ಶಶಿಕಲಾಗೆ ಉಸಿರಾಟದ ಸಮಸ್ಯೆ; ಬೌರಿಂಗ್​ ಆಸ್ಪತ್ರೆಗೆ ದಾಖಲು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 10, 2021 | 3:08 PM

ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಶಶಿಕಲಾ ಅವರನ್ನು ಬೌರಿಂಗ್ ಆಸ್ಪತ್ರೆಗೆ ಕರೆತರಲಾಗಿದೆ. ಇಸಿಜಿ ಪೂರ್ಣಗೊಂಡ ಮೇಲೆ ಅವರಿಗೆ ಯಾವ ಸಮಸ್ಯೆ ಇದೆ ಎನ್ನುವ ಸರಿಯಾದ ಚಿತ್ರಣ ಸಿಗಲಿದೆ.

ಶಶಿಕಲಾಗೆ ಉಸಿರಾಟದ ಸಮಸ್ಯೆ; ಬೌರಿಂಗ್​ ಆಸ್ಪತ್ರೆಗೆ ದಾಖಲು
ಶಶಿಕಲಾ
Follow us on

ಬೆಂಗಳೂರು: ಮೂರು ವಾರಗಳಲ್ಲಿ ಬಿಡುಗಡೆಯಾಗಲಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಆಪ್ತೆ ಶಶಿಕಲಾ ಅವರಿಗೆ ಮಂಗಳವಾರ ಸಂಜೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಪ್ರಾಥಮಿಕವಾಗಿ ಪರಪ್ಪನ ಅಗ್ರಹಾರದ ಬಂಧಿಖಾನೆಯಲ್ಲಿರುವ ವೈದ್ಯರ ತಂಡ ಚಿಕಿತ್ಸೆ ನೀಡಿತ್ತು. ಆದರೂ, ಸಮಸ್ಯೆ ಪರಿಹಾರವಾಗದ ಕಾರಣ ಅವರನ್ನು ಇಂದು ನಗರದ ಬೌರಿಂಗ್​ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಅವರನ್ನು ಇಲ್ಲಿಗೆ ಕರೆತರಲಾಗಿದೆ. ಇಸಿಜಿ ಪೂರ್ಣಗೊಂಡ ಮೇಲೆ ಅವರಿಗೆ ಯಾವ ಸಮಸ್ಯೆ ಇದೆ ಎನ್ನುವ ಸರಿಯಾದ ಚಿತ್ರಣ ಸಿಗಲಿದೆ ಎಂದು ಬೌರಿಂಗ್​ ಆಸ್ಪತ್ರೆಯ ವೈದ್ಯರು ಆಂಗ್ಲ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಶಶಿಕಲಾಗೆ ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ಹೀಗಾಗಿ, 2017ರ ಫೆಬ್ರವರಿ 7ರಂದು ಅವರು ಜೈಲಿಗೆ ತೆರಳಿದ್ದರು. ಶಶಿಕಲಾ ಇದೇ ಫೆಬ್ರವರಿ ತಿಂಗಳಲ್ಲಿ ಬಿಡುಗಡೆ ಆಗಲಿದ್ದಾರೆ. ತಮಿಳುನಾಡು ಚುನಾವಣೆಗೂ ಮೊದಲೇ ಅವರು ರಿಲೀಸ್​ ಆಗುತ್ತಿರುವುದು ಬಹಳ ಮಹತ್ವ ಪಡೆದುಕೊಂಡಿದೆ.

ಶಶಿಕಲಾನ್ನ ಮತ್ತೆ AIADMK ಪಕ್ಷಕ್ಕೆ ಸೇರಿಸಿಕೊಳ್ಳುವ ಮಾತೇ ಇಲ್ಲ: ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಸ್ಪಷ್ಟನೆ

Published On - 7:18 pm, Wed, 20 January 21