ravi Case: ಸ್ಯಾಂಟ್ರೋ ರವಿ ಪ್ರಕರಣ; ಅಖಾಡಕ್ಕಿಳಿದ ಸಿಐಡಿ, ಮೈಸೂರಿನಲ್ಲಿ ಮಾಹಿತಿ ಸಂಗ್ರಹ
ಸ್ಯಾಂಟ್ರೋ ರವಿ
Follow us
TV9 Web
| Updated By: Ganapathi Sharma

Updated on:Jan 16, 2023 | 5:13 PM

ಮೈಸೂರು: ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪ ಎದುರಿಸುತ್ತಿರುವ ಕೆ.ಎಸ್.ಮಂಜುನಾಥ ಅಲಿಯಾಸ್ ಸ್ಯಾಂಟ್ರೋ ರವಿ (Santro Ravi) ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯ ಹೊಣೆಯನ್ನು ಸಿಐಡಿ (CID) ಕೈಗೆತ್ತಿಕೊಂಡಿದೆ. ತನಿಖೆಗಾಗಿ ಸಿಐಡಿ ತಂಡ ಮೈಸೂರಿಗೆ ಬಂದಿದ್ದು, ಪ್ರಾಥಮಿಕ ಮಾಹಿತಿ ಕಲೆ ಹಾಕಿದೆ. ಸಿಐಡಿ ಡಿವೈಎಸ್​ಪಿ ನರಸಿಂಹಮೂರ್ತಿ ನೇತೃತ್ವದ ತಂಡ ಸೋಮವಾರ ಸಂಜೆ ನಗರಕ್ಕೆ ಆಗಮಿಸಿ ಮೈಸೂರಿನ ವಿಜಯನಗರ ಉಪವಿಭಾಗದ ಎಸಿಪಿ ಶಿವಶಂಕರ್​​ರಿಂದ ಮಾಹಿತಿ ಸಂಗ್ರಹಿಸಿದೆ. ಸಿಐಡಿ ತಂಡದಲ್ಲಿ ನಾಲ್ಕಕ್ಕೂ ಹೆಚ್ಚು ಅಧಿಕಾರಿಗಳಿದ್ದು, ಎಸಿಪಿ ಶಿವಶಂಕರ್​​ರಿಂದ ಮಾಹಿತಿ ಪಡೆದರು. ಸ್ಯಾಂಟ್ರೋ ರವಿ ಪ್ರಕರಣವನ್ನು ಸಿಐಡಿಗೆ ವಹಿಸುವ ಬಗ್ಗೆ ಸೋಮವಾರ ಬೆಳಿಗ್ಗೆ ಸರ್ಕಾರ ನಿರ್ಧಾರ ಕೈಗೊಂಡಿತ್ತು. ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸುತ್ತಿರುವುದಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಟಿವಿ9 ಗೆ ಮಾಹಿತಿ ನೀಡಿದ್ದರು.

ಈ ಮಧ್ಯೆ, ಸಂತ್ರಸ್ತೆ ಹಾಗೂ ಆಕೆಯ ತಾಯಿ 10 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಈ ಸಾಲದ ಹಣವನ್ನು ತೀರಿಸಲಾಗದೆ ಸುಳ್ಳು ದೂರು ದಾಖಲಿಸಿದ್ದಾರೆ ಎಂದು ಸ್ಯಾಂಟ್ರೋ ರವಿ ಪರ ವಕೀಲ ಹರೀಶ್ ಪ್ರಭು ಮೈಸೂರಿನಲ್ಲಿ ಆರೋಪಿಸಿದ್ದಾರೆ. ಹಣಕಾಸಿನ ವ್ಯಾಜ್ಯವನ್ನು ವಿಜೃಂಭಿಸಲಾಗಿದ್ದಲ್ಲದೆ, ಅದನ್ನು ಬೇರೆ ರೀತಿಯಾಗಿ ಬಿಂಬಿಸಲಾಗಿದೆ. ವಾಟ್ಸ್​ಆ್ಯಪ್ ಸ್ಟೇಟಸ್ ಹಾಕಿಕೊಂಡಿರುವುದನ್ನೇ ದೊಡ್ಡ ರೀತಿಯಲ್ಲಿ ತಪ್ಪಾಗಿ ಬಿಂಬಿಸಲಾಗುತ್ತಿದೆ. ಮಂಜುನಾಥ್ ಅವರನ್ನು ಮಹಿಳೆ ಮದುವೆ ಆಗಿದ್ದರೆ ಇದುವರೆಗೂ ಯಾಕೆ ಸಾಕ್ಷ್ಯಾಧಾರ ಸಲ್ಲಿಸಿಲ್ಲ ಎಂದು ವಕೀಲರು ಪ್ರಶ್ನಿಸಿದ್ದಾರೆ.

ಏನಿದು ಸ್ಯಾಂಟ್ರೋ ರವಿ ಪ್ರಕರಣ?

ಪ್ರಸ್ತುತ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಕೆ.ಎಸ್.ಮಂಜುನಾಥ ಅಲಿಯಾಸ್ ಸ್ಯಾಂಟ್ರೋ ರವಿ ವಿರುದ್ಧ ಅನೇಕ ಆರೋಪಗಳಿವೆ. ಇವುಗಳಲ್ಲಿ ಮಾಂಸದಂಧೆ, ದಶಕಗಳ ಕಾಲ ವೇಶ್ಯಾವಾಟಿಕೆ ನಡೆಸುತ್ತಿದ್ದುದು ಮತ್ತು ಇದ್ದಕ್ಕಿದ್ದಂತೆ ಪೊಲೀಸ್ ಇಲಾಖೆಯ ವರ್ಗಾವಣೆ ದಂಧೆಯಲ್ಲಿ ಶಾಮೀಲಾಗಿರುವುದೂ ಸೇರಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:04 pm, Mon, 16 January 23

ಸ್ನೇಹಿತರೊಂದಿಗೆ ಸೇರಿ ತಂದೆಯನ್ನೇ ಕೊಂದ ಮಗ: ಪ್ರಕರಣದ ಅಸಲಿಯತ್ತು ಇಲ್ಲಿದೆ
ಸ್ನೇಹಿತರೊಂದಿಗೆ ಸೇರಿ ತಂದೆಯನ್ನೇ ಕೊಂದ ಮಗ: ಪ್ರಕರಣದ ಅಸಲಿಯತ್ತು ಇಲ್ಲಿದೆ
ಹಿಂದೊಮ್ಮೆ ಪಾಕಿಸ್ತಾನ ಫೈರ್ ಮಾಡಿದ ಮಿಸೈಲ್ 5 ವರ್ಷದ ನಂತರ ಸಿಡಿದಿತ್ತು!
ಹಿಂದೊಮ್ಮೆ ಪಾಕಿಸ್ತಾನ ಫೈರ್ ಮಾಡಿದ ಮಿಸೈಲ್ 5 ವರ್ಷದ ನಂತರ ಸಿಡಿದಿತ್ತು!
ಆಡಿದ ಮಾತಿಗೆ ಕ್ಷಮೆ ಯಾಚಿಸಿದ ಮಧ್ಯಪ್ರದೇಶದ ಮಂತ್ರಿ ವಿಜಯ್ ಶಾ
ಆಡಿದ ಮಾತಿಗೆ ಕ್ಷಮೆ ಯಾಚಿಸಿದ ಮಧ್ಯಪ್ರದೇಶದ ಮಂತ್ರಿ ವಿಜಯ್ ಶಾ
ಒಪ್ಪಿಕೊಂಡಷ್ಟು ಅನುದಾನವನ್ನು ಕೇಂದ್ರ ಬಿಡುಗಡೆ ಮಾಡಬೇಕು: ಸಿದ್ದರಾಮಯ್ಯ
ಒಪ್ಪಿಕೊಂಡಷ್ಟು ಅನುದಾನವನ್ನು ಕೇಂದ್ರ ಬಿಡುಗಡೆ ಮಾಡಬೇಕು: ಸಿದ್ದರಾಮಯ್ಯ
ರಾಮನ ಹಾಡು ಹಾಡಿ ಮಗುವ ಮಲಗಿಸಿದ ನಟಿ ಹರಿಪ್ರಿಯಾ, ವಿಡಿಯೋ ನೋಡಿ
ರಾಮನ ಹಾಡು ಹಾಡಿ ಮಗುವ ಮಲಗಿಸಿದ ನಟಿ ಹರಿಪ್ರಿಯಾ, ವಿಡಿಯೋ ನೋಡಿ
ಸಿಂದಗಿ ಡಿಪೋದಲ್ಲಿ ಡೀಸೆಲ್​​ ಸಮಸ್ಯೆ, ನಿಂತಲ್ಲೇ ನಿಂತ ಬಸ್​ಗಳು..!
ಸಿಂದಗಿ ಡಿಪೋದಲ್ಲಿ ಡೀಸೆಲ್​​ ಸಮಸ್ಯೆ, ನಿಂತಲ್ಲೇ ನಿಂತ ಬಸ್​ಗಳು..!
ರೌಡಿಶೀಟರ್ ಎಂದ ಮಾತ್ರಕ್ಕೆ ಎಲ್ಲರೂ ರೌಡಿಶೀಟರ್​​ಗಲ್ಲ: ಸಿಟಿ ರವಿ
ರೌಡಿಶೀಟರ್ ಎಂದ ಮಾತ್ರಕ್ಕೆ ಎಲ್ಲರೂ ರೌಡಿಶೀಟರ್​​ಗಲ್ಲ: ಸಿಟಿ ರವಿ
ಅನೀಸುದ್ದೀನ್ ಹೆಸರಿನ ವ್ಯಕ್ತಿಯಿಂದ ಎಕ್ಸ್ ಹ್ಯಾಂಡಲ್​ನಲ್ಲಿ ಪೋಸ್ಟ್​
ಅನೀಸುದ್ದೀನ್ ಹೆಸರಿನ ವ್ಯಕ್ತಿಯಿಂದ ಎಕ್ಸ್ ಹ್ಯಾಂಡಲ್​ನಲ್ಲಿ ಪೋಸ್ಟ್​
ಭಾರತದ ಷರತ್ತುಗಳನ್ನು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ: ಯದುವೀರ್
ಭಾರತದ ಷರತ್ತುಗಳನ್ನು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ: ಯದುವೀರ್
ಮೈಸೂರು ಕ್ರಿಕೆಟ್ ಸ್ಟೇಡಿಯಂ ಬಗ್ಗೆ ಸಂಸದ ಯದುವೀರ್ ಮಹತ್ವದ ಮಾಹಿತಿ
ಮೈಸೂರು ಕ್ರಿಕೆಟ್ ಸ್ಟೇಡಿಯಂ ಬಗ್ಗೆ ಸಂಸದ ಯದುವೀರ್ ಮಹತ್ವದ ಮಾಹಿತಿ